Goa Assembly Election Results 2022: ಅತಂತ್ರ ವಿಧಾನಸಭೆ ಭೀತಿ, ಮೈತ್ರಿ ಸಾಧ್ಯತೆ ಬಗ್ಗೆ ಸಿಎಂ ಪ್ರಮೋದ್ ಮಾತು
ಪಣಜಿ, ಮಾರ್ಚ್ 10: ಎರಡು ತಿಂಗಳಲ್ಲಿ ಒಟ್ಟು 690 ವಿಧಾನಸಭಾ ಕ್ಷೇತ್ರಗಳು ಮತದಾನವಾಗಿದ್ದು, ಯುಪಿಯಲ್ಲಿ ಗರಿಷ್ಠ (403 ಸ್ಥಾನಗಳು) ನಂತರ ಪಂಜಾಬ್ (117), ಉತ್ತರಾಖಂಡ್ (70), ಮಣಿಪುರ (60), ಮತ್ತು ಗೋವಾ (40)ದ ಮುಂದಿನ ಸರ್ಕಾರ ಯಾವುದು ಎಂದು ಮಾರ್ಚ್ 10 ರಂದು ನಿರ್ಧಾರವಾಗಲಿದೆ. ಗೋವಾದಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಯಾವ ಪಕ್ಷಕ್ಕೂ ಸೂಕ್ತ ಮುನ್ನಡೆ ಸಿಕ್ಕಿಲ್ಲ, ಮ್ಯಾಜಿಕ್ ನಂಬರ್ 21 ದಾಟಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ
ಸಮಯ 10.35ಕ್ಕೆ ಚುನಾವಣಾ ಆಯೋಗದ ಟ್ರೆಂಡ್ ನಂತೆ ಬಿಜೆಪಿ 18; ಕಾಂಗ್ರೆಸ್ 12; ಎಂಜಿಪಿ 5, ಎಎಪಿ 1, ಇತರೆ 3ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೋವಾ ಸಿಎಂ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಸಾಂಕ್ವೆಲಿಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದರೆ,. ಏತನ್ಮಧ್ಯೆ, ಮಾಂಡ್ರೆಮ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಸಿಗದೆ ಬಂಡಾಯವೆದ್ದಿರುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಲಕ್ಷ್ಮೀಕಾಂತ್ ಪರ್ಸೇಕರ್ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.

ರಾಜ್ಯದ 40 ವಿಧಾನಸಭಾ ಕ್ಷೇತ್ರ
ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಅಧಿಕಾರ ಪಡೆಯಲು ಮ್ಯಾಜಿಕ್ ನಂಬರ್ 21. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆದಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.
ಗೋವಾದಲ್ಲಿ 2017ರ ಚುನಾವಣೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ವಿಫಲವಾಗಿ ಪ್ರತಿಪಕ್ಷದಲ್ಲಿ ಕುಳಿತಿತ್ತು. ವಿವಿಧ ಪಕ್ಷ, ಪಕ್ಷೇತರರ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತ್ತು.

ಬಿಜೆಪಿ ಪಾಳಯದಲ್ಲಿ ಸರಣಿ ಸಭೆ
ಬಿಜೆಪಿ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಈಗ ತಮ್ಮ ಹೋಟೆಲ್‌ನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಫಡ್ನವೀಸ್ ಅವರು ಫಲಿತಾಂಶದ ಮೇಲೆ ತೀವ್ರ ನಿಗಾ ಇರಿಸಿದ್ದು, ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸಲಿದ್ದಾರೆ. ಈ ನಡುವೆ ಇತರೆ ಪಕ್ಷಗಳ ಅಭ್ಯರ್ಥಿಗಳು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಪ್ರಮುಖ ಮುಖಂಡ ಗೊಡಿನ್ಹೊ ಪ್ರತಿಕ್ರಿಯಿಸಿದ್ದಾರೆ. ಮೈತ್ರಿ ಸಾಧ್ಯತೆ ಬಗ್ಗೆ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಬಿಜೆಪಿಯ ಹಿರಿಯ ನಾಯಕ ಮೌವಿನ್ ಗೊಡಿನ್ಹೋ ಅವರು ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳಲು ಹೊರಟಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಯ ನೈತಿಕತೆ ಹೆಚ್ಚಾಗಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಬೇರೆ ಪಕ್ಷಗಳ ಅಭ್ಯರ್ಥಿಗಳೂ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದರು. ಎಕ್ಸಿಟ್ ಪೋಲ್ ಫಲಿತಾಂಶದಂತೆ ಅತಂತ್ರ ವಿಧಾನಸಭೆ ಎಂದು ತೀರ್ಪು ಬಂದಿದ್ದು, ಹಾಗೂ ಇಂದಿನ ಸದ್ಯದ ಟ್ರೆಂಡ್ ಕೂಡಾ ಇದನ್ನೇ ಸೂಚಿಸುತ್ತಿರುವುದ ಬಗ್ಗೆ ಗೊಡಿನ್ಹೋ ಮಾತನಾಡಿ, ಪಕ್ಷದ ಆಂತರಿಕ ಮೌಲ್ಯಮಾಪನವು ಬಹುಮತವನ್ನು ಗೆಲ್ಲುತ್ತದೆ ಎಂದು ತೋರಿಸಿದೆ, ಒಂದು ಪಕ್ಷ ನೆರವು ಅಗತ್ಯವಾದರೆ ಮಿತ್ರ ಪಕ್ಷಗಳು ನಮ್ಮ ಜೊತೆಗಿವೆ ಎಂದಿದ್ದಾರೆ.

ಕಾಂಗ್ರೆಸ್ ಶಾಸಕರ ಮೇಲೆ ನಿಗಾ:
ಗೋವಾದಲ್ಲಿ ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಎಲ್ಲ ಪ್ರಮುಖ ನಾಯಕರನ್ನು ಗೋವಾಕ್ಕೆ ಕಳುಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎರಡು ದಿನಗಳ ಹಿಂದೆಯೇ ಗೋವಾಕ್ಕೆ ತೆರಳಿದ್ದಾರೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ಎಐಸಿಸಿ ವೀಕ್ಷಕ ಪಿ. ಚಿದಂಬರಂ, ವೀಕ್ಷಕ ಸತೀಶ್ ಜಾರಕಿಹೊಳಿ ಸಹಿತ ಎಲ್ಲರೂ ಗೋವಾದ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಮುಂಚೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, 2022 ರ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ 40 ಸದಸ್ಯರ ಸದನದಲ್ಲಿ 22 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಿಜೆಪಿ ಗೆಲ್ಲಲಿದ್ದು, ಸತತ ಮೂರನೇ ಅವಧಿಯನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
302 ಅಭ್ಯರ್ಥಿಗಳು ಕಣದಲ್ಲಿದ್ದರು, ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ರಾಜ್ಯದಲ್ಲಿ ಮತದಾನ ನಡೆಸಲಾಗಿತ್ತು. ಈ ಕರಾವಳಿ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು 11 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದರು. ‘22 ಪ್ಲಸ್ ಇನ್ 2022' ಘೋಷಣೆಯೊಂದಿಗೆ ಬಿಜೆಪಿ ಚುನಾವಣೆಗೆ ಧುಮುಕಿದ್ದರೆ, ಪಕ್ಷ 17-18 ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚಿಸಲು ಸ್ವತಂತ್ರ ಶಾಸಕರ ಸಹಾಯ ಪಡೆಯುವುದಾಗಿ ಸಿಎಂ ಸಾವಂತ್ ಹೇಳಿದ್ದಾರೆ.












Click it and Unblock the Notifications