ಯುಪಿ ಸಿಎಂ ಯೋಗಿ ಆದಿತ್ಯನಾಥ್ ನನಗೆ ಸ್ಫೂರ್ತಿ; ಗೋವಾ ಸಿಎಂ ಪ್ರಮೋದ್ ಸಾವಂತ್

ಯುಪಿ ಸಿಎಂ ಯೋಗಿ ಆದಿತ್ಯನಾಥ್ ನನಗೆ ಸ್ಫೂರ್ತಿ; ಗೋವಾ ಸಿಎಂ ಪ್ರಮೋದ್ ಸಾವಂತ್
ಯೋಗಿ ಆದಿತ್ಯನಾಥ್ ನನಗೆ ಸ್ಫೂರ್ತಿ; ಪ್ರಮೋದ್ ಸಾವಂತ್

ಪಣಜಿ, ಫೆಬ್ರವರಿ 3: ಫೆಬ್ರವರಿ 14ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಲು ಕಣ್ಣಿಟ್ಟಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾರತದ ಮುಖ್ಯಮಂತ್ರಿಗಳಲ್ಲಿ "ಸ್ಫೂರ್ತಿದಾಯಕ' ವ್ಯಕ್ತಿ ಎಂದು ಆಯ್ಕೆ ಮಾಡಿಕೊಂಡಿದ್ದಾರೆ.

ಇಂಡಿಯಾ ಟುಡೇ ಆಯೋಜಿಸಿದ್ದ ರೌಂಡ್‌ಟೇಬಲ್ ಗೋವಾ ಸಮಾರಂಭದಲ್ಲಿ ಮಾತನಾಡಿದ ಪ್ರಮೋದ್ ಸಾವಂತ್, ""ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನನಗೆ ವಿಧಾನ ಮತ್ತು ಕಾರ್ಯಶೈಲಿಯೊಂದಿಗೆ ಸ್ಫೂರ್ತಿ ನೀಡುತ್ತಿದ್ದಾರೆ,'' ಎಂದು ಹೇಳಿದರು.

Uttar Pradesh CM Yogi Adityanath Inspired Me; Goa CM Pramod Sawant

"ಅವರು ತನ್ನ ಕಾರ್ಯಗಳನ್ನು ಸಾಧಿಸುವ ರೀತಿ, ಅವರು ಕೆಲಸ ಮಾಡುವ ಶೈಲಿಯು ತುಂಬಾ ಸ್ಪೂರ್ತಿದಾಯಕವಾಗಿದೆ. ಕೆಲಸದಲ್ಲಿ ಅವರ ಉತ್ಸಾಹ, ಅವರ ಶೈಲಿ ಸ್ಪೂರ್ತಿದಾಯಕವಾಗಿದ,'' ಎಂದು ಪ್ರಮೋದ್ ಸಾವಂತ್ ಗುರುವಾರ ಹೇಳಿದ್ದಾರೆ.

"ಬಿಜೆಪಿಗೆ ಯಾವುದೇ ಪಕ್ಷ ಅಥವಾ ಪಕ್ಷೇತರ ಶಾಸಕರ ಬೆಂಬಲ ಬೇಕು ಎಂದು ನಾನು ಭಾವಿಸುವುದಿಲ್ಲ. ನಾವೇ ಸ್ವಂತವಾಗಿ ಸರ್ಕಾರ ರಚಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗೋವಾದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ತರಲು ಜನರು ಸಿದ್ಧರಾಗಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದರು.

ಕಾಂಗ್ರೆಸ್‌ನಿಂದ ಶಾಸಕರನ್ನು ಆಮಿಷಕ್ಕೆ ಒಳಪಡಿಸುವ ಆರೋಪದ ಕುರಿತು ಮಾತನಾಡಿದ ಪ್ರಮೋದ್ ಸಾವಂತ್, "ಕಾಂಗ್ರೆಸ್ ತನ್ನ ಅಭ್ಯರ್ಥಿಗಳು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ದೇವರಿಗೆ ಪ್ರಮಾಣ ಮಾಡಿದೆ. ನಾಯಕರ ಮೇಲೆ ನಂಬಿಕೆ ಇಟ್ಟು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದೇವೆ ಎಂಬ ಕಾರಣಕ್ಕೆ ನಾವೇನೂ ಮಾಡಿಲ್ಲ," ಎಂದರು.

ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಆದರೆ ಅವರ ಮೇಲೆ ನಂಬಿಕೆ ಇಲ್ಲ, ನಾವು ಶಾಸಕರನ್ನು ಖರೀದಿಸುವುದಿಲ್ಲ ಆದರೆ ಸ್ಥಿರ ಸರ್ಕಾರಕ್ಕಾಗಿ ನಮ್ಮ ಬಳಿಗೆ ಬರುವವರನ್ನು ನಾವು ಸ್ವೀಕರಿಸುತ್ತೇವೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದರು.

Uttar Pradesh CM Yogi Adityanath Inspired Me; Goa CM Pramod Sawant

ಉತ್ಪಲ್ ಪರಿಕ್ಕರ್ ಕುರಿತು
ಮಾಜಿ ರಕ್ಷಣಾ ಸಚಿವ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಪಣಜಿ ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದಾರೆ. ಗೋವಾದಲ್ಲಿ "ದೊಡ್ಡ ನಾಯಕ' ಆಗಬೇಕೆಂಬ ಉತ್ಪಲ್ ಪರಿಕ್ಕರ್ ಅವರ ಮಹತ್ವಾಕಾಂಕ್ಷೆಯ ಕುರಿತು ಪ್ರಮೋದ್ ಸಾವಂತ್ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಅವರಿಗೆ ನಾಲ್ಕು ಸ್ಥಾನಗಳನ್ನು ಆಯ್ಕೆಗೆ ನೀಡಿದ್ದೇವು ಎಂದು ಅವರು ಹೇಳಿದರು. ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ದೊಡ್ಡ ನಾಯಕರಾಗಬಹುದಿತ್ತು.

ನಮ್ಮ ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ. ಯಾರಾದರೂ ದೊಡ್ಡ ನಾಯಕನಾಗಬೇಕು, ಎಂಎಲ್‌ಎ ಆಗಬೇಕು ಎಂದಾದರೆ, ಪಕ್ಷ ನೀಡಿದ ಸ್ಥಾನಗಳಲ್ಲಿ ಒಂದನ್ನು ಸ್ವೀಕರಿಸಬೇಕಿತ್ತು ಎಂದು ಕಿಡಿಕಾರಿದರು.

ಫೆಬ್ರವರಿ 14ರಂದು ಗೋವಾದ ಎಲ್ಲಾ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಂತರ ಬಹುತೇಕ ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+