Get Updates
Get notified of breaking news, exclusive insights, and must-see stories!

ಪತಿ ರೋಹಿತ್ ಕೊಲೆ ಬಳಿಕ ಅಪೂರ್ವದ್ದು ನಿಮಿಷಕ್ಕೊಂದು ಗೊಂದಲದ ಹೇಳಿಕೆ

ನವದೆಹಲಿ, ಏ.26: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಡಿ ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಆತನ ಪತ್ನಿಯೇ ಕೊಲೆ ಮಾಡಿರುವ ಸಂಗತಿ ಬಯಲಿಗೆ ಬಂದಿದೆ.

ರೋಹಿತ್ ಅವರ ಪತ್ನಿ ಅಪೂರ್ವ ತಿವಾರಿಯನ್ನು ತನಿಖೆ ಮಾಡುವ ವೇಳೆ ನಿಮಿಷಕ್ಕೊಂದು ಗೊಂದಲದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವೊಮ್ಮೆ ಹೌದು ಪತಿಯನ್ನು ಕೊಂದಿದ್ದು ನಾನೇ ಎಂದು ಒಪ್ಪಿಕೊಳ್ಳುತ್ತಾರೆ ಇನ್ನೂ ಕೆಲ ಕ್ಷಣ ಏನನ್ನೂ ಉತ್ತರಿಸದೆ ಸುಮ್ಮನಾಗಿಬಿಡುತ್ತಾರೆ.

ಏ.15-16ರ ನಡುವೆ ರೋಹಿತ್ ತಿವಾರಿಯನ್ನು ಅಪೂರ್ವ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಹಾಗೂ ಗಂಡ-ಹೆಂಡತಿ ನಡುವೆ ಅವರ ತಾಯಿ ಪ್ರತಿ ವಿಚಾರ ಮೂಗುತೂರಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.

ರೋಹಿತ್ ತಿವಾರಿ ಕೊಲೆಯಾಗಬೇಕಾದರೆ ಎಲ್ಲಿದ್ದರು?

ರೋಹಿತ್ ತಿವಾರಿ ಕೊಲೆಯಾಗಬೇಕಾದರೆ ಎಲ್ಲಿದ್ದರು?

ರೋಹಿತ್ ಕೊಲೆಯಾಗುವ ದಿನ ಡಿಫೆನ್ಸ್ ಕಾಲೊನಿಯ ರೂಮೊಂದರಲ್ಲಿ ರೋಹಿತ್ ತಿವಾರಿ ಹಾಗೂ ಅಪೂರ್ವ ಉಳಿದುಕೊಂಡಿದ್ದರು. ರೋಹಿತ್ ತಿವಾರಿ ಸಹೋದರಿ ಜೊತೆಗೆ ಮನಸ್ತಾಪಗಳಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಸಹೋದರಿ ಜೊತೆಯಲ್ಲೇ ಕುಳಿತು ಕುಡಿಯುತ್ತಿದ್ದರು

ಸಹೋದರಿ ಜೊತೆಯಲ್ಲೇ ಕುಳಿತು ಕುಡಿಯುತ್ತಿದ್ದರು

ಸಹೋದರಿ ಜೊತೆಯಲ್ಲಿ ಕುಳಿತು ವಿಪರೀತ ಕುಡಿಯುವುದು ನನಗೆ ಇಷ್ಟವಾಗುತ್ತಿರಲಿಲ್ಲ ಆ ಕುರಿತು ರೋಹಿತ್‌ಗೂ ಹೇಳಿದ್ದೆ. ಅವರು ಉತ್ತರಾಖಂಡದಿಂದ ವಾಪಸಾದಾಗ ಸಹೋದರಿ ಜೊತೆಗೆ ಕುಳಿತು ಒಂದೇ ಗ್ಲಾಸಿನಲ್ಲಿ ಕುಡಿಯುತ್ತಿದ್ದರು. ಇದು ನನಗೆ ಹೆಚ್ಚು ಕೋಪ ತರಿಸಿತ್ತು. ಕುತ್ತಿಗೆಗೆ ಮೊದಲು ಹೊಡೆದು ಆತ ಕೂಗಿಕೊಳ್ಳಬಾರದು ಎಂದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿದ್ದಾಗಿ ತಿಳಿಸಿದ್ದಾರೆ.

ಅಪೂರ್ವಳಿಗೆ ಆಸ್ತಿಯಲ್ಲಿ ಪಾಲು ಕೊಡದಿರಲು ಯೋಚಿಸಿದ್ದರು

ಅಪೂರ್ವಳಿಗೆ ಆಸ್ತಿಯಲ್ಲಿ ಪಾಲು ಕೊಡದಿರಲು ಯೋಚಿಸಿದ್ದರು

ಜಿಲ್ಲಾ ಬಾರ್ ಅಸೋಸಿಯೇಷನ್ ಬರೆದ ಪತ್ರವನ್ನು ಪರಿಶೀಲಿಸಿದಾಗ ರೋಹಿತ್ ತಿವಾರಿ ಕುಟುಂಬವು ಅಪೂರ್ವಳಿಗೆ ಆಸ್ತಿಯಲ್ಲಿ ಪಾಲನ್ನು ನೀಡದಿರಲು ನಿರ್ಧರಿಸಿರುವುದು ಸ್ಪಷ್ಟವಾಗಿತ್ತು.

ರೋಹಿತ್‌ಗೆ ಹೃದಯಾಘಾತವಾಗಿರಲಿಲ್ಲ ಅದು ಕೊಲೆ

ರೋಹಿತ್‌ಗೆ ಹೃದಯಾಘಾತವಾಗಿರಲಿಲ್ಲ ಅದು ಕೊಲೆ

ಪ್ರಕರಣ ಏನು? ರೋಹಿತ್ ತಿವಾರಿ ಕೊಲೆಗೆ ಕಾರಣವೇನು? ರೋಹಿತ್ ತಿವಾರಿ ಅವರು ನವದೆಹಲಿಯಿಂದ ಏ.16ರಂದು ಮನೆಗೆ ಮರಳಿದ್ದರು. ಮನೆಗೆ ಬರುವಾಗ ಮದ್ಯಪಾನ ಮಾಡಿದ್ದು, ನಿಲ್ಲಲಾಗದ ಪರಿಸ್ಥಿತಿಯಲ್ಲಿದ್ದರು. ಬಳಿಕ ಗೋಡೆಯನ್ನು ಹಿಡಿದುಕೊಂಡೇ ಒಳಗೆ ಪ್ರವೇಶಿಸಿದ್ದರು.ಅದೇ ದಿನ ಅವರ ಪತ್ನಿ ಅಪೂರ್ವ ತಿವಾರಿ ರೋಹಿತ್ ಅವರ ಕೋಣೆಗೆ ಹೋಗಿ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹೃದಯಾಘಾತವೆಂದು ಸುಳ್ಳು ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+