ಗುಂಡೇಟಿನಿಂದ ಗಾಯಗೊಂಡ ವಾಯುಸೇನೆ ಉಪಾಧ್ಯಕ್ಷ ಡಿಯೋ
ನವದೆಹಲಿ, ಸೆಪ್ಟೆಂಬರ್ 27 : ವಾಯುಸೇನೆಯ ಉಪಾಧ್ಯಕ್ಷ ಏರ್ ಮಾರ್ಷಲ್ ಎಸ್.ಬಿ.ಡಿಯೋ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ.
ನವದೆಹಲಿಯ ನಿವಾಸದಲ್ಲಿ ಎಸ್.ಬಿ.ಡಿಯೋ ಅವರಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿದೆ. ತೊಡೆ ಭಾಗಕ್ಕೆ ಗುಂಡೇಟು ತಗುಲಿದ್ದು, ಚಿಕಿತ್ಸೆ ಮುಂದುವರೆದಿದೆ. ಪಿಸ್ತೂಲ್ ಅನ್ನು ಮನೆಯಲ್ಲಿ ಇಡುವಾಗ ಗುಂಡು ಸಿಡಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲಸ ಮುಗಿಸಿ ಬಂದು ಪಿಸ್ತೂಲ್ ಅನ್ನು ಇಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎಂದು ತಿಳಿದುಬಂದಿದ್ದು, ತಕ್ಷಣ ಕುಟುಂಬಸ್ಥರು ಅವರನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ.
ಭಾರತೀಯ ವಾಯುಸೇನೆ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2017ರ ಜವನರಿಯಲ್ಲಿ ಎಸ್.ಬಿ.ಡಿಯೋ ಅವರು ವಾಯುಸೇನೆ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಎಸ್.ಬಿ.ಡಿಯೋ ಅವರು ಜೂನ್ 15,1979ರಲ್ಲಿ ಪೈಲೆಟ್ ಆಗಿ ವಾಯುಸೇನೆ ಸೇರಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್‌ನಲ್ಲಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications