ಬಿಹಾರ: ಎನ್ ಡಿಎ ಮುನ್ನಡೆ ಶಾಶ್ವತವಲ್ಲ ಎಂದ ಸಂಸದ ಮನೋಜ್ ಝಾ!

ಪಾಟ್ನಾ, ನವೆಂಬರ್.10: ಬಿಹಾರ ವಿಧಾನಸಭಾ ಚುನಾವಣೆಯ ಆರಂಭಿಕ ಫಲಿತಾಂಶ ಮತ್ತು ಟ್ರೆಂಡ್ ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮುನ್ನಡೆಯನ್ನು ಕಾಯ್ದುಕೊಂಡಿರುವುದು ನಿಜ. ಕೆಲವು ಗಂಟೆಗಳ ಬಳಿಕ ನಾವು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಎಂದು ಆರ್ ಜೆಡಿ ಸಂಸದ ಮನೋಜ್ ಝಾ ಹೇಳಿದ್ದಾರೆ.

Recommended Video

      BiharElectionResult : ತಮ್ಮನ ಪರವಾಗಿ ಟ್ವೀಟ್ ಮಾಡಿದ ತೇಜ್ | Oneindia Kannada

      ಬಿಹಾರ ವಿಧಾನಸಭಾ ಫಲಿತಾಂಶದ ಚಿತ್ರಣವು ಮುಂದಿನ ಕೆಲವೇ ಗಂಟೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಹಾಘಟಬಂಧನ್ ಮತ್ತು ಎನ್ ಡಿಎ ಮೈತ್ರಿಕೂಟದ ನಡುವಿನ ಅಂತರ ಕೂಡಾ ಅಷ್ಟಾಗಿಲ್ಲ ಎಂದು ಮನೋಜ್ ಝಾ ಹೇಳಿದ್ದಾರೆ.

      ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ಅಂಕಿ ಅಂಶಗಳ ಪ್ರಕಾರ, ಎನ್ ಡಿಎ ಮೈತ್ರಿಕೂಟ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73, ಜೆಡಿಯು 49, ವಿಐಪಿ 5 ಮತ್ತು ಹಿಂದೂಸ್ಥಾನ್ ಅವಂ ಮೋರ್ಚಾ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಪೈಕಿ ಆರ್ ಜೆಡಿ 67, ಕಾಂಗ್ರೆಸ್ 20, ಎಡಪಕ್ಷ 18, ಬಿಎಸ್ ಪಿ 2, ಎಐಎಂಐಎಂ 2, ಎಲ್ ಜೆಪಿ 2, ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.

      Bihar Election Results 2020: Now NDA Is Leading, But Wait And See Few Hours: RJD MP Manoj Jha


      ಬಿಹಾರ ಮತಗಳ ಅಂತರ ಕಡಿಮೆ:

      ಬಿಹಾರದ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಮತಗಳ ಅಂತರ ತೀರಾ ಕಡಿಮೆಯಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಹಾಗೂ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಅದಲು ಬದಲು ಆಗುವಂತಿದೆ. ಬಿಹಾರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಕೇವಲ 200 ಮತಗಳ ಅಂತರವಿದೆ. 49 ಕ್ಷೇತ್ರಗಳಲ್ಲಿ ಪರಸ್ಪರ ಅಭ್ಯರ್ಥಿಗಳ ನಡುವೆ ಕೇವಲ 1000 ಮತಗಳ ಅಂತರವಿದೆ.

      ರಾಜ್ಯದ 23 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ 500ಕ್ಕೂ ಕಡಿಮೆ ಮತಗಳ ಅಂತರ ಕಂಡು ಬಂದಿದೆ. 80 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಕೇವಲ 2000 ಮತಗಳ ಅಂತರವಿದೆ. 123 ಕಡೆಗಳಲ್ಲಿ ಅಭ್ಯರ್ಥಿಗಳ ನಡುವೆ 3000 ಹಾಗೂ 166 ಕ್ಷೇತ್ರಗಳಲ್ಲಿ ಮತಗಳ ಅಂತರ ಕೇವಲ 5000 ಇದೆ ಎಂದು ಬಿಹಾರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+