ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ; ಬಿಜೆಪಿಗೆ ಬೆಂಬಲ ಘೋಷಿಸಿದ ಮೂವರು ಪಕ್ಷೇತರರು!

|
Google Oneindia Kannada News

ಪಣಜಿ, ಮಾರ್ಚ್ 10; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ. ಚುನಾವಣೆಯಲ್ಲಿ ಗೆದ್ದ ಮೂವರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದು, ಪಕ್ಷ ಸರ್ಕಾರ ರಚನೆ ಮಾಡಲಿದೆ.

40 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21. ಫೆಬ್ರವರಿ 14ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗುರುವಾರ ಮತ ಎಣಿಕೆ ನಡೆಯುತ್ತಿದೆ.

ಗೋವಾದಲ್ಲಿ ಮುಖ್ಯಮಂತ್ರಿ ಬದಲಾಯಿಸಲಿದೆ ಬಿಜೆಪಿ? ಗೋವಾದಲ್ಲಿ ಮುಖ್ಯಮಂತ್ರಿ ಬದಲಾಯಿಸಲಿದೆ ಬಿಜೆಪಿ?

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ, "ಚುನಾವಣೆ ಗೆಲುವಿಗೆ ಪಕ್ಷದ ಕಾರ್ಯಕರ್ತರು ಕಾರಣ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ" ಎಂದು ಹೇಳಿದರು.

ಗೋವಾ ಫಲಿತಾಂಶ; ದೆಹಲಿ, ಮುಂಬೈನಲ್ಲಿ ಸಿದ್ಧವಾಗುತ್ತಿದೆ ತಂತ್ರ! ಗೋವಾ ಫಲಿತಾಂಶ; ದೆಹಲಿ, ಮುಂಬೈನಲ್ಲಿ ಸಿದ್ಧವಾಗುತ್ತಿದೆ ತಂತ್ರ!

Three Independents Extended Support For BJP In Goa

ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಸಮಯ ಕೇಳಿದೆ. ರಾಜ್ಯಪಾಲರ ಬಳಿ ಸರ್ಕಾರ ರಚನೆ ಮಾಡಲು ಪಕ್ಷ ಹಕ್ಕು ಮಂಡಿಸಲಿದೆ. ಮೂವರು ಪಕ್ಷೇತರ ಶಾಸಕರು ಸಹ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಪಂಚರಾಜ್ಯ ಫಲಿತಾಂಶ: ರಾಜ್ಯ ಬಿಜೆಪಿಯಲ್ಲಿ ಸಂಭ್ರಮಾಚರಣೆಪಂಚರಾಜ್ಯ ಫಲಿತಾಂಶ: ರಾಜ್ಯ ಬಿಜೆಪಿಯಲ್ಲಿ ಸಂಭ್ರಮಾಚರಣೆ

ಬಿಕೋಲಿಮ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಕಾಂತ್ ಮತ್ತು ಕಾರ್ಟೈಮ್ ಕ್ಷೇತ್ರದ ಶಾಸಕ ಮಾನುಯೆಲ್ ವಾಝ್ ಮತ್ತು ಕರ್ಟೋರಿಮ್ ಕ್ಷೇತ್ರದ ಶಾಸಕ ಅಲೆಕ್ಸಿಯೊ ರೆಜಿನಾಲ್ಡೊ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

"ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ನಾವು ಎಂಜಿಪಿ ಮತ್ತು ಪಕ್ಷೇತರ ಶಾಸಕರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ" ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟು 12 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 7, ಕಾಂಗ್ರೆಸ್ 3, ಇಬ್ಬರು ಇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

English summary
Independent candidates Dr Chandrakant Shetye, Manuel Vaz and Alexio Reginaldo extend support for Bharatiya Janata Party in Goa. BJP will form the govt in Goa said Pramod Sawant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X