ಬಿಹಾರ ಪರಿಷತ್ ಚುನಾವಣೆ: ಒಂದು ಸ್ಥಾನ ಕಳೆದುಕೊಂಡ ಜೆಡಿಯು

ಪಟ್ನಾ, ನವೆಂಬರ್ 14: ಕಳೆದ ತಿಂಗಳು ನಡೆದ ಬಿಹಾರ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಯು ಒಂದು ಸ್ಥಾನವನ್ನು ಕಳೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿ ಎದುರು ಜೆಡಿಯು ಸೋಲು ಕಂಡಿದ್ದು, ಇನ್ನೆರಡು ಸ್ಥಾನಗಳನ್ನು ಉಳಿಸಿಕೊಂಡಿದೆ. ಇನ್ನೊಂದೆಡೆ ಬಿಜೆಪಿ, ಸಿಪಿಐ ಮತ್ತು ಕಾಂಗ್ರೆಸ್ ಪಕ್ಷಗಳು ತಮಗೆ ಸೇರಿದ್ದ ಒಟ್ಟು ಐದು ಸ್ಥಾನಗಳನ್ನು ಮರಳಿ ಪಡೆದುಕೊಂಡಿವೆ.

ಪಟ್ನಾ, ಕೋಶಿ, ದರ್ಭಾಂಗಾ ಮತ್ತು ತಿರ್ಹುತ್‌ಗಳಲ್ಲಿನ ಪದವೀಧರ ಕ್ಷೇತ್ರಗಳಲ್ಲಿ ಹಾಗೂ ಪಟ್ನಾ, ದರ್ಭಾಂಗಾ, ತಿರ್ಹುತ್ ಮತ್ತು ಸರನ್‌ನಲ್ಲಿನ ಶಿಕ್ಷಕರ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಪ್ರಾರಂಭವಾಗಿ ಶುಕ್ರವಾರ ತಡರಾತ್ರಿ ಮುಕ್ತಾಯಗೊಂಡಿದೆ.

ಮೇ ತಿಂಗಳಿನಲ್ಲಿ ತೆರವುಗೊಂಡ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಕೊರೊನಾ ವೈರಸ್ ಸೋಂಕಿನ ತೀವ್ರತೆ ಕಾರಣದಿಂದ ಮುಂದೂಡಲಾಗಿತ್ತು. ಅಕ್ಟೋಬರ್ 22ರಂದು ಚುನಾವಣೆ ನಡೆದಿತ್ತು.

JDU Lost One Contituency In Bihar Council Polls: BJP, CPI And Congress Retain Their Seats

ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಜೆಡಿಯು, ದರ್ಭಾಂಗಾ ಶಿಕ್ಷಕರ ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಸರ್ವೇಶ್ ಕುಮಾರ್ ಅವರ ಎದುರು ಕಳೆದುಕೊಂಡಿದೆ. ಇಲ್ಲಿ ಚಲಾವಣೆಗೊಂಡ 22,549 ಮತಗಳಲ್ಲಿ 15,595 ಮತಗಳು ಸರ್ವೇಶ್ ಕುಮಾರ್ ಅವರ ಪಾಲಾಗಿದ್ದವು ಎಂದು ಚುನಾವಣಾ ಆಯೋಗ ತಿಳಿಸಿದೆ.

ಜೆಡಿಯು ಅಭ್ಯರ್ಥಿಯಾಗಿದ್ದ ಪಕ್ಷದ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಅಶೋಕ್ ಚೌಧರಿ ಅವರ ಆಪ್ತ ದಿಲೀಪ್ ಕುಮಾರ್ ಚೌಧರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಜೆಡಿಯು ಅಭ್ಯರ್ಥಿಗಳಾದ ನೀರಜ್ ಕುಮಾರ್ ಮತ್ತು ದೇವೇಶ್ ಚಂದ್ರ ಠಾಕೂರ್ ಅವರು ಪಟ್ನಾ ಪದವೀಧರ ಮತ್ತು ತಿರ್ಹುತ್ ಪದವೀಧರ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ನೀರಜ್ ಕುಮಾರ್ ಅವರು ನಿತೀಶ್ ಸರ್ಕಾರದಲ್ಲಿ ಮಾಹಿತಿ ಸಾರ್ವಜನಿಕ ಸಂಬಂಧ ಇಲಾಖೆಯ ಸಚಿವರಾಗಿದ್ದಾರೆ. ಅಶೋಕ್ ಕುಮಾರ್ ಕಟ್ಟಡ ನಿರ್ಮಾಣ ಸಚಿವರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾದ ಎನ್‌ಕೆ ಯಾದವ್ ಮತ್ತು ನವಾಲ್ ಕಿಶೋರ್ ಯಾದವ್ ಅವರು ಕೋಶಿ ಪದವೀಧರ ಮತ್ತು ಪಟ್ನಾ ಶಿಕ್ಷಕರ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ಸಿಪಿಐ ಅಭ್ಯರ್ಥಿಗಳಾದ ಸಂಜಯ್ ಕುಮಾರ್ ಸಿಂಗ್ ಮತ್ತು ಕೇದಾರ್ ನಾಥ್ ಪಾಂಡೆ ಅವರು ತಿರ್ಹುತ್ ಶಿಕ್ಷಕರ ಕ್ಷೇತ್ರ ಮತ್ತು ಸರಣ್ ಶಿಕ್ಷಕರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮದನ್ ಮೋಹನ್ ಝಾ ದರ್ಭಾಂಗಾ ಶಿಕ್ಷಕರ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+