• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಉದ್ಘಾಟನೆ

|
Google Oneindia Kannada News

ನವದೆಹಲಿ, ಜುಲೈ 5: ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಕೊವಿಡ್ ಕೇರ್ ಆಸ್ಪತ್ರೆ(SPCCCH)ಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಭಾನುವಾರದಂದು ಲೋಕಾರ್ಪಣೆ ಮಾಡಿದರು.

10 ಸಾವಿರ ಬೆಡ್ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯು ದೆಹಲಿಯ ಕಂಟೋನ್ಮೆಂಟ್ ಪ್ರದೇಶ ಹರ್ಯಾಣ ಗಡಿಭಾಗದ ಚಟ್ಟರ್ ಪುರ್ ಸಮೀಪವಿದೆ. ಕೇಂದ್ರ ಗೃಹ ಸಚಿವಾಲಯ, ಡಿಆರ್ ಡಿಒ ಸಹಕಾರದೊಂದಿಗೆ ಈ ಬೃಹತ್ ಆಸ್ಪತ್ರೆ ನಿರ್ಮಾಣಗೊಂಡಿದೆ.

ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?

ದೀನ್ ದಯಾಳ್ ಆಸ್ಪತ್ರೆ, ಮದನ್ ಮೋಹನ್ ಮಾಳವೀಯ ಆಸ್ಪತ್ರೆ ಜೊತೆಗೆ SPCCCH ಸಂಪರ್ಕ ಹೊಂದಲಾಗಿದೆ. ಇದಲ್ಲದೆ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯನ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡಾ SPCCHಗೆ ರೋಗಿಗಳನ್ನು ಕಳಿಸಬಹುದಾಗಿದೆ.

ಸದ್ಯಕ್ಕೆ ಐಟಿಬಿಪಿ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದು, 2000 ಬೆಡ್ಮ್ 170 ತಜ್ಞ ವೈದ್ಯರು, 700 ನರ್ಸ್, ತುರ್ತು ಸೇವಾ ಸಿಬ್ಬಂದಿಗಳನ್ನು ಬಳಸಲಾಗುತ್ತಿದೆ. ಈ ಆಸ್ಪತ್ರೆ 1700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳಲ್ಲಿ 50 ಹಾಸಿಗೆ, 75ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಿವೆ.

World’s largest Covid Care facility inaugurated in Delhi

ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

ದೆಹಲಿಯಲ್ಲಿ ಕೊವಿಡ್ 19 ಕೇಸ್ ಸಂಖ್ಯೆ 94 695ಗೇರಿದೆ. 26 148 ಸಕ್ರಿಯ ಪ್ರಕರಣಗಳಿವೆ. 65 624 ಗುಣಮುಖರಾಗಿದ್ದರೆ, 2923 ಮಂದಿ ಮೃತಪಟ್ಟಿದ್ದಾರೆ.

English summary
Delhi Lieutenant Governor Anil Baijal inaugurated the 10,000-bedded Sardar Patel Covid Care Centre and Hospital (SPCCCH) at Radha Soami Satsang Beas on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X