ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸೋನಾಲಿ ಫೋಗಾಟ್ ಪ್ರಕರಣ: ಸಿಬಿಐ ತನಿಖೆಗೆ ಶಿಫಾರಸು- ಗೋವಾ ಸಿಎಂ ಹೇಳಿಕೆ

|
Google Oneindia Kannada News

ಬಿಜೆಪಿ ನಾಯಕಿ ಹಾಗೂ ಟಿಕ್‌ಟಾಕ್ ತಾರೆ ಸೋನಾಲಿ ಫೋಗಾಟ್ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಸೋನಾಲಿ ಫೋಗಾಟ್ (42) ಅವರು ಆಗಸ್ಟ್ 23 ರಂದು ಉತ್ತರ ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದ ಮೇಲೆ ಮೊಂಡಾದ ಬಲದ ಗಾಯಗಳಿರುವುದು ಕಂಡು ಬಂದಿತ್ತು. ಇದು ಸಹಜ ಸಾವು ಅಲ್ಲ ಇದೊಂದು ಕೊಲೆ ಎಂದು ಸೋನಾಲಿ ಕುಟುಂಬಸ್ಥರು ಆರೋಪ ಮಾಡಿದ್ದರು. ಮರೋತ್ತರ ಪರೀಖ್ಷೆ ಹಾಗೂ ಕುಟುಂಬಸ್ಥರ ಆರೋಪದ ಮೇಲೆ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

Sonali Phogat case: CBI probe recommended- Goa CM statement

ತನ್ನ ಸಹಚರರೊಂದಿಗೆ ಕ್ಲಬ್‌ನಲ್ಲಿ ಸೋನಾಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇದು ಸೆರೆಯಾಗಿದೆ. ಹೀಗಾಗಿ ಪೊಲೀಸರು ಫೋಗಾಟ್ ನ ಪಿಎ ಮತ್ತು ಅವನ ಸಹಚರನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಡ್ರಗ್ಸ್ ಇತ್ಯಾದಿ ಆರೋಪಗಳತ್ತ ಸುತ್ತುವರಿಯುತ್ತಿದ್ದಂತೆ ಪ್ರಕರಣದ ಆಳವಾದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋನಾಲಿ ಫೋಗಾಟ್ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಜನರ ಬೇಡಿಕೆಯನ್ನು ಅನುಸರಿಸಿ, ವಿಶೇಷವಾಗಿ ಅವರ ಮಗಳ ಬೇಡಿಕೆಯನ್ನು ಅನುಸರಿಸಿ ತನಿಖೆಯನ್ನು ಇಂದು ಸಿಬಿಐಗೆ ಹಸ್ತಾಂತರಿಸುತ್ತಿದ್ದೇವೆ. ಹಸ್ತಾಂತರಕ್ಕಾಗಿ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ. ನಮ್ಮ ಪೊಲೀಸರನ್ನು ನಾವು ನಂಬುತ್ತೇವೆ ಮತ್ತು ಅವರು ಉತ್ತಮ ತನಿಖೆ ಮಾಡುತ್ತಿದ್ದಾರೆ. ಆದರೆ ಸೋನಾಲಿ ಪೋಗಟ್ ಪ್ರಕರಣ ಸಿಬಿಐಗೆ ಹಸ್ತಾಂತರಿಸುವುದು ಜನರ ಬೇಡಿಕೆಯಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

English summary
Goa Chief Minister Pramod Sawant said that the case of BJP leader and TikTok star Sonali Phogat's death has been recommended for CBI investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X