0000000000 ಇದು ಕೊರೊನಾ ಪರೀಕ್ಷೆ ಮಾಡಿಸಿಕೊಂಡವರ ಫೋನ್ ನಂಬರ್; ಬಿಹಾರದಲ್ಲಿ ನಕಲಿ ದಾಖಲೆ
ಪಾಟ್ನಾ, ಫೆಬ್ರುವರಿ 12: ಕೊರೊನಾ ಪರೀಕ್ಷೆ ನಡೆಸದೇ ನಕಲಿ ಕೋವಿಡ್ ಪರೀಕ್ಷಾ ವರದಿಗಳನ್ನು ನೀಡಿದ ಸಂಗತಿ ಬಿಹಾರದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಚೆಗೆ ಬೆಳಕಿಗೆ ಬಂದಿತ್ತು. ಅಕ್ರಮವಾಗಿ ನೆಗೆಟಿವ್ ವರದಿ ನೀಡಿದ ಕುರಿತು ಸುದ್ದಿಯಾಗಿತ್ತು. ಇದೀಗ ಕೊರೊನಾ ಪರೀಕ್ಷೆ ದಾಖಲೆಗಳಲ್ಲಿಯೂ ಯಾವುದೇ ಶಿಷ್ಟಾಚಾರ ಪಾಲಿಸದೇ ಕಾಟಾಚಾರಕ್ಕೆ ಎಂಬಂತೆ ದಾಖಲೆಗಳನ್ನು ತುಂಬಿರುವುದು ಕಂಡುಬಂದಿದೆ.
ಬಿಹಾರದ ಸುಮಾರು ಆರು ಪ್ರಾಥಮಿಕ ಕೇಂದ್ರಗಳಲ್ಲಿ, ಕೊರೊನಾ ಪರೀಕ್ಷೆ ವಿವರದ ದಾಖಲಾತಿಯಲ್ಲಿ ಮೊಬೈಲ್ ನಂಬರ್ ಜಾಗದಲ್ಲಿ 0000000000 ಹಾಕಲಾಗಿದೆ. ಜಮುಯಿ ಬರ್ಹಾತ್ ಪ್ರಾಥಮಿಕ ಕೇಂದ್ರವೊಂದರಲ್ಲೇ, ಪರೀಕ್ಷೆ ಮಾಡಿಸಿಕೊಂಡ 48 ಮಂದಿಯಲ್ಲಿ 28 ಮಂದಿಯ ಮೊಬೈಲ್ ನಂಬರ್ ಜಾಗದಲ್ಲಿ ಈ ರೀತಿ ಸೊನ್ನೆಗಳನ್ನು ನಮೂದಿಸಿರುವುದು ಕಂಡುಬಂದಿದೆ. ಇದು ಜನವರಿ 16ರ ವರದಿಯಾದರೆ, ಜನವರಿ 25ರಂದು 83 ಮಂದಿಯಲ್ಲಿ 46 ಮಂದಿಯ ಮೊಬೈಲ್ ನಂಬರ್ ಜಾಗದಲ್ಲಿ ಸೊನ್ನೆಗಳನ್ನು ಬಳಸಲಾಗಿದೆ.
ಇನ್ನೊಂದು ಕೇಂದ್ರದಲ್ಲಿ 16ನೇ ತಾರೀಕು 150 ಮಂದಿಯಲ್ಲಿ 73 ಜನರ ವರದಿಯ ವಿವರದ ಚಾರ್ಟ್ ನಲ್ಲಿ ಈ ಸೊನ್ನೆಗಳನ್ನು ಬಳಸಲಾಗಿದೆ. ಬಿಹಾರದ ಆರು ಆರೋಗ್ಯ ಕೇಂದ್ರಗಳಲ್ಲಿ "ಇಂಡಿಯನ್ ಎಕ್ಸ್‌ಪ್ರೆಸ್" ಜನವರಿ ದಾಖಲೆಗಳನ್ನು ಪರಿಶೀಲಿಸಿದ್ದು, 885 ಜನರ ದಾಖಲೆ ದೊರೆತಿದೆ. ಅದರಲ್ಲಿ ಬಹುಪಾಲು ಮೊಬೈಲ್ ನಂಬರ್ ಗಳ ಜಾಗದಲ್ಲಿ ಸೊನ್ನೆಗಳನ್ನು ಬಳಸಲಾಗಿದೆ. ಅಷ್ಟೇ ಅಲ್ಲದೇ ಒಂದೇ ಮೊಬೈಲ್ ನಂಬರ್ ಅನ್ನು ಹತ್ತಾರು ಕಡೆ ನಮೂದಿಸಲಾಗಿದೆ. ಕೊರೊನಾ ಪರೀಕ್ಷೆಯನ್ನೇ ನಡೆಸದ, ಇದಕ್ಕೆ ಸಂಬಂಧ ಪಡದ ಹಲವು ನಂಬರ್ ಗಳನ್ನು ದಾಖಲೆಯಲ್ಲಿ ಬಳಸಿಕೊಳ್ಳಲಾಗಿದೆ.

ಈ ರೀತಿಯ ನಕಲಿ ದಾಖಲೆಗಳು, ಕೊರೊನಾ ಪರೀಕ್ಷೆ ನಡೆಸಿರುವುದೇ ಸುಳ್ಳು ಎಂಬುದನ್ನು ಸಾಕ್ಷೀಕರಿಸುತ್ತಿವೆ.
ಸುಳ್ಳು ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ನಾವು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಪರಿಶೀಲನೆ ನಡೆಸಿದ್ದೇವೆ ಎಂದು ಜಮುಯಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications