ಆಸ್ಪತ್ರೆಯಲ್ಲಿ ಆರೋಗ್ಯ ಸಚಿವರೆದುರೇ ಕೊನೆಯುಸಿರೆಳೆದ ಬಾಲಕಿ

ಪಟ್ನಾ, ಜೂನ್ 16: ಬಿಹಾರದ ಆಸ್ಪತ್ರೆಗೆ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲೇ ಅವರ ಕಣ್ಮುಂದೆಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಬಿಹಾರದಲ್ಲಿ ಕಳೆದ ಒಂದು ತಿಂಗಳಿನಿಂದ ಎನ್ಸೆಪಾಲಿರಟಿಸ್ ಸಿಂಡ್ರೋಂ ಎನ್ನುವ ಮೆದುಳು ಜ್ವರದಿಂದ 82 ಮಂದಿ ಮೃತಪಟ್ಟಿದ್ದಾರೆ. ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಐದು ವರ್ಷದ ಬಾಲಕಿ ಸಚಿವರೆದುರೇ ಮೃತಪಟ್ಟಿದ್ದಾಳೆ. ಸಚಿವ ಹರ್ಷವರ್ಧನ್ ರಾಜಕೀಯಕ್ಕೆ ಬರುವ ಮುನ್ನ ವೃತ್ತಿಯಲ್ಲಿ ವೈದ್ಯರಾಗಿದ್ದರು.

ಬಿಹಾರದ ಶ್ರೀಕೃಷ್ಣ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದರು. ರೋಗದ ಕುರಿತು ಅದರ ಚಿಕಿತ್ಸೆ ಕುರಿತು ವೈದ್ಯರ ತಂಡವನ್ನು ಭೇಟಿ ಮಾಡಲು ಆಸ್ಪತ್ರೆಗೆ ಆಗಮಿಸಿದ್ದರು.

Child died during Bihar health minister visit hospital

ವೈರಲ್ ಇನ್‌ಫೆಕ್ಷನ್ ಇಂದ ಬರುವ ಈ ರೋಗ ನರವನ್ನೇ ದುರ್ಬಲಗೊಳಿಸಿಬಿಡುತ್ತದೆ. ಈ ಎಇಎಸ್‌ನಿಂದ ನಿಪಾಹ್, ಝಿಕಾ ವೈರಸ್‌ ಆಗಿ ಕೂಡ ಪರಿವರ್ತನೆಯಾಗಬಹುದು. ಆರೆ ಈ ವರ್ಷ ಅತ್ಯಂತ ಕೆಟ್ಟ ವರ್ಷವಾಗಿ ಮಾರ್ಪಟ್ಟಿದೆ.

Child died during Bihar health minister visit hospital

ಶ್ರೀಕೃಷ್ಣ ಮೆಡಿಕಲ್ ಕಾಲೇಜಿನಲ್ಲಿ ಇದುವರೆಗೆ 62 ಮಂದಿ ಮೃತಪಟ್ಟಿದ್ದಾರೆ. ಕೇಜ್ರಿವಾಲ್ ಚಿಲ್ಡ್ರನ್ ಹೋಮ್‌ನಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ 61 ಮಂದಿ ದಾಖಲಾಗಿದ್ದಾರೆ. 93 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+