ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

Recommended Video

      Indian Space Research Organisation : ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ | Oneindia Kannada

      ಪ್ಯಾರಿಸ್, ಡಿಸೆಂಬರ್ 05: ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬಲ್ಲ ಜಿಸ್ಯಾಟ್-11 ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

      ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ 3.23 ಕ್ಕೆ(ಭಾರತೀಯ ಕಾಲಮಾನ) ಉಡಾವಣೆ ಮಾಡಲಾಯಿತು. ಉಪಗ್ರಹ ಉಡಾವಣೆಯ ನೇರ ಪ್ರಸಾರವನ್ನು ದೂರದರ್ಶನ ಬಿತ್ತರಿಸಿತ್ತು..

      ಇದು ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂಬ ಖ್ಯಾತಿ ಗಳಿಸಿದೆ.

      "ಜಿಸ್ಯಾಟ್ -11 ಉಪಗ್ರಹವು ಭಾರತದ ಶ್ರೀಮಂತ ಆಸ್ತಿ. ಇದು ದೇಶದ ದೂರ ದೂರದ ಪ್ರದೇಶಗಳಲ್ಲೂ ಸೆಕೆಂಡಿಗೆ 16 ಜಿಬಿ ಡೆಟಾ ಲಿಂಕ್ ಸರ್ವಿಸ್ ನೀಡಲು ಸಮರ್ಥವಾಗಿದೆ" ಎಂದು ಇಸ್ರೋ ಅಧ್ಯಕ್ಷ ಶಿವನ್ ಹೆಮ್ಮೆ ವ್ಯಕ್ತಪಡಿಸಿದರು.

      ಭಾರತೀಯ ಅಂತರ್ಜಾಲ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಎಬ್ಬಿಸಲಿರುವ ಜಿ ಸ್ಯಾಟ್-11 ಉಪಯೋಗದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

      ಅತೀ ಭಾರದ ಉಪಗ್ರಹ

      ಇದುವರೆಗೆ ಉಡ್ಡಯನ ಮಾಡಲಾದ ಅತೀ ಭಾರದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಸ್ಯಾಟ್ -11 5870 ಕೆಜಿ ತೂಕವಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಿರ್ಮಿಸಿರುವ ಈ ಉಪಗ್ರಹವನ್ನು ಇಂದು ಫ್ರಾನ್ಸ್ ನಲ್ಲಿ ಉಡ್ಡಯನ ಮಾಡಲಾಗಿದೆ.

      ಉಪಯೋಗವೇನು?

      ಭಾರತೀಯ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸುವ ಉದ್ದೇಶವನ್ನು ಜಿಸ್ಯಾಟ್ 11 ಹೊಂದಿದೆ. ಸೆಕೆಂಡ್ ಗೆ 16 ಜಿಬಿ(ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಅಂತರ್ಜಾಲ ಸೌಲಭ್ಯ ನೀಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಜಿಸ್ಯಾಟ್ 11 ಉಡ್ಡಯನಕ್ಕಾಗಿ ಇಸ್ರೋಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

      ಮೂಲೆ ಮೂಲೆಗೂ ಇಂಟರ್ನೆಟ್

      ಜಿಸ್ಯಾಟ್ ನಿಂದಾಗಿ ಭಾರತದ ಮೂಲೆ ಮೂಲೆಯ ಹಳ್ಳಿಗಳೂ ಅಂತರ್ಜಾಲ ಸೌಲಭ್ಯ ಪಡೆಯಬಹುದಾಗಿದೆ. 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉಪಗ್ರಹ ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಲಿದೆ. ಕೇಂದ್ರದ ಡಿಜಿಟಲ್ ಇಂಡಿಯಾ ಅಭಿಯಾನದಡಿ ದೇಶದ ಮೂಲೆ ಮೂಲೆಗೂ ಅಂತರ್ಜಾಲ ಕಲ್ಪಿಸುವ ಉದ್ದೇಶಕ್ಕೆ ಇದು ಪೂರಕವಾಗಲಿದೆ.

      ವಾರದ ಹಿಂದೆ ನಭಕ್ಕೆ ಹಾರಿದ್ದ 31 ಉಪಗ್ರಹಗಳು

      ವಾರದ ಹಿಂದೆ ನಭಕ್ಕೆ ಹಾರಿದ್ದ 31 ಉಪಗ್ರಹಗಳು

      ನವೆಂಬರ್ 29 ರಂದು ಇಂಡಿಯನ್ ಅರ್ಥ್ ಮ್ಯಾಪಿಂಗ್ ಉಪಗ್ರಹ ಹಿಸಿಸ್(HysIS) ಮತ್ತು 8 ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ ಎಲ್ ವಿ(ಪೊಲಾರ್ ಸಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಇಸ್ರೋ ಉಡ್ಡಯನ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡ್ಡಯನ ಮಾಡಲಾಗಿದ್ದ ಈ ಉಪಗ್ರಹ ಭೂಮಿಯ ಹೊರಮೇಲ್ಮೈ ಅನ್ನು ಅಭ್ಯಸಿಸುವ ಉದ್ದೇಶ ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+