ಸಂಭೋಗಕ್ಕೆ ನಿರಾಕರಿಸಿದ ಬಾಯ್ ಫ್ರೆಂಡ್ ಮರ್ಮಾಂಗ ಕತ್ತರಿಸಿದ ಗರ್ಲ್ ಫ್ರೆಂಡ್

ನವದೆಹಲಿ, ಜೂನ್ 23 : ಮದುವೆ ಹಾಗೂ ಸಂಭೋಗಕ್ಕೆ ಒಪ್ಪದ 35 ವರ್ಷದ ಪ್ರಿಯಕರನ ಮರ್ಮಾಂಗವನ್ನು ಯುವತಿಯೊಬ್ಬಳು ಕತ್ತರಿಸಿ ಹಾಕಿರುವ ಘಟನೆ ದೆಹಲಿಯ ಮಂಗಳಪುರಿಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

22 ವರ್ಷದ ಯುವತಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾಳೆ. ಇದಕ್ಕೆ ಪ್ರಿಯಕರ ಒಪ್ಪದಿದ್ದಾಗ ಆತನನ್ನು ಬಾತ್ ರೂಂಮಿಗೆ ಕರೆದೊಯ್ದಿದು ಸೆಕ್ಸ್ ಮಾಡುವಂತೆ ಪೀಡಿಸಿದ್ದಾಳೆ. ಪ್ರಿಯಕರ ಇದಕ್ಕೆ ನಿರಾಕರಿಸಿದಕ್ಕೆ ಕೋಪಗೊಂಡ ಯುವತಿ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.

Woman chops off her boyfriend genitals after he refused to have physical relationship

ಘಟನೆ ಬಳಿಕ ಯುವತಿ ಪೋಷಕರೊಂದಿಗೆ ತಲೆ ಮರೆಸಿಕೊಂಡಿದ್ದು ಮಂಗಳಪುರಿ ಪೊಲೀಸರು ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಮರ್ಮಾಂಗ ಛೇದನಕ್ಕೆ ಗುರಿಯಾದ ವ್ಯಕ್ತಿಯನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಶಿಶ್ನವನ್ನು ಜೋಡಿಸಿದ್ದಾರೆ.

ಸದ್ಯ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು ಜೋಡಿಸಲ್ಪಟ್ಟಿರುವ ಆತನ ಶಿಶ್ನ ಮತ್ತೆ ಹಿಂದಿನಂತಾಗದಿರುವ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+