ಸೈನ್ಯ ಹಾಗೂ ಸರ್ಕಾರದ ಜೊತೆ ನಾವಿದ್ದೇವೆ, ಪ್ರತೀಕಾರ ಪಡೆಯಿರಿ: ರಾಹುಲ್
ನವದೆಹಲಿ, ಫೆಬ್ರವರಿ 15: ಪ್ರತಿ ವಿಷಯಕ್ಕೂ ಮೋದಿ ವಿರುದ್ಧ ಮಾತನಾಡುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನಿನ್ನೆ ನಡೆದ ಉಗ್ರರ ದಾಳಿ ವಿಷಯವಾಗಿ ಮೋದಿಯ ಬೆನ್ನಿಗೆ ನಿಂತಿದ್ದಾರೆ.
ಉಗ್ರರ ದಾಳಿಗೆ ಪ್ರತೀಕಾರ ಪಡೆಯಿರಿ ನಾವು ನಿನ್ನ ಬೆಂಬಲಕ್ಕೆ ಇದ್ದೇವೆ ಎಂದು ರಾಹುಲ್ ಗಾಂಧಿ ಅವರು ಇಂದು ಸರ್ಕಾರಕ್ಕೆ ಹೇಳಿದ್ದಾರೆ. ವಿರೋಧ ಪಕ್ಷಗಳು ಸೇನೆಯ ಜೊತೆ, ಸರ್ಕಾರದ ಜೊತೆ ಇದೆ ಎಂದು ರಾಹುಲ್ ಹೇಳಿದ್ದಾರೆ.
ಇಂತಹಾ ಸಂದರ್ಭದಲ್ಲಿ ರಾಜಕಾರಣ ಚರ್ಚೆ ಮಾಡುವುದು ತರವಲ್ಲ ಎಂದು ಪ್ರಬುದ್ಧತೆ ಮೆರೆದಿರುವ ರಾಹುಲ್, ಕೃತ್ಯಕ್ಕೆ ಕಾರಣರಾದವರಿಗೆ ಕೂಡಲೇ ತಕ್ಕ ಉತ್ತರ ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.

ಪತ್ರಕರ್ತರು ಪದೇ-ಪದೇ ಕೇಳಿದ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ರಾಹುಲ್ ಗಾಂಧಿ, ಇದು ರಾಜಕೀಯ ಮಾತನಾಡಲು ಸಮಯವಲ್ಲ, ಇದು ಶೋಕದ ಸಮಯ, ನಾವು ಸೈನಿಕರ ಕುಟುಂಬಕ್ಕೆ ಧೈರ್ಯ ತುಂಬಬೇಕಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿ, ಕಾಂಗ್ರೆಸ್ ಈ ಉಗ್ರರ ದಾಳಿಯನ್ನು ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.












Click it and Unblock the Notifications