ಕೊವಿಡ್ ರೋಗಿ ಸತ್ತು ಒಂದು 1 ದಿನ ಆಯ್ತು, ಇನ್ನೂ ವಾರ್ಡಿನಲ್ಲೇ ಇದೆ ಶವ

ಪಾಟ್ನಾ, ಜುಲೈ 20: ಕೊವಿಡ್ 19 ರೋಗದಿಂದ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಒಂದು ದಿನದಿಂದ ವಾರ್ಡ್‌ನಲ್ಲಿಯೇ ಇರಿಸಿರುವ ಘಟನೆ ಪಾಟ್ನಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಪಾಟ್ನಾ ನಳಂದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಫೋಟೊದಲ್ಲಿ ನೀವು ಗಮನಿಸಿದಂತೆ ಎಲ್ಲಾ ಕೊರೊನಾ ಸೋಂಕಿತರ ಮಧ್ಯದಲ್ಲಿ ಶವವನ್ನು ಇರಿಸಲಾಗಿದೆ.

ಭಾನುವಾರದಿಂದ ಆ ಶವ ಅಲ್ಲಿಯೇ ಇದೆ. ಅಲ್ಲಿರುವ ಇತರೆ ಕೊರೊನಾ ಸೋಂಕಿತರ ಕುಟುಂಬದವರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Body Of COVID-19 Victim Left In Hospital Ward For A Day

ಆದರೆ ಆಸ್ಪತ್ರೆ ಮಾತ್ರ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ, ಅಲ್ಲಿಂದ ಶವವನ್ನೂ ಸಾಗಿಸಿಲ್ಲ.ಜಿಲ್ಲಾಡಳಿತವು ಕೂಡ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಲ್ಲಿ ಹಗಲು ಹೊತ್ತಿನಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಿದರೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಾರೆ.

ಶನಿವಾರ ಬಿಹಾರದಲ್ಲಿ 1700 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 10 ಸೋಂಕಿತರಿದ್ದಾರೆ, ಇದುವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಇಂತಹ ವಿಡಿಯೋಗಳು ಹರಿದಾಡುತ್ತಿವೆ.

ರಾಜ್ಯ ಸರ್ಕಾರ ನಡೆಸುವ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇದೆ ನಿತ್ಯವೂ ಸಾಕಷ್ಟು ದೂರುಗಳು ಕೇಳಿಬರುತ್ತಿದೆ. ಕಠಿಹಾರದಲ್ಲಿ ಆಕ್ಸಿಜನ್ ಸಿಲಿಂಡರ್ ನೀಡದ ಕಾರಣ ರೋಗಿ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+