Bihar Election Results 2020 Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ
2020ರ ವಿಧಾನಸಭಾ ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತ ಎಣಿಕೆಗೆ 38 ಜಿಲ್ಲೆಗಳಲ್ಲಿ 55 ಮತಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ.

ಕೊವಿಡ್-19 ನಿಯಂತ್ರಣ ಕ್ರಮ: ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆ ನಡೆಸುವುದಕ್ಕೆ ಚುನಾವಣಾ ಆಯೋಗವು ಮಾರ್ಗಸೂಚಿ ಹೊರಡಿಸಿತ್ತು. ಒಂದು ಮತಗಟ್ಟೆಯಲ್ಲಿ 1600 ರಿಂದ 1000 ಮತದಾರರಿಗೆ ಹಕ್ಕು ಚಲಾಯಿಸುವುದಕ್ಕಷ್ಟೇ ಅನುಮತಿ ನೀಡಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೋಸ್ಟರ್ ಕಾರ್ಡ್ ಮೂಲಕ ಮತದಾನ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ನ್ನು ಸ್ಯಾನಿಟೈಸ್ ಮಾಡುವುದು. ಕಡ್ಡಾಯವಾಗಿ ಮಾಸ್ಕ್ ಧರಿಸವುದು, ಥರ್ಮಲ್ ಸ್ಕ್ಯಾನಿಂಗ್ ಮತ್ತು ಸೋಪು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತದಾನದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಕಡ್ಡಾಯಗೊಳಿಸಲಾಗಿತ್ತು.
ಶೇಕಡವಾರು ಮತ ಗಳಿಕೆ: ಆರ್‌ಜೆಡಿ ಟಾಪ್, ಜೆಡಿಯು 3ನೇ ಸ್ಥಾನ
ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿ, ನವೆಂಬರ್ 11ರಂದು ಸುರ್ಯೋದಯಕ್ಕೂ ಮುನ್ನ ಅಂತಿಮ ಫಲಿತಾಂಶ ಹೊರಬಂದಿದೆ.
ಬಿಹಾರ ಫಲಿತಾಂಶ: ನಿತೀಶ್ ಕುಮಾರ್‌ಗೆ ಕೈಕೊಟ್ಟ ಮಹಿಳಾ ಮತದಾರರು
2015 ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್‌ಗೆ ಟ್ರಂಪ್‌ಕಾರ್ಡ್ ಆಗಿದ್ದ ಮಹಿಳಾ ಮತದಾರರು ಈ ಬಾರಿ ಕೈಕೊಟ್ಟಂತಿದೆ.
ಬಿಹಾರದಲ್ಲಿ ಮೋದಿ ಅಲೆ ಇಲ್ಲ, ಮಹಾಘಟಬಂಧನ್ ಇನ್ನಷ್ಟು ಸಶಕ್ತ:ದೀಪಾಂಕರ್
ಬಿಹಾರದಲ್ಲಿ ಯಾವುದೇ ಮೋದಿ ಅಲೆ ಇಲ್ಲ, ನಾವು ಗೆಲ್ಲದಿದ್ದರೂ ನಿತೀಶ್ ಸರ್ಕಾರದ ವಿರೋಧದ ಆಕ್ರೋಶ ಕಾಣಿಸುತ್ತಿದೆ ಎಂದು ಸಿಪಿಐ(ಎಂಎಲ್) ಬಣ್ಣಿಸಿದೆ.
ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್‌ಡಿಎ
ಸುದೀರ್ಘ ಸಮಯದವರೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕೊನೆಗೂ ಮುಕ್ತಾಯವಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಡಿ ದಾಟುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.
ಒಟ್ಟು 236 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಇನ್ನು ಉಳಿದ ಏಳು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಯು ಮತ್ತು ಒಂದು ಕಡೆ ಆರ್‌ಜೆಡಿ ಮುನ್ನಡೆ ಪಡೆದಿವೆ.
ಇದುವರೆಗೂ 233 ಕ್ಷೇತ್ರಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಇನ್ನು 10 ಕ್ಷೇತ್ರಗಳ ಫಲಿತಾಂಶ ಬಾಕಿ ಇದೆ. ಇದರಲ್ಲಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಆರ್‌ಜೆಡಿ, ಎರಡರಲ್ಲಿ ಜೆಡಿಯು ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ.
229 ಸೀಟುಗಳಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಎನ್‌ಡಿಎ ಮೈತ್ರಿಕೂಟ ಒಟ್ಟು 116 ಸೀಟುಗಳಲ್ಲಿ ಜಯಗಳಿಸಿದೆ. ಮಹಾಘಟಬಂಧನ 105ರಲ್ಲಿ ಗೆದ್ದಿದೆ.
ಇನ್ನೂ 66 ಸುತ್ತುಗಳ ಎಣಿಕೆ ಮಾತ್ರ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಮುಗಿಯಲಿದೆ ಎಂಬ ಭರವಸೆ ಹೊಂದಿದ್ದೇವೆ. ಇನ್ನು ಒಂದು ಗಂಟೆಯಲ್ಲಿ ಅಂತಿಮ ಬಿಹಾರ ಲೆಕ್ಕಾಚಾರವನ್ನು ಪ್ರಕಟಿಸಲಿದ್ದೇವೆ- ಚುನಾವಣಾ ಆಯೋಗ
ಜನರು ಪ್ರಧಾನಿ ಮೋದಿ ಮೇಲೆ ತಮ್ಮ ನಂಬಿಕೆಯನ್ನು ಪುನಃ ಪ್ರದರ್ಶಿಸಿದ್ದಾರೆ. ಇದು ಅವರ ಗೆಲುವು. ಅಧಿಕಾರಕ್ಕಾಗಿ ಎಲ್‌ಜೆಪಿ ತಲೆಬಾಗದೆ ಇರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ಮತ ಹಂಚಿಕೆ ಏರಿಕೆಯಾಗಿದೆ- ಚಿರಾಗ್ ಪಾಸ್ವಾನ್
Top Fight - ಬಕ್ಸಾರ್
ಸಂಜಯ್ ಕುಮಾರ್ ತಿವಾರಿ
(INC)
Won
ಪರಶುರಾಂ ಚೌಬೆ
(BJP)
Lost
Top Fight - ಬಿಸ್ಫಿ
ಹರಿಭೂಷಣ್ ಠಾಕೂರ್
(BJP)
Won
ಫೈಯಾಜ್ ಅಹ್ಮದ್
(RJD)
Lost
Top Fight - ಭಾಗಲ್ಪುರ್
ಅಜಿತ್ ಶರ್ಮಾ
(INC)
Won
ರೋಹಿತ್ ಪಾಂಡೆ
(BJP)
Lost
Top Fight - ಬಾರಹರಿಯಾ
ಬಚ್ಚಾ ಪಾಂಡೆ
(RJD)
Won
ಶ್ಯಾಂ ಮಹದ್ದೂರ್ ಸಿಂಗ್
(JDU)
Lost
Top Fight - ಸುಪಾಲ್
ಬಿಜೇಂದ್ರ ಪ್ರಸಾದ್ ಯಾದವ್
(JDU)
Won
ಮಿನ್ನಾವುತುಲ್ಲಾ ರಹಮಾನಿ
(INC)
Lost
Top Fight - ದರ್ಭಂಗ
ಸಂಜಯ್ ಸರೋಗಿ
(BJP)
Won
ಅಮರನಾಥ್ ಗಾಮಿ
(RJD)
Lost
Top Fight - ದರ್ಭಂಗಾ ಗ್ರಾಮೀಣ
ಲಲಿತ್ ಕುಮಾರ್ ಯಾದವ್
(RJD)
Won
ಫರಾಜ್ ಫಾತ್ಮಿ
(JDU)
Lost
Top Fight - ಗೈಘಾಟ್
ನಿರಂಜನ್ ರಾಯ್
(RJD)
Won
ಮಹೇಶ್ವರ ಪ್ರಸಾದ್ ಯಾದವ್
(JDU)
Lost
Top Fight - ಬೋಚನ್
ಮುಸಾಫಿರ್ ಪಾಸ್ವಾನ್
(VIP)
Won
ರಮಾಯ್ ರಾಮ್
(RJD)
Lost
ಪ್ರತಿ ವರ್ಗದ ಜನರೂ ಎನ್‌ಡಿಎ ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮಂತ್ರದ ಮೇಲೆನಂಬಿಕೆ ಇರಿಸಿದ್ದಾರೆ. ಬಿಹಾರದ ಪ್ರತಿ ಭಾಗದಲ್ಲಿಯೂ ಅಭಿವೃದ್ಧಿಯ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
'ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
'ಹತ್ತಾರು ವಿಧಾನಸಭೆ ಕ್ಷೇತ್ರಗಳಲ್ಲಿ ಟ್ಯಾಂಪರಿಂಗ್ ಮಾಡಲಾಗಿದೆ. ಅವರು ಜನರ ತೀರ್ಪನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟು ಕೀಳು ಮಟ್ಟದ ಉದ್ದೇಶದ ಪ್ರಯತ್ನಗಳ ನಡುವೆಯೂ ನಾವು ಸರ್ಕಾರ ರಚಿಸಲಿದ್ದೇವೆ' ಎಂದು ಆರ್‌ಜೆಡಿ ಮುಖಂಡ ಮನೋಜ್ ಝಾ ಹೇಳಿದ್ದಾರೆ. 'ನಮ್ಮ ಅಹವಾಲುಗಳನ್ನು ಪರಿಶೀಲಿಸುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ನಾವು ಚುನಾವಣಾ ಆಯೋಗವನ್ನು ನಂಬುತ್ತೇವೆ, ಆದರೆ ಜಿಲ್ಲಾ ಆಡಳಿತದ ಮೇಲೆ ನಮಗೆ ವಿಶ್ವಾಸವಿಲ್ಲ' ಎಂದು ಅವರು ತಿಳಿಸಿದ್ದಾರೆ.
Top Fight - ದಾನಾಪುರ
ರಿತ್ ಲಾಲ್ ರೇ
(RJD)
Won
ಆಶಾ ದೇವಿ
(BJP)
Lost
183 ಕ್ಷೇತ್ರಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಎನ್‌ಡಿಎ 90, ಮಹಾಘಟಬಂಧನ 86 ಸೀಟುಗಳಲ್ಲಿ ಗೆದ್ದಿವೆ.
Top Fight - ದಿಘಾ
ಸಂಜೀವ್ ಚೌರಾಸಿಯಾ
(BJP)
Won
ಶಶಿ ಯಾದವ್
(CPI(ML))
Lost
Top Fight - ಕತಿಹಾರ್
ತಾರ್ ಕಿಶೋರ್ ಪ್ರಸಾದ್
(BJP)
Won
ರಾಮ್ ಪ್ರಕಾಶ್ ಮಹತೋ
(RJD)
Lost
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications