ನೋಯ್ಡಾದ ಚರಂಡಿಯ ಸಮೀಪ ಐದು ತಿಂಗಳ ಹೆಣ್ಣು ಭ್ರೂಣ ಪತ್ತೆ
ನೋಯ್ಡಾ, ಜೂನ್ 11: ಐದು ತಿಂಗಳ ಹೆಣ್ಣು ಭ್ರೂಣವನ್ನು ಕಲ್ಲಂಗಡಿ ಹಣ್ಣಿನ ಸುತ್ತ ಇರುವ ಸಿಪ್ಪೆಯ ಒಳಗಿಟ್ಟು, ನೋಯ್ಡಾ ಸಮೀಪದ ಹಳ್ಳಿಯೊಂದರ ಚರಂಡಿ ಸಮೀಪ ಎಸೆದಿರುವ ಘಟನೆ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಒಳಚರಂಡಿಯ ಕೆಲಸಗಾರರೊಬ್ಬರಿಗೆ ಸೋಮವಾರ ಗೆಝಾ ಗ್ರಾಮದ ಬಳಿ ಇದು ಗಮನಕ್ಕೆ ಬಂದಿದೆ.
ಒಳಚರಂಡಿ ಕೆಲಸ ಮಾಡುವ ರವೀಂದ್ರ ಅಲಿಯಾಸ್ ಕಲ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯೊಂದರ ಹೊರಗೆ ಒಳಚರಂಡಿಯಲ್ಲಿ ಕೆಲಸ ಮಾಡುವ ವೇಳೆ ಭ್ರೂಣವು ಬೆಳಗ್ಗೆ ಹನ್ನೊಂದರ ಹೊತ್ತಿಗೆ ಪತ್ತೆಯಾಗಿದೆ. ಪೊಲೀಸ್ ಅಧಿಕಾರಿ ಫರ್ಮೂದ್ ಅಲಿ ಪುಂದಿರ್ ಅವರು ಹೇಳಿದ್ದಾರೆ.
ಮೋರಿ ಬಳಿ ಹಾಕಿದ್ದ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಭಾಗದ ಒಳಗೆ ಭ್ರೂಣ ಕಂಡುಬಂದಿದೆ. ಮೇಲ್ನೋಟಕ್ಕೆ ಕಂಡುಬರುವಂತೆ ಐದು ತಿಂಗಳ ಭ್ರೂಣದಂತೆ ಇದೆ. ಸದ್ಯಕ್ಕೆ ದೂರು ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಭ್ರೂಣವನ್ನು ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇಪ್ಪತ್ತು ವಾರಗಳು ತುಂಬಿದ ನಂತರ ಗರ್ಭಪಾತ ಮಾಡಿಸಿಕೊಳ್ಳುವುದು ಭಾರತದಲ್ಲಿ ಕಾನೂನುಬಾಹಿರ. ಅಪರೂಪದ ಪ್ರಕರಣಗಳಲ್ಲಿ ಇಪ್ಪತ್ತು ವಾರಕ್ಕೆ ಮೀರಿದ ಗರ್ಭವನ್ನು ತೆಗೆಸಲು ಕೋರ್ಟ್ ಅನುಮತಿಸುತ್ತದೆ.












Click it and Unblock the Notifications