ಲಂಚ ಪ್ರಕರಣ ಆರೋಪಿಯ ಕುಟುಂಬದಿಂದ ಸಿಬಿಐ ತಂಡದ ಮೇಲೆ ಹಲ್ಲೆ

ನೋಯ್ಡಾ, ಫೆಬ್ರವರಿ 23: ಲಂಚ ಪ್ರಕರಣವೊಂದರ ಅರೋಪಿಯಾಗಿದ್ದ ಅಧಿಕಾರಿಯನ್ನು ಬಂಧಿಸಲು ಪ್ರಯತ್ನಿಸಿದ್ದ ಸಿಬಿಐ ತಂಡದ ಮೇಲೆಯೇ ಆ ಅಧಿಕಾರಿಯ ಕುಟುಂಬದವರು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಲಂಚ ಪ್ರಕರಣದಲ್ಲಿ ಸಿಬಿಐನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸುನಿಲ್ ದತ್ ಎಂಬುವವರ ಮೇಲೆ ಅವರದೇ ಸಂಸ್ಥೆ ಲಂಚ ಪ್ರಕರಣದ ದೂರು ದಾಖಲಿಸಿತ್ತು. ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲು ಸಿಬಿಐ ತಂಡ ಗ್ರೇಟರ್ ನೋಯ್ಡಾದ ಸೋನೇಪುರ ಗ್ರಾಮಕ್ಕೆ ತೆರಳಿತ್ತು.

ಅಲ್ಲಿನ ಫಾರ್ಮ್ ಹೌಸ್ ಒಂದರಲ್ಲಿ ದತ್ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಸಿಬಿಐ ತಂಡ ಅಲ್ಲಿಗೆ ತೆರಳಿ ದತ್‌ ಅವರನ್ನು ಬಂಧಿಸಲು ಮುಂದಾದರು. ಆಗ ಅವರ ಕುಟುಂಬದ ಸದಸ್ಯರು ತಂಡದ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ದತ್ ಅಲ್ಲಿಂದ ಪರಾರಿಯಾದರು.

cbi team attacked by family of a accused officer in a bribery case in greater noida

ಘಟನೆಯಲ್ಲಿ ಸಿಬಿಐನ ಕೆಲವು ಅಧಿಕಾರಿಗಳಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಗ್ರೇಟರ್ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಬಿಐ ಅಧಿಕಾರಿಯಾಗಿರುವ ದತ್‌, ಗ್ರೇಟರ್ ಎಕ್ಸ್‌ಪ್ರೆಸ್‌ ವೇ ಭೂಮಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಫೆ. 2ರಂದು ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಆಗಿನಿಂದಲೂ ದತ್ ತಲೆಮರೆಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+