ದೆಹಲಿ ವಿಮಾನ ನಿಲ್ದಾಣದಲ್ಲಿ ಜಗತ್ತಿನ ಅತಿ ದೊಡ್ಡ ಚರಕ

Posted By:
Subscribe to Oneindia Kannada

ನವದೆಹಲಿ, ಜುಲೈ 06: ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ಬಳಿ ಜಗತ್ತಿನ ಅತಿ ದೊಡ್ಡ ಚರಕ ಸ್ಥಾಪಿಸಲಾಗಿದೆ. ಈ ಬೃಹತ್ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಲೋಕಾರ್ಪಣೆ ಮಾಡಿದ್ದಾರೆ.

ಈ ಚರಕವು 27 ಅಡಿ ಉದ್ದ ಹಾಗೂ 15 ಅಡಿ ಎತ್ತರವಿದೆ, ಆನೆ ಚಿತ್ರ ಹಾಗೂ ಸೂರ್ಯನ ಪ್ರತಿಮೆಗಳನ್ನು ಒಳಗೊಂಡಿದೆ. ಅಹಮದಾಬಾದಿನ 42 ಕಾರ್ವಿುಕರು 50 ದಿನ ಸತತ ಕೆಲಸ ಮಾಡಿ ಇದನ್ನು ನಿರ್ವಿುಸಿದ್ದಾರೆ.

 World's largest charkha unveiled at T3 airport

ಚರಕ ಪ್ರತಿಷ್ಠಾಪಿಸಿರುವುದು ಭಾರತದ ಗತವೈಭವ ಸಾರಲು ಮತ್ತು ಸಾಮರಸ್ಯ ಮೌಲ್ಯಗಳನ್ನು ಬಿಂಬಿಸಲು, ಮಹಾತ್ಮಾ ಗಾಂಧಿಯವರ ಆದರ್ಶ ಸಮಾನತಾವಾದ ಸಾರುವುದು ನಮ್ಮ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಲಿಖಿತ ಹೇಳಿಕೆ ನೀಡಿದ್ದಾರೆ.

 World's largest charkha unveiled at T3 airport

ಬರ್ಮಾದಿಂದ ತೇಗದ ಮರ ಆಮದು ಮಾಡಿಕೊಂಡು ಈ ಚರಕ ನಿರ್ಮಿಸಲಾಗಿದ್ದು, 50 ವರ್ಷಗಳ ಅವಧಿ ನೀಡಲಾಗಿದೆ.
 World's largest charkha unveiled at T3 airport

ಇಂದಿರಾಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ ಗಳಲ್ಲಿ ವೊರ್ಲಿ ಕಲೆ, ಅನೆ ಪ್ರತಿಮೆ, ಸೂರ್ಯ ವಿಗ್ರಹ, ನಿಲ್ದಾಣದ ಒಳಗೆ ಬುದ್ಧದ ಮೂರ್ತಿ ಇವೆ ಎಂದು ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವ ಕಲ್ ರಾಜ್ ಮಿಶ್ರಾ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Delhi : World's largest charkha (spinning wheel) was unveiled today at the Terminal 3 terminal of IGI Airport here.
Please Wait while comments are loading...