ಬಿಹಾರದಲ್ಲಿ ನಿಗೂಢ ಕಾಯಿಲೆ: ಮೃತ ಮಕ್ಕಳ ಸಂಖ್ಯೆ 47 ಕ್ಕೆ ಏರಿಕೆ
ಪಾಟ್ನಾ, ಜೂನ್ 12: ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 47 ಕ್ಕೇರಿದ್ದು, ಕ್ಕಳ ಸಾವಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತಿರುವುದೇ ಕಾರಣ ಎಂದು ಸರ್ಕಾರ ಹೇಳಿದೆ.
ಆದರೆ ಮೆದುಳಿನ ಉರಿಯೂತ(Acute Encephalitis Syndrome)ದ ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಸರ್ಕಾರ ಮಾತ್ರ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, 15 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಮುಜಾಫರ್ಪುರದಲ್ಲಿ ಹೈಪೋಗ್ಲೆಸಿಮಿಯಾ ಕಾಯಿಲೆ ಆಗಾಗ ಕಂಡುಬರುತ್ತಿತ್ತು. ಆದರೆ AES ಸಮಸ್ಯೆ ಕಂಡುಬಂದಿರಲಿಲ್ಲ.

ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ರೋಗ ಪತ್ತೆಯಾದ 24 ಗಂಟೆಗಳಲ್ಲೇ 36 ಮಕ್ಕಳು ತೀರಿಕೊಂಡಿದ್ದರು.












Click it and Unblock the Notifications