• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ್ಯಾಯ ಬೇಡಿ ಪಂಚಾಯ್ತಿಗೆ ಬಂದ್ರೆ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಕಾದಿತ್ತು ಶಾಕ್

|

ಗಯಾ, ಆಗಸ್ಟ್ 27: ಒಂದು ಊರಿನ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗಿದೆ ಎಂದಾಕ್ಷಣವೇ ಎಂಥವರಿಗೂ ಕರುಳು ಕಿತ್ತುಬರುವಷ್ಟು ನೋವಾಗುತ್ತದೆ.

ಹೇಗಾದರೂ ಮಾಡಿ ಪಾಪಿಗಳಿಗೆ ಶಿಕ್ಷೆ ಕೊಡಿಸಲೇ ಬೇಕು ಎಂದು ಊರ ಜನರು ಒಗ್ಗಟ್ಟಾಗಿ ಹೋಗುವುದುಂಟು ಆದರೆ ಈ ಬಾಲಕಿ ವಿಚಾರದಲ್ಲಿ ಇದು ಸುಳ್ಳಾಗಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿಗೆ 10 ವರ್ಷ ಕಠಿಣ ಸಜೆ ನೀಡಿದ ಮಂಗಳೂರು ನ್ಯಾಯಾಲಯ

ಊರಿನ ಹೆಣ್ಣು ಮಕ್ಕಳ ರಕ್ಷಣೆ ಬದಲು ಶಿಕ್ಷೆ ನೀಡಿ ಪಂಚಾಯ್ತಿ ಟೀಕೆಗೆ ಗುರಿಯಾಗಿದೆ.

ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಆರು ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆದರೆ ಆರೋಪಿಗಳಿಗೆ ಶಿಕ್ಷೆ ಕೊಡುವ ಬದಲು ಅತ್ಯಾಚಾರ ಸಂತ್ರಸ್ತೆಗೆ ತಲೆ ಬೋಳಿಸಿ ಊರ ತುಂಬಾ ಮೆರವಣಿಗೆ ಮಾಡಿದ್ದಾರೆ.

ಆಗಸ್ಟ್ 14ರಂದು ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದರು. ಆಕೆ ಅಲ್ಲಿಂದ ಓಡಲು ಯತ್ನಿಸಿದಾಗ ಆಕೆ ಮೂರ್ಛೆ ಹೋಗುವವರೆಗೂ ದುರುಳರು ಅತ್ಯಾಚಾರವೆಸಗಿದ್ದರು. ಬಳಿಕ ಯಾರೋ ಆಕೆಯ ಕುಟುಂಬದವರಿಗೆ ಮಾಹಿತಿ ನೀಡಿದ್ದರು.ಆಕೆಯನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು.

ಆದರೆ ಆ ಅಪರಾಧಿಗಳ ಪರವಾಗಿದ್ದ ಪಂಚಾಯ್ತಿ ಸಂತ್ರಸ್ತೆಯ ತಲೆ ಬೋಳಿಸಿ ಮೆರವಣಿಗೆ ಮಾಡುವಂತೆ ತೀರ್ಪು ನೀಡಿದೆ. ಸೋಮವಾರ ಬಾಲಕಿಯು ಪೊಲೀಸರಿಗೆ ದೂರು ನೀಡಿದ್ದಾಳೆ. ಪಂಚರು ಸೇರಿ ಆಕೆಗೆ ಶಿಕ್ಷೆ ಕೊಡುವಂತೆ ನಿರ್ಧಾರ ತೆಗೆದುಕೊಂಡಿದ್ದರು.

English summary
Bihar Girl Raped and Paraded With Head Shaved Where Is The Justice.he was paraded through her village as a punishment by the panchayat in Gaya district of Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X