ಕಂದಕಕ್ಕೆ ಬಿದ್ದ ಬಸ್: 6 ಸಾವು, 39 ಮಂದಿಗೆ ಗಂಭೀರ ಗಾಯ
ಗರ್ವಾ, ಜೂನ್ 25: ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಬಿದ್ದಿದ್ದು ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದು, 39 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‌ನ ಗರ್ವಾ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ರಕ್ಷಣಾ ಕಾರ್ಯ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಪಾಟ್ನಾದಿಂದ ಎನ್‌ಎಚ್-2 ಮಾರ್ಗದಲ್ಲಿ ಬರುತ್ತಿರುವಾಗ ಜಾರ್ಖಂಡ್‌ನ ಹಜಾರಿಭಾಗ್‌ನಲ್ಲಿ ಟ್ರಕ್ ಒಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಹನ್ನೊಂದು ಮಂದಿ ಮೃತಪಟ್ಟಿದ್ದರು.

22 ಮಂದಿ ಗಾಯಗೊಂಡಿದ್ದರು. ಜಾರ್ಖಂಡ್‌ನ ಈ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.












Click it and Unblock the Notifications