Get Updates
Get notified of breaking news, exclusive insights, and must-see stories!

ಸೋನಾಲಿ ಫೋಗಟ್ ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು

ಪಣಜಿ ಸೆಪ್ಟೆಂಬರ್ 12: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋನಾಲ್ ಫೋಗಟ್ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ನಿನ್ನೆ ಹಿಸಾರ್‌ನಲ್ಲಿ ಖಾಪ್ ಮಹಾಪಂಚಾಯತ್ (Khap Mahapanchayat) ನಡೆಸಲಾಯಿತು. ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟ ಆಕೆಯ ಇಬ್ಬರು ಸಹಚರರು ಸೋನಾಲಿ ಫೋಗಟ್‌ಗೆ ಬಲವಂತವಾಗಿ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ತನ್ನ ಟಿಕ್‌ಟಾಕ್ ವಿಡಿಯೊಗಳೊಂದಿಗೆ ಖ್ಯಾತಿಗೆ ಏರಿದ ಸೋನಾಲಿ ಫೋಗಟ್ 2019ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಆಗಿನ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ವಿರುದ್ಧ ಸೋತರು. ಅವರು 2020 ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.

Sonali Pogat case: Union Home Ministry recommends CBI probe

ಬಿಜೆಪಿ ನಾಯಕಿ ಹಾಗೂ ಟಿಕ್‌ಟಾಕ್ ತಾರೆ ಸೋನಾಲಿ ಪೋಗಾಟ್ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಜನರ ಬೇಡಿಕೆಯನ್ನು ಅನುಸರಿಸಿ, ವಿಶೇಷವಾಗಿ ಅವರ ಮಗಳ ಬೇಡಿಕೆಯನ್ನು ಅನುಸರಿಸಿ ತನಿಖೆಯನ್ನು ಇಂದು ಸಿಬಿಐಗೆ ಹಸ್ತಾಂತರಿಸುತ್ತಿದ್ದೇವೆ. ಹಸ್ತಾಂತರಕ್ಕಾಗಿ ನಾನು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ನಮ್ಮ ಪೊಲೀಸರನ್ನು ನಾವು ನಂಬುತ್ತೇವೆ ಮತ್ತು ಅವರು ಉತ್ತಮ ತನಿಖೆ ಮಾಡುತ್ತಿದ್ದಾರೆ. ಆದರೆ ಸೋನಾಲಿ ಪೋಗಟ್ ಪ್ರಕರಣ ಸಿಬಿಐಗೆ ಹಸ್ತಾಂತರಿಸುವುದು ಜನರ ಬೇಡಿಕೆಯಾಗಿದೆ'' ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಸದ್ಯ ಫೋಗಟ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಸಿಬಿಐಗೆ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋನಾಲಿ ಫೋಗಟ್ (42) ಅವರು ಆಗಸ್ಟ್ 23 ರಂದು ಉತ್ತರ ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದ ಮೇಲೆ ಮೊಂಡಾದ ಬಲದ ಗಾಯಗಳಿರುವುದು ಕಂಡು ಬಂದಿತ್ತು. ಇದು ಸಹಜ ಸಾವು ಅಲ್ಲ ಇದೊಂದು ಕೊಲೆ ಎಂದು ಸೋನಾಲಿ ಕುಟುಂಬಸ್ಥರು ಆರೋಪ ಮಾಡಿದ್ದರು. ಮರೋತ್ತರ ಪರೀಕ್ಷೆ ಹಾಗೂ ಕುಟುಂಬಸ್ಥರ ಆರೋಪದ ಮೇಲೆ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

Sonali Pogat case: Union Home Ministry recommends CBI probe

ತನ್ನ ಸಹಚರರೊಂದಿಗೆ ಕ್ಲಬ್‌ನಲ್ಲಿ ಸೋನಾಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲಿ ಇದು ಸೆರೆಯಾಗಿದೆ. ಹೀಗಾಗಿ ಪೊಲೀಸರು ಫೋಗಟ್‌ನ ಪಿಎ ಮತ್ತು ಅವನ ಸಹಚರನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಡ್ರಗ್ ಇತ್ಯಾದಿ ಆರೋಪಗಳತ್ತ ಸುತ್ತುವರಿಯುತ್ತಿದ್ದಂತೆ ಪ್ರಕರಣದ ಆಳವಾದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+