ಪೆಟ್ರೋಲ್, ಡೀಸೆಲ್ ಉಳಿಸಲು ಮೊಯ್ಲಿ ಸಲಹೆಗಳು!

ನವದೆಹಲಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವೀರಪ್ಪ ಮೊಯ್ಲಿ ಇಂಧನ ಉಳಿತಾಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಿದರು. ಈ ಕ್ರಮಗಳ ಮೂಲಕ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ 52 ಕೋಟಿ ರೂ.ಉಳಿಸುವ ಯೋಜನೆಯನ್ನು ಮೊಯ್ಲಿ ಹಾಕಿಕೊಂಡಿದ್ದಾರೆ.
ಸರ್ಕಾರಿ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಸ್ವಂತ ವಾಹನದ ಬದಲು ಬಸ್ಸಿನಲ್ಲಿ ಸಂಚರಿಸುವುದು. ಸಣ್ಣ ನಗರಗಳಲ್ಲಿ ಸರ್ಕಾರಿ ನೌಕರರಿಗೆ ಉಚಿತ ಸೈಕಲ್ ವಿತರಿಸುವುದು ಮತ್ತು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸರ್ಕಾರಿ ಕಚೇರಿಗಳ ಸಮಯವನ್ನು ಬದಲಿಸುವುದು ಮುಂತಾದ ಕ್ರಮಗಳನ್ನು ಮೊಯ್ಲಿ ಪ್ರಕಟಿಸಿದರು.
ಈ ಆಂದೋಲನ ದೇಶಾದ್ಯಂತ 6 ವಾರಗಳ ಕಾಲ ನಡೆಯಲಿದ್ದು, ಈ ಕ್ರಮಗಳಿಗೆ ಸಹಕರಿಸುವಂತೆ ಸಚಿವರು ಕೇಂದ್ರ ಸಿಬ್ಬಂದಿ ಸಚಿವಾಲಯ, ಮುಖ್ಯಮಂತ್ರಿಗಳು, ವಿವಿಧ ಸಾರ್ವಜನಿಕ ವಲಯದ ಕಂಪನಿಗಳಿಗೆ ಪತ್ರ ಬರೆದಿದ್ದಾರೆ.
ಮೊಯ್ಲಿ ಐಡಿಯಾ ಹೀಗಿವೆ
* ಸರ್ಕಾರಿ ಕಚೇರಿಗಳ ಸಮಯವನ್ನು ಬೇರೆ ಬೇರೆ ಸಮಯಗಳಿಗೆ ವಿಂಗಡಿಸುವುದು. ಇದರಿಂದ ಟ್ರಾಫಿಕ್ ಸಮಸ್ಯೆ ತಪ್ಪಿ, ಭಾರಿ ಪ್ರಮಾಣದ ಇಂಧನ ಉಳಿತಾಯವಾಗಲಿದೆ.
* ಕೇಂದ್ರ ಸರ್ಕಾರದ ಆಯಾ ಇಲಾಖೆಗಳು, ರಾಜ್ಯ ಸರ್ಕಾರಗಳು ತಮ್ಮ ತಮ್ಮ ಉದ್ಯೋಗಿಗಳಿಗೆ ವಾರಕ್ಕೊಮ್ಮೆ 'ಬಸ್ ಡೇ' ಕಡ್ಡಾಯಗೊಳಿಸಬೇಕು.
* ಸಣ್ಣ ಸಣ್ಣ ಪಟ್ಟಣಗಳಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಉಚಿತ ಸೈಕಲ್ ವಿತರಣೆ. [ಪೆಟ್ರೋಲ್ ಉಳಿಸಲು ಉಪಯುಕ್ತ ಮಾಹಿತಿ]












Click it and Unblock the Notifications