ಮೂತ್ರ ವಿಸರ್ಜನೆಗೆಂದು ರಸ್ತೆಪಕ್ಕ ಬಿಎಂಡಬ್ಲ್ಯೂ ಕಾರು ನಿಲ್ಲಿಸಿದ್ದ: ಮುಂದೇನಾಯ್ತು?
ನೊಯ್ಡಾ, ಮಾರ್ಚ್ 16: ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬಿಎಂಡಬ್ಲ್ಯೂ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದಾಗ ದುಷ್ಕರ್ಮಿಗಳು ಕಾರನ್ನೇ ದೋಚಿ ಪರಾರಿಯಾಗಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.
ರಾತ್ರಿ ನೊಯ್ಡಾದ 2 ನೇ ಹಂತದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರಿನ ಬಗ್ಗೆ ಹಾಗೂ ಮಾಲೀಕರ ಬಗ್ಗೆ ಪರಿಚರ ಇರುವವರೇ ಈ ಕೆಲಸವನ್ನು ಮಾಡಿದ್ದಾರೆ ಎನ್ನುವ ಅನುಮಾನ ಬಂದಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ಸ್ಟಾಕ್ ಬ್ರೋಕರ್ ರಿಶಭ್ ಅರೋರ ಪೊಲೀಸರ ಮುಂದೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ.
ಲಕ್ಷುರಿ ಕಾರು ಅರೋರಾ ಅವರ ಭಾವನಿಗೆ ಸೇರಿದ್ದಾಗಿದೆ. ಅಂದಾಜು 40 ಲಕ್ಷ ರೂ ಬೆಲೆ ಬಾಳುವಂಥದ್ದಾಗಿದೆ. ಆದಷ್ಟು ಬೇಗ ವಾಹನವನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications