ಚಿತ್ರಗಳಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ

ನವದೆಹಲಿ, ಮೇ.4 : 2013ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು. ಕವಿ ಗುಲ್ಜಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶನಿವಾರ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ 61ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು. ಕಳೆದ ಏ. 16ರಂದು 2013ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. 'ಶಿಪ್ ಆಫ್ ಥೀಸಸ್'ಗೆ ಅತ್ಯುತ್ತಮ ಚಿತ್ರ ಮತ್ತು 'ಭಾಗ್ ಮಿಲ್ಕಾ ಭಾಗ್'ಗೆ ಬಹು ಜನಪ್ರಿಯ ಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕನ್ನಡಕ್ಕೆ ಈ ಬಾರಿ ನಾಲ್ಕು ಪ್ರಶಸ್ತಿಗಳು ದೊರೆತಿದ್ದವು. 'ಡಿಸೆಂಬರ್ 1' ಸಿನಿಮಾದ ಮೂಲ ಚಿತ್ರಕತೆಗಾಗಿ ಪಿ ಶೇಷಾದ್ರಿ, ನಿರ್ಮಾಣಕ್ಕಾಗಿ ಬಸಂತ್‌ ಕುಮಾರ್ ಪಾಟೀಲ್ ಪ್ರಶಸ್ತಿ ಪಡೆದಿದ್ದರು. ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿಯೂ 'ಡಿಸೆಂಬರ್ 1' ಹೊರಹೊಮ್ಮಿತ್ತು. 'ಪ್ರಕೃತಿ' ಸಿನಿಮಾದ ಅಳವಡಿಕೆ ಚಿತ್ರಕತೆಗಾಗಿ ಪಂಚಾಕ್ಷರಿ ಪ್ರಶಸ್ತಿ ಬಾಚಿಕೊಂಡಿದ್ದರೆ, ಲೇಖಕ ಯೂ ಆರ್ ಅನಂತಮೂರ್ತಿ ಕುರಿತ ಇಂಗ್ಲಿಷ್ ಸಾಕ್ಷ್ಯಚಿತ್ರಕ್ಕಾಗಿ ಗಿರೀಶ್ ಕಾಸರವಳ್ಳಿ, ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು. ಚಿತ್ರಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಗುಲ್ಜಾರ್ ಗೆ ದಾದಾ ಸಾಹೇಬ್ ಗೌರವ

ಗುಲ್ಜಾರ್ ಗೆ ದಾದಾ ಸಾಹೇಬ್ ಗೌರವ

ಕವಿ ಗುಲ್ಜಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ರಿತೀಶ್ ದೇಶ್ ಮುಖ್

ಪ್ರಶಸ್ತಿ ಸ್ವೀಕರಿಸಿದ ರಿತೀಶ್ ದೇಶ್ ಮುಖ್

ನಟ ರಿತೇಶ್ ದೇಶ್ ಮುಖ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಮರಾಠಿ ಚಿತ್ರ ಎಲ್ಲೋ ನಿರ್ಮಾಣಕ್ಕಾಗಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆದರು.

ಪ್ರಶಸ್ತಿ ಸ್ವೀಕರಿಸಿದ ಗಣೇಶ್ ಆಚಾರ್ಯ

ಪ್ರಶಸ್ತಿ ಸ್ವೀಕರಿಸಿದ ಗಣೇಶ್ ಆಚಾರ್ಯ

ಉತ್ತಮ ನೃತ್ಯ ನಿರ್ದೇಶನಕ್ಕಾಗಿ ಗಣೇಶ್ ಆಚಾರ್ಯ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪಡೆದ ಗೀತಾಂಜಲಿ

ಪ್ರಶಸ್ತಿ ಪಡೆದ ಗೀತಾಂಜಲಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೀತಾಂಜಲಿ ತಾಪಾ ಪಡೆದರು.

ಸೌರಭ್ ಶುಕ್ಲಾ ಅತ್ಯುತ್ತಮ ಪೋಷಕ ನಟ

ಸೌರಭ್ ಶುಕ್ಲಾ ಅತ್ಯುತ್ತಮ ಪೋಷಕ ನಟ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸೌರಭ್ ಶುಕ್ಲಾ ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+