Breaking: ಗೋವಾದಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ
ಪಣಜಿ, ಜೂ. 8: ಗೋವಾದ ಅರಂಬೋಲ್ ಬೀಚ್ ಬಳಿ ಬ್ರಿಟನ್ ಮಹಿಳೆಯೊಬ್ಬರ ಮೇಲೆ ಮಸಾಜ್ ಮಾಡುವ ನೆಪದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜಾ (32) ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಬಳಿ ಅಕ್ರಮವಾಗಿ ಮಸಾಜ್ ಸೇವೆಗಳನ್ನು ನೀಡುವ ಗುಂಪಿನ ಸದಸ್ಯರಾಗಿದ್ದರು. ಮುಂಚೆ ವಿನ್ಸೆಂಟ್ ಡಿಸೋಜಾ ಶಾಲೆಯೊಂದರ ಗ್ರಂಥಪಾಲಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಹೇಳಿಕೆಯಂತೆ ಆಕೆ ಸಮುದ್ರತೀರಕ್ಕೆ ಸಮೀಪವಿರುವ ಸಿಹಿನೀರಿನ ಸರೋವರದ ಬಳಿ ಮಲಗಿದ್ದಾಗ ಆರೋಪಿ ಮಸಾಜ್ ಮಾಡುವ ನೆಪದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ಘಟನೆಯು ಜೂನ್ 2 ರಂದು ನಡೆದಿದ್ದು, ಮಹಿಳೆ ಬ್ರಿಟನ್‌ಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಬಳಿಕ ಭಾರತದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯಿಂದ ನೆರವು ಪಡೆದು ಸೋಮವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Recommended Video
ದೂರು ಸ್ವೀಕರಿಸಿದ 1 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದರು. ಈ ಹಿಂದೆ ಗ್ರಂಥಪಾಲಕರಾಗಿದ್ದ ವಿನ್ಸೆಂಟ್ ಡಿಸೋಜಾ ಈಗ ಆ ಹುದ್ದೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಬದಲಾಗಿ ಮಸಾಜ್ ಮಾಡುವ ಗುಂಪಿನ ಸದಸ್ಯನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಮಹಿಳೆಯನ್ನು ಪಣಜಿ ಸಮೀಪದ ಮಾಪುಸಾ ಪಟ್ಟಣದ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯಲು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications