• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರ ಸಾವು: 111 ಮಂದಿ ಸಂಬಂಧಿಕರಿಗೆ ಕೊರೊನಾ ಪಾಸಿಟಿವ್

|
Google Oneindia Kannada News

ಪಾಟ್ನಾ, ಜುಲೈ 1: ಬಿಹಾರದಲ್ಲಿ ನಡೆದ ಮದುವೆ ದುಃಖದಲ್ಲಿ ಅಂತ್ಯ ಕಂಡಿದೆ. ವರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದ 111 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ 350 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವರ ಪಾಟ್ನಾದ ಪಾಲಿಗಂಜ್ ಊರಿನವನಾಗಿದ್ದಾನೆ. ಗುರುಗ್ರಾಮದಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮದುವೆ ಸಮಯದಲ್ಲಿ ಆತನ ಆರೋಗ್ಯ ಅಷ್ಟೊಂದು ಸರಿ ಇರಲಿಲ್ಲ.

ಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕುಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕು

ಆತನಿಗೆ ಪಾಟ್ನಾ ಆಸ್ಪತ್ರೆಯಲ್ಲಿ ಅತಿಸಾರಕ್ಕೆ ಚಿಕಿತ್ಸೆ ನೀಡಲಾಗಿತ್ತು, ಬಳಿಕ ಮಾತ್ರೆಯನ್ನು ಸೇವಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನೆಯವರು ಒತ್ತಡ ಹಾಕಿದ್ದರು. ವರ ಮೃತಪಟ್ಟು ಆತನ ಅಂತ್ಯ ಸಂಸ್ಕಾರವೇ ಮುಗಿದರು ಕುಟುಂಬದವರಿಗೆ ಕೊರೊನಾ ಟೆಸ್ಟ್ ಮಾಡಿಸಿರಲಿಲ್ಲ.

ಬಳಿಕ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಜೂನ್ 24-26 ರವರೆಗೆ ವೈದ್ಯಕೀಯ ತಪಾಸಣೆ ಶಿಬಿರ ನಡೆಸಿ, ಎಲ್ಲರನ್ನೂ ಹೋಮ್ ಐಸೊಲೇಷನ್‌ ಅಲ್ಲಿ ಇರಿಸಲಾಗಿದೆ.ಮದುವೆಯಲ್ಲಿ 50 ಕ್ಕಿಂತ ಹೆಚ್ಚು ಜನರನ್ನು ಆಮಂತ್ರಿಸಿದ್ದಕ್ಕಾಗಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ನಗರದಲ್ಲಿ ಇನ್ನು ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಿಟಿ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಧರಿಸುವುದು, ಶುಚಿತ್ವ, ಸಾಮಾಜಿಕ ಅಂತರ ಪ್ರಮುಖವಾಗಿದೆ.ಮದುವೆಯಲ್ಲಿ 50ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ, ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಮಾತ್ರ ತೆರಳಬಹುದಾಗಿದೆ. ಬಿಹಾರದಲ್ಲಿ 9744 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 62 ಮಂದಿ ಮೃತಪಟ್ಟಿದ್ದಾರೆ. 7,544 ಮಂದಿ ಗುಣಮುಖರಾಗಿದ್ದಾರೆ.

English summary
A wedding in Bihar has turned into a tragic virus spreader with the bridegroom dead and more than 100 guests positive for COVID-19. Samples from the groom, who died a day after the June 15 wedding, could not be tested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X