ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಾಜ್ಯದ ಶಿಕ್ಷಕರ ವೇತನ ಶೇಕಡಾ 15 ರಷ್ಟು ಹೆಚ್ಚಳ

|
Google Oneindia Kannada News

ಪಾಟ್ನಾ, ಆಗಸ್ಟ್‌ 18: ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಭರ್ಜರಿಯಾದ ಕೊಡುಗೆ ನೀಡಿದ್ದಾರೆ. ಉದ್ಯೋಗಿಗಳ ಶಿಕ್ಷಕರ ಸೇವಾ ಸ್ಥಿತಿ ನಿಯಮಗಳನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ, ಬಿಹಾರ ರಾಜ್ಯದ ಶಿಕ್ಷಕರ ದೀರ್ಘಾವಧಿಯ ಬಾಕಿ ಇರುವ ಬೇಡಿಕೆಗಳನ್ನು ಅಂಗೀಕರಿಸಲಾಗಿದೆ.

ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಶಿಕ್ಷಕರ ವೇತನವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಚುನಾವಣೆಗೆ ಮುನ್ನ ನಿತೀಶ್ ಸರ್ಕಾರದ ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸಲಾಗಿದೆ.

ಸಂಬಳ ಹೆಚ್ಚಿಸದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆ ಡ್ರಾಮಾಸಂಬಳ ಹೆಚ್ಚಿಸದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ದರೋಡೆ ಡ್ರಾಮಾ

"ಮೂಲ ವೇತನದಲ್ಲಿ 15 ಪ್ರತಿಶತದಷ್ಟು ಹೆಚ್ಚಳ ಮಾಡಲಾಗುವುದು. 2021 ರ ಏಪ್ರಿಲ್ 1 ರಂದು ಪಂಚಾಯತಿ ರಾಜ್ ಸಂಸ್ಥೆಗಳು ಮತ್ತು ನಾಗರಿಕ ಸಂಸ್ಥೆಗಳಲ್ಲಿ ಪೋಸ್ಟ್ ಮಾಡಿದ ಶಿಕ್ಷಕರು ಮತ್ತು ಮುಖ್ಯ ಗ್ರಂಥಪಾಲಕರಿಗೆ ಪಾವತಿಸಲಾಗುವುದು. ಇದರಿಂದ ವಾರ್ಷಿಕ ಸರ್ಕಾರದ ಮೇಲೆ 815 ಕೋಟಿ ಹೆಚ್ಚಿನ ಹೊರೆಯಾಗಲಿದೆ'' ಎಂದು ಬಿಹಾರ ಸರ್ಕಾರ ಹೇಳಿದೆ.

Bihar Teachers Salary Increase By 15 Percent: State Govt

2021 ಏಪ್ರಿಲ್ 1 ರಂದು ಪಾವತಿಸಬೇಕಾದ ಮೂಲ ವೇತನದಲ್ಲಿ ಶೇ 15 ರಷ್ಟು ಹೆಚ್ಚಳ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

English summary
The Bihar government has announced a salary hike for teachers and chief librarians posted in Panchayati Raj institutions and civic bodies institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X