• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣಾ ಫಲಿತಾಂಶ: 24 ಕ್ಷೇತ್ರಗಳಲ್ಲಿ 'ವಿಜಯಲಕ್ಷ್ಮಿ' ಚಂಚಲೆ

|

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕತೆಯನ್ನು ಹುಟ್ಟುಹಾಕುತ್ತಿದ್ದು, ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

   Bihar Election : ಊಹೆ ಮಾಡಿರಲಿಲ್ಲ ಎಂದ ತೇಜಸ್ವಿ!! | Oneindia Kannada

   ಚುನಾವಣಾ ಆಯೋಗದ ವೆಬ್‌ಸೈಟ್‌ನ ಡೇಟಾ ಬಿಡುಗಡೆ ಮಾಡಿದ್ದು, ಸಂಜೆ 7 ಗಂಟೆಯ ಪ್ರವೃತ್ತಿಯ ಪ್ರಕಾರ 1,000 ಗಿಂತ ಕಡಿಮೆ ಮತಗಳ ಅಂತರದೊಂದಿಗೆ 13 ಸ್ಥಾನಗಳಲ್ಲಿ ಹಾವು-ಏಣಿ ಆಟ ಮುಂದುವರೆದಿದೆ. ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ಕಾದು ನೋಡಬೇಕಿದೆ.

   ಬಿಹಾರದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ: ಶರದ್ ಪವಾರ್

   ಸದ್ಯದ ಟ್ರೆಂಡ್ ಗಳಲ್ಲಿನ 200 ಕ್ಕಿಂತ ಕಡಿಮೆ ಮತಗಳ ಅಂತರ ಹೊಂದಿರುವ 5 ಕ್ಷೇತ್ರಗಳಿವೆ. ಇಲ್ಲಿಯೂ ಕೂಡಾ ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ಸೆಣಸಾಟ ಏರ್ಪಟ್ಟಿದೆ.

   ಇನ್ನು 500 ಕ್ಕಿಂತ ಕಡಿಮೆ ಮತಗಳ ಅಂತರ ಹೊಂದಿರುವ 8 ಕ್ಷೇತ್ರಗಳಲ್ಲಿ ಬಿರುಸಿನ ಪೈಪೋಟಿ ನಡೆಯುತ್ತಿದೆ. ಉಭಯ ಮೈತ್ರಿಕೂಟದ ಅಭ್ಯರ್ಥಿಗಳಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯದ್ದಾಳೆ ಎಂಬುದು ಇನ್ನು ನಿಗೂಢವಾಗಿದೆ.

   ಅದೇ ರೀತಿ 2000 ಕ್ಕಿಂತ ಕಡಿಮೆ ಮತಗಳ ಅಂತರ ಹೊಂದಿರುವ 24 ಕ್ಷೇತ್ರಗಳಿದ್ದು, 3000 ಕ್ಕಿಂತ ಕಡಿಮೆ ಮತಗಳ ಅಂತರ ಹೊಂದಿರುವ 45 ಕ್ಷೇತ್ರಗಳಿವೆ. ಇದೇ ವೇಳೆ 5000 ಕ್ಕಿಂತ ಕಡಿಮೆ ಮತಗಳ ಅಂತರ ಹೊಂದಿರುವ 61 ಕ್ಷೇತ್ರಗಳಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ಕಾಣಬಹುದು.

   English summary
   The outcome of the Bihar assembly election Results is Thrills and there is fierce rivalry between the NDA and the Mahaghatbandhan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X