ಗೋವಾಕ್ಕೆ ಆಗಮಿಸುವವರಿಗೆ ಮುಖ್ಯಮಂತ್ರಿಗಳ ಸೂಚನೆ
ಗೋವಾ, ಮೇ 27 : ಗೋವಾಕ್ಕೆ ಆಗಮಿಸುವ ಎಲ್ಲಾ ಜನರಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೂಚನೆಯೊಂದನ್ನು ನೀಡಿದ್ದಾರೆ. 14 ದಿನಗಳ ಹೋಂ ಕ್ವಾರಂಟೈನ್ ಸೌಲಭ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Recommended Video
ಬುಧವಾರ ಪ್ರಮೋದ್ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದರು. "ಗೋವಾಕ್ಕೆ ಆಗಮಿಸುವ ಜನರು ತಮ್ಮ ಜೊತೆ ಕೋವಿಡ್ - 19 ಸೋಂಕು ಇಲ್ಲ ಎಂದು ಪ್ರಮಾಣ ಪತ್ರ ತರಬೇಕು" ಎಂದು ಹೇಳಿದರು.
"ಕೊರೊನಾ ಹರಡದಂತೆ ತಡೆಯಲು ನಾವು ಎರಡು ವಿಧಾನವನ್ನು ಅನುಸರಿಸುತ್ತಿದ್ದೇವೆ. 14 ದಿನದ ಹೋಂ ಕ್ವಾರಂಟೈನ್ ಸೌಲಭ್ಯ ಇನ್ನು ಮುಂದೆ ರಾಜ್ಯದಲ್ಲಿ ಲಭ್ಯವಿರುವುದಿಲ್ಲ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

"ಗೋವಾಕ್ಕೆ ಆಗಮಿಸುವಾಗ ಕೋವಿಡ್ - 19 ಸೋಂಕು ಇಲ್ಲ ಎಂದು ಪ್ರಮಾಣ ಪತ್ರ ತರಬೇಕು ಅಥವ ರಾಜ್ಯಕ್ಕೆ ಆಗಮಿಸಿದ ಬಳಿಕ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ" ಎಂದು ಪ್ರಮೋದ್ ಸಾವಂತ್ ಹೇಳಿದರು.
ಏಪ್ರಿಲ್ ತಿಂಗಳಿನಲ್ಲಿ ಗೋವಾ ರಾಜ್ಯವನ್ನು ಕೊರೊನಾ ವೈರಸ್ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಅಂತರರಾಜ್ಯ ಸಂಚಾರ ಆರಂಭವಾದ ಬಳಿಕ ಗೋವಾದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾದವು.
ಪ್ರಸ್ತುತ ರಾಜ್ಯದಲ್ಲಿ 67 ಕೊರೊನಾ ವೈರಸ್ ಸೋಂಕಿತ ಪ್ರಕರಗಳಿವೆ. ಇವುಗಳಲ್ಲಿ 39 ಸಕ್ರಿಯ ಪ್ರಕರಣಗಳು. 28 ಜನರು ಗುಣಮುಖರಾಗಿದ್ದಾರೆ.












Click it and Unblock the Notifications