ಸೀಮಾಂಚಲ ಎಕ್ಸ್ ಪ್ರೆಸ್ ದುರಂತ: ಸಹಾಯವಾಣಿಗಳಿಗೆ ಕರೆ ಮಾಡಿ
ಹಾಜಿಪುರ್(ಬಿಹಾರ), ಫೆಬ್ರವರಿ 03: ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ಭಾನುವಾರ(ಫೆ. 03) ಮುಂಜಾನೆ ಹಳಿ ತಪ್ಪಿದೆ. ಬಿಹಾರದ ಹಾಜಿಪುರ ಸಮೀಪ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ 6 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿಗೆ ತೀವ್ರಗಾಯಗಳಾಗಿವೆ.
12487 ಸೀಮಾಂಚಲ್ ಎಕ್ಸ್ ಪ್ರೆಸ್ ನ 9 ಬೋಗಿಗಳು ಹಳಿ ತಪ್ಪಿದ್ದು, ಮೂರು ಸ್ಲೀಪರ್ ಎಸ್ 8, ಎಸ್ 9, ಎಸ್ 10, ಒಂದು ಸಾಮಾನ್ಯ ಬೋಗಿ, ಒಂದು ಎಸಿ ಬಿ3 ಬೋಗಿಗೆ ಹೆಚ್ಚಿನ ಹಾನಿಯಾಗಿದೆದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ರೈಲ್ವೆ ಇಲಾಖೆಯು ಸಂತ್ರಸ್ತರಿಗಾಗಿ ಹಲವಾರು ಸಹಾಯವಾಣಿ ಸಂಖ್ಯೆಗಳು ನೀಡಿದೆ ಎಂದು ಕೇಂದ್ರ ರೈಲ್ವೆ ವಕ್ತಾರ ರಾಜೇಶ್ ಕುಮಾರ್ ಹೇಳಿದ್ದಾರೆ.
Sonpur 06158221645
Hajipur 06224272230
Barauni 06279232222
ಸಹಾದಾಯಿ ಬುಜುರ್ಗ್ ನ ಜೋಗ್ಬನಿ- ಆನಂದ್ ವಿಹಾರ್ ಟರ್ಮಿನಲ್ ಬಳಿ ಬೆಳಗ್ಗೆ 3.58ರ ಸುಮಾರಿಗೆ ಭಾರಿ ಸದ್ದು ಕೇಳಿ ಬಂದಿತು.
#Seemanchal Express derailment: Indian Railways has issued helpline numbers at Patna-06122202290, 06122202291, 06122202292, 06122213234. pic.twitter.com/3RVYLW6VsS
— ANI (@ANI) February 3, 2019
ಘಟನೆ ಬಗ್ಗೆ ಮೊದಲಿಗೆ ಸೋನ್ ಪುರ್ ವಿಭಾಗಕ್ಕೆ ಸೂಚನೆ ಸಿಕ್ಕಿದ್ದು, ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕದಳ, ವೈದ್ಯರ ತಂಡ ತೆರಳಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.












Click it and Unblock the Notifications