ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಬಲ ಮೋದಿ ಚೀನಾ ಅಧ್ಯಕ್ಷರಿಗೆ ಹೆದರಿದ್ದಾರೆ, ರಾಹುಲ್ ಲೇವಡಿ

|
Google Oneindia Kannada News

ನವದೆಹಲಿ, ಮಾರ್ಚ್ 14: ದುರ್ಬಲ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಹೆದರಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಪುಲ್ವಾಮಾ ದಾಳಿಗೆ ಕಾರಣವಾದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ಗೆ ಜಾಗತಿಕ ಉಗ್ರ ಪಟ್ಟ ಕಟ್ಟಲು ಅಮೆರಿಕ ಮುಂದಾಗಿತ್ತು ಆದರೆ ಕೊನೆಯ ಹಂತದಲ್ಲಿ ಚೀನಾವು ಅಡ್ಡಗಾಲು ಹಾಕಿತ್ತು. ಹಾಗಾಗಿ ಉಗ್ರನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಮೋದಿ ವಿಫಲರಾಗಿದ್ದಾರೆ. ಚೀನಾದ ಅಧ್ಯಕ್ಷರಿಗೆ ಹೆದರಿದ್ದಾರೆ ಎಂದು ಆರೋಪಿಸಿದ್ದಾರೆ.

Weak Modi is scared of Xi Jinping says Rahul Gandhi

ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!ನರೇಂದ್ರ... ಕ್ಷಮಿಸಿ... ಅಲ್ಲ ನೀರವ್, ಛೆಛೆ ನೀರವ್ ಅಲ್ಲ ನರೇಂದ್ರ!

ಅತ್ತ ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಭಾರತದ ಕಾರ್ಯಕ್ಕೆ ಚೀನಾ ಮತ್ತೆ ಅಡ್ಡಿಯಾಗಿದ್ದು, ಈ ವಿಚಾರವನ್ನು ಕಾಂಗ್ರೆಸ್ ರಾಜತಾಂತ್ರಿಕ ದುರಂತ ಎಂದು ಬಣ್ಣಿಸಿತ್ತು. ಇದರ ಬೆನ್ನಲ್ಲೇ ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕ್ಸಿ ಜಿನ್ ಪಿಂಗ್ ಗೆ ಮೋದಿ ಹೆದರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲು ಹಾಕಿದರೂ ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಚೀನಾ ವಿರುದ್ಧ ಒಂದೇ ಒಂದೇ ಮಾತನ್ನೂ ಆಡಿಲ್ಲ. ಹಾಗಾದರೇ ದುರ್ಬಲ ಮೋದಿ ಚೀನಾಕ್ಕೆ ಹೆದರಿದರೇ.. ಇದೇ ಏನು ಮೋದಿ ವಿದೇಶಾಂಗ ನೀತಿ.. ಎಂದು ಟೀಕಿಸಿದ್ದಾರೆ.

English summary
A day after China blocked India’s request at the United Nations Security Council (UNSC) to declare JeM chief Masood Azhar as a global terrorist for the fourth time by putting a technical hold, Congress President Rahul Gandhi on Thursday slammed PM Narendra Modi over his China Diplomacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X