ಹುಟ್ಟುಹಬ್ಬದ ದಿನವೇ ಆತ್ಮಹತ್ಯೆ ಮಾಡಿಕೊಂಡ 12 ವರ್ಷದ ಬಾಲಕ
ನೋಯ್ಡಾ, ನವೆಂಬರ್ 26: ಹುಟ್ಟುಹಬ್ಬದ ದಿನವೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 12 ವರ್ಷದ ಬಾಲಕನ ಶವ ಪತ್ತೆಯಾಗಿದೆ.
ಆತ್ಮಹತ್ಯೆ ಎಂದು ಅಂದಾಜಿಸಲಾಗಿದೆ. ಬಾಲಕನ ಮನೆಯಲ್ಲೇ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು.
ತಾಯಿಯಿಂದ ವಂಚನೆ: ಮಗಳು ಆತ್ಮಹತ್ಯೆ ಗೆ ಯತ್ನ
ನವೆಂಬರ್ 24ರಂದು ಘಟನೆ ನಡೆದಿದ್ದಾಗಿ, ಎಡಿಜಿಪಿ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದ ತತಕ್ಷಣ ನಾವು ಅವರ ಮನೆಗೆ ಹೋಗಿದ್ದೇವೆ.
ಆದರೆ ಆತ್ಮಹತ್ಯೆ ಹಿಂದಿರುವ ಕಾರಣಗಳು ಇನ್ನೂ ತಿಳಿದುಬಂದಿಲ್ಲ, ಪೋಷಕರ ಬಳಿ ಯಾವ ವಿಚಾರಕ್ಕಾದರೂ ಜಗಳ ನಡೆದಿದೆಯೇ, ಅಥವಾ ಸ್ನೇಹಿತರ ಬಳಿ ಏನಾದರೂ ಗಲಾಟೆ ನಡೆದಿತ್ತೇ, ಅಥವಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಇಲ್ಲಿಯವರೆಗೂ ಅಂತಹ ಯಾವುದೇ ವಿಚಾರಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ, ಪೋಷಕರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ.