ಸಂಭೋಗಕ್ಕೆ ಒಪ್ಪದ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರೇಯಸಿಯ ಬಂಧನ
ನವದೆಹಲಿ, ಜೂನ್ 26 : ಮದುವೆ ಹಾಗೂ ಸಂಭೋಗಕ್ಕೆ ನಿರಾಕರಿಸಿದ್ದಕ್ಕೆ ತನ್ನ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ 23 ವರ್ಷದ ಮಹಿಳೆಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಭಾನುವಾರದಂದು ಸಹೋದರ ಹಾಗೂ ಅತ್ತಿಗೆಯನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದು, ನಂತರ ಮಹಿಳೆಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ರಾತ್ರಿ ದೆಹಲಿಯ ಮಂಗಳಪುರಿಯ 22 ವರ್ಷದ ಯುವತಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾಳೆ. ಇದಕ್ಕೆ ಪ್ರಿಯಕರ ಒಪ್ಪದಿದ್ದಾಗ ಆತನನ್ನು ಬಾತ್ ರೂಂಮಿಗೆ ಕರೆದೊಯ್ದಿದು ಸೆಕ್ಸ್ ಮಾಡುವಂತೆ ಪೀಡಿಸಿದ್ದಳು.
ಪ್ರಿಯಕರ ಇದಕ್ಕೆ ನಿರಾಕರಿಸಿದಕ್ಕೆ ಕೋಪಗೊಂಡ ಯುವತಿ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿ ನಂತರ ಮಹಿಳೆ ಹಾಗೂ ಆಕೆಯ ಮನೆಯವರು ಪರಾರಿಯಾಗಿದ್ದರು.












Click it and Unblock the Notifications