Get Updates
Get notified of breaking news, exclusive insights, and must-see stories!

ಪರಿಕ್ಕರ್ ಪತ್ನಿ ಮೇಧಾ ನಿಧನರಾಗಿದ್ದೂ ಕ್ಯಾನ್ಸರ್ ನಿಂದಲೇ...

ಪಣಜಿ, ಮಾರ್ಚ್ 18: ಅದು 2001ರ ಅಕ್ಟೋಬರ್ 24... ಸರಳ, ಸಜ್ಜನ ರಾಜಕಾರಣಿ ಮನೋಹರ್ ಪರಿಕ್ಕರ್ ಅವರು ಗೋವಾದ ಮುಖ್ಯಮಂತ್ರಿಯಾಗಿ ಪ್ರಪ್ರಥಮ ಬಾರಿಗೆ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿ ಗದ್ದುಗೆ ಏರಿದ ಪರಿಕ್ಕರ್ ಕಣ್ಣಂಚಲ್ಲಿ ಸಂಭ್ರಮಕ್ಕಿಂತ ಹೆಚ್ಚಾಗಿ ಇದ್ದಿದ್ದು ಸೂತಕದ ಛಾಯೆ! ಕಾರಣ, ಅವರು ಸಿಎಂ ಹುದ್ದೆಗೆರುವ ಎರಡೇ ಎರಡು ತಿಂಗಳ ಮೊದಲು ತಮ್ಮ ಪತ್ನಿ ಮೇಧಾ ಪರಿಕ್ಕರ್ ಅವರನ್ನು ಕಳೆದುಕೊಂಡಿದ್ದರು!

ಪ್ಯಾಂಕ್ರಿಯಾಸ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಭಾನುವಾರ, ತಮ್ಮ 63 ನೇ ವಯಸ್ಸನಿಲ್ಲಿ ಮೃತರಾದರು. ಆದರೆ 18 ವರ್ಷದ ಹಿಂದೆಯೇ ಅವರ ಪತ್ನಿ ಮೇಧಾ ಅವರೂ ಇದೇ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಮೃತರಾಗಿದ್ದರು.

ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರ ಇಂದು 5 ಗಂಟೆಗೆ ನೆರವೇರಲಿದ್ದು, ದೇಶ ಕಂಡ ಅತ್ಯಂತ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ ಪರಿಕ್ಕರ್ ಅವರ ಅಗಲಿಕೆಗೆ ದೇಶ ಕಂಬನಿ ಮಿಡಿದಿದೆ. 2001 ರಲ್ಲಿ ಅವರು ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಎರಡು ತಿಂಗಳು ಮುಂಚೆ ಪತ್ನಿಯನ್ನು ಕಳೆದುಕೊಂಡಿದ್ದ ಅವರು ಮುಂದೊಮ್ಮೆ ಸಾರ್ವಜನಿಕ ಸಭೆಯಲ್ಲಿ ತಮ್ಮ ಪತ್ನಿಯನ್ನು ನೆನೆದು ಭಾವುಕರಾಗಿದ್ದರು.

18 ವರ್ಷದ ಹಿಂದೆಯೇ ಅಗಲಿದ ಪತ್ನಿ

18 ವರ್ಷದ ಹಿಂದೆಯೇ ಅಗಲಿದ ಪತ್ನಿ

ಪರಿಕ್ಕರ್ ಅವರ ಎಲ್ಲಾ ಕಾರ್ಯಗಳಿಗೂ ಬೆನ್ನೆಲುಬಾಗಿದ್ದ, ಸ್ಫೂರ್ತಿಯಾಗಿದ್ದ ಮೇಧಾ ಅವರು 18 ವರ್ಷದ ಹಿಂದೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ, ಅಸುನೀಗಿದರು. ಆದರೆ ಅವರಿಗೆ ಯಾವ ಕ್ಯಾನ್ಸರ್ ಇತ್ತು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ಘಟನೆಯ ನಂತರ ಪರಿಕ್ಕರ್ ಅವರು ತಮ್ಮ ಇಬ್ಬರು ಮಕ್ಕಳಾದ ಉತ್ಪಲ್ ಮತ್ತು ಅಭಿಜಾತ್ ಪರಿಕ್ಕರ್ ಅವರೊಂದಿಗೇ ಇದ್ದರು.

Array

ಪತ್ನಿಯನ್ನು ನೆನೆದು ಭಾವುಕರಾಗಿದ್ದರು!

ತಮ್ಮ 60 ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಪತ್ನಿ ಮೇಧಾ ಅವರ ಬಗ್ಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಪರಿಕ್ಕರ್, 'ಇಂದು ಅವಳಿದ್ದಿದ್ದರೆ ಅವಳಿಗೆ(ಮೇಧಾ ಪರಿಕ್ಕರ್) 55 ವರ್ಷವಾಗಿರುತ್ತಿತ್ತು! ಆದರೆ 40 ವರ್ಷವಾಗಿದ್ದಾಗಲೇ ನನ್ನನ್ನು ಬಿಟ್ಟು ಹೊರಟುಹೋದಳು' ಎಂದು ಭಾವುಕರಾಗಿ ನುಡಿದಿದ್ದರು.

ಗೋವಾ ಎಂದರೆ ಅನಿರ್ವಚನೀಯ ಅಭಿಮಾನ

ಗೋವಾ ಬಗ್ಗೆ ಮನೋಹರ್ ಪರಿಕ್ಕರ್ ಅವರಿಗಿದ್ದ ಅಭಿಮಾನ ಅನಿರ್ವಚನೀಯ. ಮೊದಲಿನಿಂದಲೂ ಸಾರ್ವಜನಿಕ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟುಕೊಂಡಿದ್ದ ಪರಿಕ್ಕರ್, ಪತ್ನಿ ತೀರಿಹೋದ ಮೇಲಂತೂ ತಮ್ಮ ಬದುಕನ್ನೇ ಗೋವಾ ಮತ್ತು ದೇಶ ಸೇವೆಗಾಗಿ ಮುಡಿಪಾಗಿಟ್ಟರು. "ನನ್ನ ಪತ್ನಿ ತೀರಿಕೊಂಡ ಮೇಲೆ ಆಕೆಯ ಗೈರು ಕಾಡದಂತೆ ನನ್ನನ್ನು ನೋಡಿಕೊಂಡವರು ಗೋವಾದ ಜನರು. ನಾನು ಇಂದು ಈ ಮಟ್ಟದಲ್ಲಿರುವುದಕ್ಕೆ ಕಾರಣ ಗೋವಾದ ಜನರು" ಎಂದು ಪರಿಕ್ಕರ್ ಹೇಳಿಕೊಂಡಿದ್ದರು.

ಪತಿ ಮುಖ್ಯಮಂತ್ರಿಯಾಗಿದ್ದನ್ನು ನೋಡಲೇ ಇಲ್ಲ!

ಪತಿ ಮುಖ್ಯಮಂತ್ರಿಯಾಗಿದ್ದನ್ನು ನೋಡಲೇ ಇಲ್ಲ!

ಮೇಧಾ ಪರಿಕ್ಕರ್ ಅವರು ಅಗಲಿದ ಎರಡು ತಿಂಗಳ ನಂತರ ಪರಿಕ್ಕರ್ ಗೋವಾ ರಾಜ್ಯದ ಮುಖ್ಯಮಂತ್ರಿಯಾದರು. ನಂತರ ಅವರು ರಾಜಕೀಯವಾಗಿ ಸಾಕಷ್ಟು ಯಶಸ್ಸು ಗಳಿಸಿ, ಜನಪ್ರಿಯ ನಾಯಕರಾದರು. ಆದರೆ ಇದ್ಯಾವುದನ್ನು ನೋಡುವುದಕ್ಕೂ ಅವರ ಪತ್ನಿ ಮೇಧಾ ಬದುಕಿರಲಿಲ್ಲ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+