ಬಿಹಾರ: ಮೋದಿ ಪ್ರಚಾರ ನಡೆಸಿದ್ದ ಕಡೆಗಳಲ್ಲಿ ಎನ್‌ಡಿಎಗೆ ಭಾರಿ ಮುನ್ನಡೆ

ಪಾಟ್ನಾ, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ.

ನರೇಂದ್ರ ಮೋದಿಯವರು ಸಹಾರಾ, ಗಯಾ, ಭಾಗಲ್‌ಪುರ್, ದರ್ಭಾಂಗಾ, ಮುಜಾಫರ್‌ಪುರ್, ಪಾಟ್ನಾ, ಛಾಪ್ರಾ, ಈಸ್ಟ್ ಚಂಪಾರಣ್, ಸಮಸ್ತಿಪುರ್, ವೆಸ್ಟ್ ಚಂಪಾರಣ್, ಫಾರ್ಬೆಸ್‌ಗಂಜ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ದರ್ಭಾಂಗಾದಲ್ಲಿ 10 ಮತಗಳಲ್ಲಿ 9 ಮತಗಳನ್ನು ಎನ್‌ಡಿಎ ಪಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

Bihar : NDA Performing Well In Seats Where PM Modi Campaigned

ಭಾಗಲ್ಪುರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಮುಂದಿದೆ. ಮುಜಫರ್‌ಪುರದಲ್ಲಿ, ಬಿಜೆಪಿ ಮುಂದಿದೆ ಮತ್ತು ಪಾಟ್ನಾದ ಹೆಚ್ಚಿನ ಸ್ಥಾನಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಹಾರಾದಲ್ಲೂ ಬಿಜೆಪಿ ಆರ್‌ಜೆಡಿಗಿಂತ ಮುಂದಿದೆ.

ಭಾರತದ ಚುನಾವಣಾ ಆಯೋಗದ ವರದಿ ಪ್ರಕಾರ ಬಿಹಾರದಲ್ಲಿ ಎನ್‌ಡಿಎ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನದಲ್ಲಿದೆ. 73ರಲ್ಲಿ ಬಿಜೆಪಿ ಮುಂದಿದ್ದರೆ, ಜೆಡಿಯು 47 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ.

ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಎನ್‌ಡಿಎ ಮೈತ್ರಿ ಪಕ್ಷವು 107ಸ್ಥಾನದಲ್ಲಿ ಮುಂದಿದೆ. 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 122 ಆಗಿದೆ.

ಹೆಚ್ಚಿನ ಸಂಖ್ಯೆಯ ಇವಿಎಂಗಳು ಇರುವುದರಿಂದ ಎಣಿಕೆ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿನ ಕಾರಣ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೀಗೆ ಮಾಡಲಾಗಿದ್ದು, ರಾತ್ರಿವರೆಗೂ ಎಣಿಕೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+