ಎನ್ ಸಿಸಿ ಬದುಕಿನ ಪಾಠ ಕಲಿಸಿದೆ: ಮೋದಿ
ನವದೆಹಲಿ, ಜ,28: ಇಲ್ಲಿನ ಗ್ಯಾರಿಸನ್ ಪರೇಡ್ ಮೈದಾನದಲ್ಲಿ ನಡೆದ ಎನ್ ಸಿಸಿ ಮೆರವಣಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲ್ಯದ ದಿನಗಳನ್ನು ಸ್ಮರಸುವಂತೆ ಮಾಡಿತು. ನನ್ನ ಜೀವನಕ್ಕೆ ಎನ್ ಸಿಸಿ ಭದ್ರ ಬುನಾದಿ ಹಾಕಿಕೊಟ್ಟಿತು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಬುಧವಾರ ದೆಹಲಿ ಕಂಟೋನ್ಮೆಂಟ್ ನ ಗ್ಯಾರಿಸನ್ ಪರೇಡ್ ಗ್ರೌಂಡ್ ನಲ್ಲಿ ನಡೆದ National Cadet Corps(ಎನ್ ಸಿಸಿ) ಪರೇಡ್ ನಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಎನ್ ಸಿಸಿ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿತು. ಚಿಕ್ಕಂದಿನಲ್ಲಿ ಎನ್ ಸಿಸಿ ಕ್ಯಾಂಪಿಗೆ ಹೋಗುವುದೆಂದರೆ ಹಬ್ಬವಾಗಿತ್ತು. ಸಂಭ್ರಮದ ಜೊತೆಗೆ ಜವಾಬ್ದಾರಿಯನ್ನು ಎನ್ ಸಿಸಿ ನನಗೆ ಹೇಳಿಕೊಟ್ಟಿತು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು, ವಿಡಿಯೋ ತುಣುಕು (ಕೊನೆ ಸ್ಲೈಡ್ ನಲ್ಲಿ) ಇಲ್ಲಿದೆ ಓದಿ.. ಚಿತ್ರ ಕೃಪೆ: PMO india ಹಾಗೂ ನರೇಂದ್ರ ಮೋದಿ ಫೇಸ್ ಬುಕ್ ಪುಟ

ಯುವತಿಯರು ಹೆಚ್ಚು ಭದ್ರತಾ ಪಡೆ ಸೇರಲಿ
ಗಣತಂತ್ರದ ದಿನ ಅಮೆರಿಕದಿಂದ ಬಂದಿದ್ದ ಅತಿಥಿಗಳಾದ ಬರಾಕ್ ಒಬಾಮಾ ಹಾಗೂ ಮಿಶೆಲ್ ಅಲ್ಲದೆ ಇಡೀ ವಿಶ್ವಕ್ಕೆ ಭಾರತೀಯ ನಾರಿಯರ ಶಕ್ತಿ ಪ್ರದರ್ಶನ ತೋರಿಸಲಾಯಿತು. ನನ್ನ ದೇಶದ ಯುವತಿ, ಬಾಲಕಿಯರು ಭದ್ರತಾ ಪಡೆ, ಎನ್ ಸಿಸಿ ಸೇರಿದಂತೆ ಸುರಕ್ಷತಾ ಪಡೆಗಳಿಗೆ ಹೆಚ್ಚೆಚ್ಚು ಸೇರಿಕೊಳ್ಳಲಿ. ಎಲ್ಲರಿಗೂ ಇದು ಸ್ಪೂರ್ತಿದಾಯಕ

ಎನ್ ಸಿಸಿ ಮಿನಿ ಭಾರತದ ಪರಿಚಯಿಸುತ್ತದೆ
ಎನ್ ಸಿಸಿ ಮೂಲಕ ಭಾರತವನ್ನು ಕಾಣುವ ಅವಕಾಶ ಸಿಗುತ್ತದೆ. ಚಿಕ್ಕಂದಿನಲ್ಲಿ ನನಗೆ ದೆಹಲಿಗೆ ಕ್ಯಾಂಪಿಂಗ್ ಗೆ ಹೋಗಿದ್ದು ದೊಡ್ಡ ವಿಷಯವಾಗಿತ್ತು. ನಿಮಗೂ ಇದು ಹೆಮ್ಮೆಯ ವಿಷಯವಾಗಲಿದೆ. ಎನ್ ಸಿಸಿ ಮಿನಿ ಭಾರತವನ್ನು ಪರಿಚಯಿಸುತ್ತದೆ.
ಯುವಜನಾಂಗದ ಕನಸುಗಳನ್ನು ಸಾಕಾರಗೊಳಿಸುತ್ತದೆ. ನಮ್ಮ ದೇಶದಲ್ಲಿ ಹೆಚ್ಚು ಯುವಕ/ತಿಯರು ಇರುವುದು ನಮ್ಮ ದೊಡ್ಡ ಶಕ್ತಿ

ಫೇಸ್ ಬುಕ್ ನಲ್ಲಿ ಮೋದಿ ಎನ್ ಸಿಸಿ ಫೋಟೊ
ಎನ್ ಸಿಸಿ ಸಮಾವೇಶ ಉದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಮೋದಿ ಅವರು ತಮ್ಮ ಎನ್ ಸಿಸಿ ದಿನಗಳ ಫೋಟೋ ಹಾಕಿದ್ದರು. ಇದಕ್ಕೆ 60 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಯುವ ಜನರಿಗೆ ಸ್ಪೂರ್ತಿ ತುಂಬಲು PMO ನಿಂದ ಮೋದಿ ಫೋಟೊ ಹಾಗೂ ಭಾಷಣ ಟ್ವೀಟ್ ಮಾಡಲಾಯಿತು.
|
ಎನ್ ಸಿಸಿಯಲ್ಲಿ ಯುವತಿಯರ ಸಂಖ್ಯೆ ಬಗ್ಗೆ
ಎನ್ ಸಿಸಿಯಲ್ಲಿ ಯುವತಿಯರ ಸಂಖ್ಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ ಅವರ ಟ್ವೀಟ್
ಎನ್ ಸಿಸಿ ಸಮಾವೇಶದಲ್ಲಿ ಮೋದಿ ಭಾಷಣ
ಎನ್ ಸಿಸಿ ಸಮಾವೇಶದಲ್ಲಿ ಮೋದಿ ಭಾಷಣದ ವಿಡಿಯೋ ತುಣುಕು ಇಲ್ಲಿದೆ
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications