ದೆಹಲಿಯಲ್ಲಿ ಮಹಿಳೆ ಮೇಲೆ ಬಿಪಿಓ ಉದ್ಯೋಗಿಗಳಿಂದ ಅತ್ಯಾಚಾರ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 13 : ಮೂವತ್ತು ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐವರು ಬಿಪಿಓ ಉದ್ಯೋಗಿಗಳನ್ನು ಭಾನುವಾರ ನವದೆಹಲಿಯಲ್ಲಿ ಬಂಧಿಸಲಾಗಿದೆ.

ಪೂರ್ವ ದೆಹಲಿಯ ಪಾಂಡವ್ ನಗರದ ಫ್ಲಾಟೊಂದರಲ್ಲಿ ಕೂಡಿಹಾಕಿದ ದುಷ್ಕರ್ಮಿಗಳು ತನ್ನನ್ನು ಒಬ್ಬರಾದಮೇಲೆ ಒಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ನೇಪಾಳ ಮೂಲದ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮಹಿಳೆ ಮೊದಲನೇ ಮಹಡಿಯಿಂದ ಜಿಗಿದ ಪರಿಣಾಮವಾಗಿ ಆಕೆಯ ಕಾಲುಗಳು ಮುರಿದಿವೆ. ಅತ್ಯಾಚಾರ ಎಸಗಿದವರೆಲ್ಲೂ ಬೇರೆಬೇರೆ ಬಿಪಿಓ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.[ಕಳ್ಳರಿಂದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ]

Woman allegedly gangraped in Delhi by BPO workers

ದುಷ್ಕರ್ಮಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ, ಬಲವಂತವಾಗಿ ಕೂಡಿಹಾಕಿದ ಮತ್ತು ಅಸ್ವಾಭಾವಿಕವಾಗಿ ಲೈಂಗಿಕ ಕೃತ್ಯ ಎಸಗಿದ ಕೇಸನ್ನು ದಾಖಲಿಸಿಕೊಳ್ಳಲಾಗಿದೆ. ಅತ್ಯಾಚಾರಿಗಳನ್ನು ಲಕ್ಷ್ಯ, ವಿಕಾಸ್ ಕುಮಾರ್, ನವೀನ್, ಸ್ವಸ್ತಿಕ್ ಮತ್ತು ಪ್ರತೀಕ್ ಎಂದು ಗುರುತಿಸಲಾಗಿದೆ.[ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ]

ಮೊದಲಿಗೆ, ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಗೆ ಪರಿಚಯವಿರುವ ವಿಕಾಸ್ ಎಂಬಾತ ಆಕೆಯನ್ನು ಫ್ಲಾಟಿಗೆ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ಕೆಲಸವಿದೆ ಎಂದು ಆಕೆಯನ್ನು ಫ್ಲಾಟಿನಲ್ಲಿ ಬಿಟ್ಟು ಹೋಗಿದ್ದಾನೆ. ಆಗಲೇ ಅಲ್ಲಿ ಐವರು ವಿಕಾಸ್ ಸ್ನೇಹಿತರಿದ್ದರು.

ಅವರು ತನಗೆ ಮದ್ಯ ಬಲವಂತವಾಗಿ ಸೇವಿಸುವಂತೆ ಮಾಡಿ ನಂತರ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ದೂರಿದ್ದಾಳೆ. ಆದರೆ, ಆಕೆ ತನ್ನ ಹೇಳಿಕೆಗಳನ್ನು ಬದಲಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A married woman has been allegedly gangraped by 5 BPO employeed in New Delhi on Sunday morning. Woman of Nepal origin with two kids has been changing her statements. 5 youth have been arrested by police.
Please Wait while comments are loading...