ಭಾರತಕ್ಕೆ ಆರಂಭದಲ್ಲಿ 4 ರಿಂದ 5 ಕೋಟಿ ಕೋವಿಶೀಲ್ಡ್‌ ಲಸಿಕೆ ಸಿದ್ಧ

ನವದೆಹಲಿ, ಡಿಸೆಂಬರ್ 28: ದೇಶದಲ್ಲಿ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅನ್ನು ಕೆಲವೇ ದಿನಗಳಲ್ಲಿ ಅನುಮತಿ ಸಿಕ್ಕ ತಕ್ಷಣ ಬಿಡುಗಡೆ ಮಾಡಲಿದ್ದು, ಕಂಪನಿಯು ಈಗಾಗಲೇ 4 ರಿಂದ 5 ಕೋಟಿ ಡೋಸ್ ಲಸಿಕೆ ಸಿದ್ಧಪಡಿಸಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲಾ ಸೋಮವಾರ ಎಎನ್‌ಐಗೆ ತಿಳಿಸಿದ್ದಾರೆ.

ಲಸಿಕೆ ಎಷ್ಟು ಮತ್ತು ಎಷ್ಟು ಬೇಗನೆ ಬೇಕಾಗಬಹುದು ಎಂಬುದನ್ನು ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದು, ಏಷ್ಯಾದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜುಲೈ 2021ರ ವೇಳೆಗೆ 300 ಮಿಲಿಯನ್ ಡೋಸ್ ಗುರಿಯನ್ನು ಹೊಂದಿದ್ದಾರೆ.

2021ರ ಮೊದಲ ಆರು ತಿಂಗಳಲ್ಲಿ ಜಾಗತಿಕ ಕೊರತೆ ಉಂಟಾಗಲಿದೆ ಮತ್ತು ಇದಕ್ಕೆ ಯಾವುದೇ ಪರಿಹಾರವಿಲ್ಲ ಎಂದು ಅವರು ಹೇಳಿದರು. ಆದರೆ ಆಗಸ್ಟ್‌-ಸೆಪ್ಟೆಂಬರ್ 2021ರ ವೇಳೆಗೆ ಇತರೆ ಲಸಿಕೆ ತಯಾರಕರು ಲಸಿಕೆ ಪೂರೈಸಿದರೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಭಾರತವು ಕೋವ್ಯಾಕ್ಸ್‌ನ ಭಾಗವಾಗಿದ್ದು, ನಾವು ತಯಾರಿಸುವ ಲಸಿಕೆಯಲ್ಲಿ ಶೇಕಡಾ 50ರಷ್ಟು ಭಾಗವನ್ನು ಭಾರತಕ್ಕೆ ನೀಡುತ್ತೇವೆ ಎಂದಿದ್ದಾರೆ.

We have 40-50 million doses of Covishield stockpiled: Adar Poonawalla

ಈ ಹಿಂದೆ, ಜನವರಿಯಲ್ಲಿ ಭಾರತದಲ್ಲಿ ಕೊರೊನಾವೈರಸ್‌ಗೆ ಸಂಭಾವ್ಯ ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿತ್ತು. ಮೂಲಗಳ ಪ್ರಕಾರ ಅದು ಶೀಘ್ರದಲ್ಲೇ ಆಕ್ಸ್‌ಫರ್ಡ್ ನಿರ್ಮಿತ ಕೋವಿಡ್ -19 ಲಸಿಕೆಯನ್ನು ಅನುಮೋದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+