• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾದಲ್ಲೂ ನಡೆಯುತ್ತಿದ್ಯಾ 'ಆಪರೇಷನ್ ಕಮಲ': ಬಿಜೆಪಿ ಲೆಕ್ಕಾಚಾರ ಏನು?

|
Google Oneindia Kannada News

ಪಕ್ಷದ 11 ಶಾಸಕರಲ್ಲಿ ಮೂರನೇ ಎರಡರಷ್ಟು ಶಾಸಕರನ್ನು ಪಕ್ಷಾಂತರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಗೋವಾ ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ನಾಯಕಾರದ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಪಕ್ಷಾಂತರಕ್ಕೆ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಲೋಬೋ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಾಂಗ್ರೆಸ್ ವಜಾಗೊಳಿಸಿದೆ.

"ಬಿಜೆಪಿ 2/3 ಭಾಗದಷ್ಟು ಶಾಸಕರನ್ನು ಪಕ್ಷಾಂತರಿಸಲು ಪ್ರಯತ್ನಿಸುತ್ತಿದೆ, ಕಾಂಗ್ರೆಸ್‌ನ ಕನಿಷ್ಠ 8 ಶಾಸಕರು ಹೊರಹೋಗುವಂತೆ ನೋಡಿಕೊಳ್ಳುತ್ತಾರೆ. ನಮ್ಮ ಶಾಸಕರಿಗೆ ದೊಡ್ಡ ಮೊತ್ತದ ಆಫರ್ ಬಂದಿದೆ. ಪಕ್ಷಾಂತರಕ್ಕೆ ಶಾಸಕರಿಗೆ ನೀಡಿರುವ ಹಣದ ಮೊತ್ತದಿಂದ ನನಗೆ ಆಘಾತವಾಗಿದೆ. ನಮ್ಮ 6 ಶಾಸಕರು ನಮ್ಮೊಂದಿಗೆ ದೃಢವಾಗಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಈಗ ಟಿಎಂಸಿ ವಕ್ತಾರಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಈಗ ಟಿಎಂಸಿ ವಕ್ತಾರ

ಬಿಜೆಪಿಗೆ ಪಕ್ಷಾಂತರ ಮಾಡಲು ಶಾಸಕರಿಗೆ ಸುಮಾರು 40 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗಿರೀಶ್ ಚೋಡಂಕರ್ ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿದೆ.

ಕಾಂಗ್ರೆಸ್‌ ನಾಯಕರಿಂದಲೇ ಒಳಸಂಚು

ಕಾಂಗ್ರೆಸ್‌ ನಾಯಕರಿಂದಲೇ ಒಳಸಂಚು

ಬಿಜೆಪಿ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷದ ನಾಯಕರೇ ಈ ಸಂಚು ರೂಪಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಮ್ಮದೇ ಇಬ್ಬರು ನಾಯಕರು, ವಿರೋಧ ಪಕ್ಷದ ನಾಯಕರಾದ ಮೈಕಲ್ ಲೋಬೋ ಮತ್ತು ದಿಗಂಬರ ಕಾಮತ್ ಅವರ ನೇತೃತ್ವದಲ್ಲಿ ಈ ಸಂಚು ನಡೆದಿದೆ. ಇವರಿಬ್ಬರೂ ಬಿಜೆಪಿಯೊಂದಿಗೆ ಸಂಪೂರ್ಣ ಸಮನ್ವಯದಿಂದ ಕೆಲಸ ಮಾಡುತ್ತಿದ್ದರು. ದಿಗಂಬರ್ ಕಾಮತ್ ಹಲವಾರು ಪ್ರಕರಣಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ. ಅಧಿಕಾರ ಮತ್ತು ಸ್ಥಾನದ ಆಸೆಗಾಗಿ ಮೈಕೆಲ್ ಲೋಬೋ ಬಿಜೆಪಿ ಸೇರಲು ಬಯಸಿದ್ದಾರೆ. ಬಿಜೆಪಿ ವಿರೋಧ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ" ಎಂದು ಗುಂಡೂರಾವ್ ಹೇಳಿದರು.

ಐವರು ಶಾಸಕರು ಕಾಂಗ್ರೆಸ್‌ನಿಂದ ದೂರ?

ಐವರು ಶಾಸಕರು ಕಾಂಗ್ರೆಸ್‌ನಿಂದ ದೂರ?

11 ಶಾಸಕರ ಪೈಕಿ ಪಕ್ಷ ಐವರ ಸಂಪರ್ಕ ಕಳೆದುಕೊಂಡಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಲೋಬೋ, ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಲ್ದೇಸಾಯಿ ಮತ್ತು ದೆಲಿಯಾಲಾ ಲೋಬೋ ಸದ್ಯ ಕಾಂಗ್ರೆಸ್ ಸಂಪರ್ಕಕ್ಕೆ ದೊರೆತಿಲ್ಲ. ಆಲ್ಟೋನ್ ಡಿ'ಕೋಸ್ಟಾ, ಸಂಕಲ್ಪ್ ಅಮೋನ್ಕರ್, ಯೂರಿ ಅಲೆಮಾವೊ, ಕಾರ್ಲೋಸ್ ಅಲ್ವಾರೆಸ್ ಫೆರೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸೇರಿದಂತೆ ಐವರು ಕಾಂಗ್ರೆಸ್‌ನಲ್ಲಿದ್ದರು. ಆರನೇ ಶಾಸಕ ಅಲೆಕ್ಸೋ ಸಿಕ್ವೇರಾ ಅವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಲೆಕ್ಕಾಚಾರ ಏನು?

ಬಿಜೆಪಿ ಲೆಕ್ಕಾಚಾರ ಏನು?

ಗೋವಾದಲ್ಲಿ ಬಿಜೆಪಿಗೆ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಭವಿಷ್ಯದಲ್ಲಿ ಕಾಂಗ್ರೆಸ್ ಬಿಜೆಪಿಗೆ ಮಾರಕವಾಗುತ್ತದೆ ಎನ್ನುವ ಕಾರಣಕ್ಕೆ ಈ ಪಕ್ಷಾಂತರ ಪರ್ವಕ್ಕೆ ಮುಂದಾಗಿದೆ ಎನ್ನಲಾಗಿದೆ. ಈಗಲೇ ಕಾಂಗ್ರೆಸ್ ಪಕ್ಷವನ್ನು ದುರ್ಬಗೊಳಿಸಿ, ಬಿಜೆಪಿ ದಾರಿಯನ್ನು ಸುಲಭ ಮಾಡಿಕೊಳ್ಳುವ ರಾಜಕೀಯ ಲೆಕ್ಕಾಚಾರವಿದೆ ಎಂದು ಹೇಳಲಾಗಿದೆ.

ಪಕ್ಷಾಂತರ ನಿಷೇಧ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ 11 ಶಾಸಕರ ಪೈಕಿ ಮೂರನೇ ಎರಡರಷ್ಟು ಶಾಸಕರ ಅಗತ್ಯವಿದೆ. ಪಕ್ಷಕ್ಕೆ ಎಂಟು ಶಾಸಕರ ಬೆಂಬಲದ ಅಗತ್ಯವಿದೆ. ಇಲ್ಲದಿದ್ದರೆ 5 ಮಂದಿ ಬಂಡಾಯಗಾರರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲಾಗುವ ಸಾಧ್ಯತೆ ಇದೆ.

ಕಾನೂನು ಕ್ರಮದ ಎಚ್ಚರಿಕೆ

ಕಾನೂನು ಕ್ರಮದ ಎಚ್ಚರಿಕೆ

"ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಲಾಗುವುದು, ಈ ರೀತಿಯ ಪಕ್ಷಾಂತರದ ವಿರುದ್ಧ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ. ಎಷ್ಟು ಶಾಸಕರು ಹೋಗುತ್ತಾರೆ ನೋಡೋಣ. ನಮ್ಮ ಐದು ಶಾಸಕರು ಇಲ್ಲಿದ್ದಾರೆ, ಇನ್ನೂ ಕೆಲವು ಶಾಸಕರು ನಮ್ಮೊಂದಿಗೆ ಬರುತ್ತಾರೆ," ಎಂದು ಅವರು ಹೇಳಿದರು.

ಯಾವುದೇ ಪಕ್ಷಾಂತರ ಯೋಜನೆಯ ವರದಿಗಳನ್ನು ಕಾಂಗ್ರೆಸ್ ನಾಯಕತ್ವ ನಿರಾಕರಿಸಿತ್ತು. ಆದರೆ, ಗೋವಾ ವಿಧಾನಸಭೆಯ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಉಪಸಭಾಪತಿ ಹುದ್ದೆಗೆ ಚುನಾವಣೆ ಘೋಷಣೆ ಮಾಡಿದ ಅಧಿಸೂಚನೆಯನ್ನು ರದ್ದುಗೊಳಿಸಿದ್ದಾರೆ.

English summary
The Goa Congress has alleged that the BJP is trying to defect two-thirds of the party's 11 MLAs. Congress Goa in-charge Dinesh Gundurao has accused Congress leaders Michael Lobo and Digambar Kamat of helping the BJP defect. Lobo was sacked by the Congress as Leader of Opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X