ಪೇಸ್- ಭೂಪತಿ ಜೋಡಿ ವಿಶ್ವದ ನಂ.1

ಮಿಯಾಮಿ, ಏ.3: ವಿಶ್ವಕಪ್ 2011 ಗೆದ್ದು ಸಂಭ್ರಮಿಸುತ್ತಿರುವ ಕ್ರೀಡಾ ಪ್ರೇಮಿಗಳ ಸಂಭ್ರಮವನ್ನು "ಇಂಡಿಯನ್ ಎಕ್ಸ್ ಪ್ರೆಸ್ " ಜೋಡಿ ಮತ್ತಷ್ಟು ಹೆಚ್ಚಿಸಿದ್ದಾರೆ. ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿ ಸೋನಿ ಎರಿಕ್ಸನ್ ಓಪನ್ ಗೆಲ್ಲುವ ಮೂಲಕ ಎಟಿಪಿ ವಿಶ್ವ ಡಬಲ್ಸ್ ಟೀಂ ಶ್ರೇಯಾಂಕದಲ್ಲಿ ಅಗ್ರಸ್ಥಾನ ಗಳಿಸಿದ ಸಾಧನೆ ಮೆರೆದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಈ ಜೋಡಿ ಗೆದ್ದಿರುವ ಎರಡನೇ ಪ್ರಶಸ್ತಿ ಇದಾಗಿದೆ.

ಮೂರನೇ ಸೀಡ್ ನ ಭೂಪತಿ ಮತ್ತು ಪೇಸ್ ಜೋಡಿ ಎರಡನೇ ಸೀಡ್ ನ ಬೈಲೋರಷ್ಯ ಕೆನಡಾ ಜೋಡಿ ಮ್ಯಾಕ್ಸ್ ಮಿರ್ನಿ ಹಾಗೂ ಡೆನಿಯಲ್ ನೆಸ್ಟರ್ ಅವರನ್ನು 6-7(5) 6-2 10-5 ಅಂತರದಲ್ಲಿ ಸೋಲಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಪ್ರಸಕ್ತ ಋತುವಿನ ಆರಂಭದಲ್ಲಿ ಚೆನ್ನೈ ಓಪನ್ ಟೆನ್ನಿಸ್ ಪ್ರಶಸ್ತಿಯನ್ನು ಪೇಸ್ ಭೂಪತಿ ಜೋಡಿ ಗೆದ್ದಿದ್ದರು.

ಮೊದಲ ಸೆಟ್ ನಲ್ಲಿ ಉಂಟಾದ ಹಿನ್ನೆಡೆಯಿಂದ ಚೇತರಿಸಿಕೊಂಡ ಈ ಜೋಡಿ ನಂತರ ಅದ್ಭುತ ಸರ್ವ್ ಹಾಗೂ ರಿಟರ್ನ್ ಮೂಲಕ ಎದುರಾಳಿಯನ್ನು ಕಾಡಿದರು. ಈ ಗೆಲುವಿನ ಮೂಲಕ ವಿಶ್ವದ ಅಗ್ರಸ್ಥಾನದಲ್ಲಿದ್ದ ಬಾಬ್ ಹಾಗೂ ಮೈಕ್ ಬ್ರಿಯಾನ್ ಅವರನ್ನು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಪೇಸ್ ಭೂಪತಿ ಜೋಡಿಗೆ ಬರ್ಕಲೇಸ್ ಎಟಿಪಿ ವಿಶ್ವ ಟೂರ್ ಫೈನಲ್ಸ್ ಗೆ ಪ್ರವೇಶ ಸುಲಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+