ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್' ಅಲ್ಲ: ಪೊಲೀಸರ ಮಾಹಿತಿ
ಲಕ್ನೋ, ಜುಲೈ17: ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್' ಅಲ್ಲ ಎಂದು ಉತ್ತರ ಪ್ರದೇಶದ ಪೊಲೀಸರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಿಯಮಗಳು ಹಾಗೂ ಕಾನೂನಿನ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಕಾರು ಅಪಘಾತವಾದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಆತ ಪ್ರಯತ್ನಿಸಿದಾಗ ಗುಂಡು ಹಾರಿಸಿದ್ದೇವೆ. ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು.
ಅವನನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರ ಗನ್ ವಶಕ್ಕೆ ಪಡೆದು ಗುಂಡು ಹಾರಿಸಿದ್ದ, ಹೀಗಾಗಿ ಅನಿವಾರ್ಯವಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಕಾಸ್ ದುಬೆ ಹತ್ಯೆ ನಡೆದಿದ್ದು ನಕಲಿ ಎನ್‌ಕೌಂಟರ್ ಅಲ್ಲ ಇದನ್ನು ತೆಲಂಗಾಣ ಪ್ರಕರಣದ ಜತೆ ತಾಳೆ ಹಾಕುವುದು ಸರಿ ಅಲ್ಲ ಡಿಜಿ ತಿಳಿಸಿದ್ದಾರೆ.
ವಿಕಾಸ್ ದುಬೆ ಪ್ರಕರಣ ಹಾಗೂ ತೆಲಂಗಾಣ ಪ್ರಕರಣದಲ್ಲಿ ಬಹಳ ವ್ಯತ್ಯಾಸವಿದೆ. ರೌಡಿ ವಿಕಾಸ್ ವಿರುದ್ಧ 64 ಪ್ರಕರಣಗಳಿದ್ದವು ಎಂದು ಹೇಳಿದ್ದಾರೆ.ಎಂಟು ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದನು. ದುಬೆ ಎನ್‌ಕೌಂಟರ್ ಕುರಿತು ಕೋರ್ಟ್ ಅಡಿ ಸಿಬಿಐ ತನಿಖೆ ಆಗಲಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್ ಮುಂದೆ ಬಂದಿದೆ.












Click it and Unblock the Notifications