ಬಿಹಾರದಲ್ಲಿ ಮೆದುಳು ಜ್ವರದಿಂದ ಮೃತಪಟ್ಟ ಮಕ್ಕಳ ಸಂಖ್ಯೆ 96ಕ್ಕೆ ಏರಿಕೆ
ಪಾಟ್ನಾ, ಜೂನ್ 17: ಅಕ್ಯೂಟ್ ಎನ್ಸೆಪಾಲಿಟೀಸ್ ಸಿಂಡ್ರೋಮ್ ಎಂಬ ಮಹಾಮಾರಿಗೆ ಬಿಹಾರದಲ್ಲಿ 96 ಮುಗ್ಧ ಮಕ್ಕಳು ಬಲಿಯಾಗಿದ್ದಾರೆ.
ಈ ರೋಗವು ರಕ್ತದಲ್ಲಿ ಸಕ್ಕರೆ ಅಂಶವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಬಿಡುತ್ತದೆ. ಭಾನುವಾರವಷ್ಟೇ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಎದುರೇ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಳು.
ಈ ರೋಗವು ಅತಿ ಹೆಚ್ಚು ಬಿಸಿಲಿನಿಂದ ಕೂಡ ಬರುವಂಥದ್ದಾಗಿದೆ. ಬಿಹಾರದಲ್ಲಿ ಬಿಸಿ ಗಾಳಿಗೆ ಸತ್ತವರ ಸಂಖ್ಯೆ 61ಕ್ಕೇರಿದೆ. ಬಿಸಿಲು ಕೂಡ ಅನೇಕ ರೋಗಗಳನ್ನು ಹೊತ್ತು ತರುತ್ತಿದೆ. ಇದಕ್ಕೆ ಬಿಹಾರಿಗಳು 'ಚಮ್ಕಿ' ಎಂದು ಕರೆಯುತ್ತಾರೆ.

1-10 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲ ಆರಂಭವಾಗುವವರೆಗೂ ಈ ರೋಗ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ ಸಹಾಯಧನ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.












Click it and Unblock the Notifications