ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 'ಬೀಫ್' ತಿನ್ನೋದೇ ಒಂದು ಖುಷಿ, ಗುಹಾ

|
Google Oneindia Kannada News

ಪಣಜಿ, ಡಿ 7: ಗೋವನ್ನು ದೇವರೆಂದು ಪೂಜಿಸುವ ದೇಶವಿದು, ನೀವೂ ಪೂಜಿಸಬೇಕು ಎನ್ನುವ ಒತ್ತಾಯವೇನೂ ಇಲ್ಲ. ಆದರೆ, ರಾಮಚಂದ್ರ ಎಂದು ಹೆಸರಿಟ್ಟುಕೊಂಡಿರುವ ನೀವು ಈ ರೀತಿ ಅಣಕವಾಡುವುದು ಸರಿಯೇ?

ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ, ಬಿಜೆಪಿಯನ್ನು, ಗೋಪ್ರೇಮಿಗಳನ್ನು ತಮಾಷೆ ಮಾಡಲು ಹೋಗಿ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸರಿಯಾಗಿ ಉಗಿಸಿಕೊಂಡಿದ್ದಾರೆ.

ಗೋವಾದ ಪಣಜಿಯಲ್ಲಿ ಊಟ ಮಾಡುತ್ತಿದ್ದೇನೆ, ಇಲ್ಲಿ ಬಿಜೆಪಿಯ ಆಡಳಿತವಿದೆ. ಹಾಗಾಗಿ, ಊಟಕ್ಕೆ ಖುಷಿಯಿಂದ ದನದ ಮಾಂಸ ತಿನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು, ಕೈಯಲ್ಲಿ ಬೀಫ್ ಇರುವ ತಟ್ಟೆ, ಜೊತೆಗೆ ಬಿಯರ್ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲ: ಬಿಜೆಪಿ ಶಾಸಕ ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲ: ಬಿಜೆಪಿ ಶಾಸಕ

ಸುಮಾರು 2.04 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ರಾಮಚಂದ್ರ ಗುಹಾ ಅವರ ಈ ಟ್ವೀಟಿಗೆ 1,300ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ. ಜೊತೆಗೆ, ಈ ಟ್ವೀಟ್ 653 ಬಾರಿ ರಿಟ್ವೀಟ್ ಆಗಿದೆ.

ಹಿಂದೂ ಸಂಪ್ರದಾಯ, ಬಿಜೆಪಿ, ಸಂಘ ಪರಿವಾರ ಮತ್ತು ಗೋಪ್ರೇಮಿಗಳನ್ನು, ಅಣಕಿಸುವ ಉದ್ದೇಶದಿಂದಲೇ ಹಾಕಲಾಗಿರುವ ಈ ಟ್ವೀಟಿಗೆ, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೆಲವೊಂದು ಸ್ಯಾಂಪಲ್ ಗಳು, ಕೆಳಗೆ ಮುಂದುವರಿಸಲಾಗಿದೆ...

ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿ

ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿ

ಖ್ಯಾತ ಇಂಗ್ಲಿಷ್ ದಿನಪತ್ರಿಕೆಗಳ ಅಂಕಣಕಾರರೂ ಆಗಿರುವ ರಾಮಚಂದ್ರ ಗುಹಾ, ಸಮಾನತೆ ವಿಷಯ ಬಂದಾಗ, ದಲಿತರು ಮಹಿಳೆಯರಿಗಿಂತ ಹೆಚ್ಚು ಪ್ರಗತಿಯನ್ನು ಕಾಣುತ್ತಿದ್ದಾರೆಂದು ಹೇಳಿದ್ದರು. ಪಣಜಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಗುಹಾ ಈ ಮೇಲಿನ ವಿವಾದಕಾರಿ ಟ್ವೀಟ್ ಅನ್ನು ಮಾಡಿದ್ದರು.

'ಮುಸ್ಲೀಮರೇ ಗೋ ಸಾಕಣೆ ಮಾಡಬೇಡಿ, ಗೋರಕ್ಷಕರು ನಿಮ್ಮನ್ನು ಕೊಲ್ಲಬಹುದು' 'ಮುಸ್ಲೀಮರೇ ಗೋ ಸಾಕಣೆ ಮಾಡಬೇಡಿ, ಗೋರಕ್ಷಕರು ನಿಮ್ಮನ್ನು ಕೊಲ್ಲಬಹುದು'

ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ ಅನ್ನು ತಿನ್ನಿ

ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ ಅನ್ನು ತಿನ್ನಿ

ವೆಲ್ಡನ್.. ಇದೇ ರೀತಿ ಆಲಿಗಢಕ್ಕೆ ಹೋಗಿ, ಅಲ್ಲಿ ಪೋರ್ಕ್ (ಹಂದಿ ಮಾಂಸ) ಅನ್ನು ತಿನ್ನಿ.. ಬದುಕಿ ವಾಪಸ್ ಬಂದರೆ, ಮತ್ತೆ ಟ್ವೀಟ್ ಮಾಡಿ... ನೀವು ಖುಷಿಯಿಂದ ಊಟ ಮಾಡುತ್ತಿಲ್ಲ. ಕೋಟ್ಯಾಂತರ ಜನರ ಭಾವನೆಯನ್ನು ಅಣಕವಾಡಲೆಂದೇ ಹಾಕಲಾಗಿರುವ ಟ್ವೀಟ್ ಇದು..

ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದ ಮುಸ್ಲಿಂ ಮುಖಂಡ ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದ ಮುಸ್ಲಿಂ ಮುಖಂಡ

ಅದು ನಾಯಿಯ ಮಾಂಸವಿರಬೇಕು

ಅದು ನಾಯಿಯ ಮಾಂಸವಿರಬೇಕು

ಇತ್ತೀಚೆಗೆ ತಮಿಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಕೆಜಿಯಷ್ಟು ಮಾಂಸವನ್ನು ಪರೀಕ್ಷಿಸಲಾಗಿತ್ತು. ಅದು ದನದ ಮಾಂಸವಾಗಿರಲಿಲ್ಲ, ಅದು ನಾಯಿಯ ಮಾಂಸವಾಗಿತ್ತು. ಬಹುಷಃ ನೀವು ನಾಯಿ ಮಾಂಸವನ್ನೇ ತಿಂದಿರಬೇಕು.. ನೀವು ಪಕ್ಕಾ ಅವಕಾಶವಾದಿ ಎನ್ನುವ ಟ್ವೀಟ್..

10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ

10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ

ಮುಂದೊಂದು ದಿನ ಹೈದರಾಬಾದಿಗೆ ಹೋಗಿ ಹಂದಿ ಮಾಂಸವನ್ನು ತಿನ್ನಿ... 10, ಜನಪಥ್ ಗೆ ಹೋದಾಗ ಅಲ್ಲಿ ಪೋರ್ಕ್ ತಿನ್ನಿ... ವಯಸ್ಸಾದ ದನಗಳನ್ನು ಜನ ಕಟುಕರಿಗೆ ಮಾರುತ್ತಾರೆ.. ಅದು ಅವರ ಜೀವನಕ್ಕಾಗಿ.. ಆದರೆ, ಇದರಿಂದ ಅವರು ಖುಷಿ ಪಡುವುದಿಲ್ಲ...

ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ

ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ

ನಿಮ್ಮ ಉಪನಾಮದಲ್ಲೇ ಗೋ ಖಾ... ಎನ್ನುವುದಿದೆ...ಹಾಗಾಗಿ ತಿನ್ನಿ.. ಅವಾಗಾವಾಗ ಹಂದಿಯ ಮಾಂಸವನ್ನೂ ತಿನ್ನಿ.. ನಿಮ್ಮದು ಅದ್ಭುತ ಸಾಧನೆಯಿದು.. ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು.. ಈ ರೀತಿಯ ಕಾಮೆಂಟುಗಳು ರಾಮಚಂದ್ರ ಗುಹಾ ಅವರ ಟ್ವೀಟಿಗೆ ಬರುತ್ತಿದೆ.

English summary
Historian and columnist Ramachandra Guha controversial tweet on beef eating. He tweeted, 'After a magical morning in Old Goa we had lunch in Panaji, where—since this is a BJP ruled state—I decided to eat beef in celebration'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X