• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ: ಚುನಾವಣೆಗೂ ಮುನ್ನ ಅಕ್ರಮ ಗನ್ ಫ್ಯಾಕ್ಟರಿ ಬಂದ್

|

ಪಾಟ್ನಾ, ಅ.4: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ದಿನಾಂಅಕ್ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜ್ಯದೆಲ್ಲೆಡೆ ಅಕ್ರಮ ಶಸ್ತ್ರಾಸ್ತ್ರ, ಮದ್ಯ, ನೋಟು, ಡ್ರಗ್ಸ್ ಪೂರೈಕೆ ಬಗ್ಗೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಬಿಹಾರದ ಮುಂಗೇರ್ ಜಿಲ್ಲೆಯಲ್ಲಿದ್ದ ಅಕ್ರಮ ಗನ್ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂಗೇರಿ ಜಿಲ್ಲೆಯ ಮುಧೇರಿ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಇರುವ ಬಗ್ಗೆ ಸುಳಿವು ಸಿಕ್ಕ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಹವೇಲಿ ಖರಗ್ ಪುರ್ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಕಾರ್ಖಾನೆಯಲ್ಲಿಬಂದೂಕು, ಗನ್, ಗನ್ ಪೌಡರ್, ಶಸ್ತ್ರಾಸ್ತ್ರ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಶೇಖರಿಸಿಡಲಾಗಿತ್ತು ಎಂದು ಎಸ್ಪಿ ಲಿಪಿ ಸಿಂಗ್ ಹೇಳಿದ್ದಾರೆ.

ಕಾರ್ಖಾನೆಯಲ್ಲಿ ಜಪ್ತಿ ಮಾಡಲಾದ ಸಾಮಾಗ್ರಿಗಳ ಪೈಕಿ 10 ದೇಶಿ ಪಿಸ್ತೂಲ್, ಮೂವರು ರೈಫಲ್ಸ್, 12 ಮ್ಯಾಗಜೀನ್ ಸಿಕ್ಕಿದೆ ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹವೇಲಿ ಖರಗ್ ಪುರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಲಿಪಿ ಸಿಂಗ್ ತಿಳಿಸಿದರು.

ದಾಳಿ ಸಂದರ್ಭದಲ್ಲಿ ಕಾರ್ಖಾನೆಯಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸೌರವ್ ರಾವ್, ಸೌರವ್ ಸೋದರ ಸುಷ್ಮಿತ್ ಹಾಗೂ ಅವರಿಬ್ಬರ ತಂದೆ ಸುಧೀರ್ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕುಟುಂಬದವರು ಅಕ್ರಮ ಗನ್, ಬಂದೂಕುಗಳನ್ನು ಚುನಾವಣೆ ಸಂದರ್ಭದಲ್ಲಿ ಹಂಚಲು ಮುಂದಾಗಿದ್ದರು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳಲ್ಲೂ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

English summary
Bihar Police have busted an illegal gun manufacturing factory and arrested three of a family during a raid in Bihar's Munger district, a senior officer said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X