ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಅಪಘಾತ ಪ್ರಕರಣ: ಕುಲದೀಪ್ ಸಿಂಗ್ ಖುಲಾಸೆ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಘಾತ ಪ್ರಕರಣದಲ್ಲಿ ಉತ್ತರ ಪ್ರದೇಶದ ಉಚ್ಛಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಸೇರಿದಂತೆ ಇತರೆ ಐವರನ್ನು ದೆಹಲಿ ನ್ಯಾಯಾಲಯವು ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲವೆಂದು ಖುಲಾಸೆಗೊಳಿಸಿದೆ. ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಆದೇಶದಲ್ಲಿ, ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರನ್ನು ಕೊಲ್ಲುವ ಬೆದರಿಕೆಯೊಡ್ಡಿ ಕ್ರಿಮಿನಲ್ ಪಿತೂರಿ ಮಾಡಿರುವ ಬಗ್ಗೆ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಆರೋಪ ಮಾಡಲು ಯಾವುದೇ ಪ್ರಾಥಮಿಕ ಪುರಾವೆಗಳಿಲ್ಲ ಎಂದಿದೆ.

ಅತ್ಯಾಚಾರ ಪ್ರಕರಣದಲ್ಲಿ ಸಹಾಯಕರಾದ ಜ್ಞಾನೇಂದ್ರ ಸಿಂಗ್, ಕೋಮಲ್‌ಸಿಂಗ್, ಅರುಣ್ ಸಿಂಗ್ , ರಿಂಕು ಸಿಂಗ್ ಮತ್ತು ಅವದೇಶ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಉನ್ನಾವೋ ಅತ್ಯಾಚಾರ ಕೇಸ್: ಬಿಜೆಪಿ ನಾಯಕ ಕುಲ್‌ದೀಪ್‌ ಸೇಂಗರ್‌ಗೆ 10 ವರ್ಷ ಜೈಲುಉನ್ನಾವೋ ಅತ್ಯಾಚಾರ ಕೇಸ್: ಬಿಜೆಪಿ ನಾಯಕ ಕುಲ್‌ದೀಪ್‌ ಸೇಂಗರ್‌ಗೆ 10 ವರ್ಷ ಜೈಲು

ಆದಾಗ್ಯೂ ಆರೋಪಿಗಳಾದ ಆಶಿಶ್ ಕುಮಾರ್ ಪಾಲ್, ವಿನೋದ್ ಮಿಶ್ರಾ, ಹರಿಪಾಲ್ ಸಿಂಗ್ ಮತ್ತು ನವೀನ್‌ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 506 ಅಡಿ ಬಂಧಿಸಲಾಗಿತ್ತು. ಜುಲೈ 28, 2019ರಂದು, ಅತ್ಯಾಚಾರ ಸಂತ್ರಸ್ತೆ, ಆಕೆಯ ವಲೀಕರು ಹಾಗೂ ಇಬ್ಬರು ಸಂಬಂಧಿಕರು ರಾಯ್ ಬರೇಲಿಗೆ ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿತ್ತು.

Unnao Accident Case: Kuldeep Singh Sengar Discharged By Delhi Court

ಸಂತ್ರಸ್ತೆ ಮತ್ತು ಆಕೆಯ ವಕೀಲರಿಗೆ ಗಂಭೀರ ಗಾಯಗಳಾಗಿದ್ದರೆ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಮತ್ತು ಇತರೆ 9 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. 2019ರ ಡಿಸೆಂಬರ್‌ನಲ್ಲಿ , ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್‌ಗೆ ಶಿಕ್ಷೆ ವಿಧಿಸಲಾಯಿತು. ಜತೆಗೆ 25 ಲಕ್ಷ ರೂ. ದಂಡ ವಿಧಿಸಲಾಗಿತ್ತು.

2017ರಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ ಪ್ರಕರಣವೊಂದರಲ್ಲಿ ಉನ್ನಾವೋದ ಬಂಗಾರ್‌ಮೌ ಕ್ಷೇತ್ರದಿಂದ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಮೇಲೆ ಅತ್ಯಾಚಾರ ಆರೋಪ ಹೊರಿಸಲಾಗಿತ್ತು.

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ವಿಶೇಷ ನ್ಯಾಯಾಲಯವು 2018ರಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳಲ್ಲಿ ಸೆಂಗಾರ್, ಅವರ ಸಹೋದರ ಅತುಲ್ ಸಿಂಗ್ ಹಾಗೂ ಇತರೆ ಐವರಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿತು.

ಆದ್ದರಿಂದ, ಅವರನ್ನು ಬಿಜೆಪಿಯಿಂದ ಹೊರಹಾಕಲಾಯಿತು, ವಿಚಾರಣಾ ನ್ಯಾಯಾಲಯವು ಅವರನ್ನುಅಪರಾಧಿ ಎಂದು ಘೋಷಿಸಿದ ಬಳಿಕ ವಿಧಾನಸಭೆಯ ಸದಸ್ಯರಾಗಿದ್ದ ಅವರು ಅನರ್ಹಗೊಂಡರು.

ಡಿಸೆಂಬರ್​ 16ರಂದು ಉನ್ನಾವೋ ಪ್ರಕರಣದಲ್ಲಿ ದೆಹಲಿ ಹೈ ಕೋರ್ಟ್​ ನೀಡಿದ್ದ ಮಹತ್ವದ ತೀರ್ಪನ್ನು ಆರೋಪಿ ಕುಲದೀಪ್​ ಸಿಂಗ್​ ಸೆಂಗರ್ ಪ್ರಶ್ನಿಸಿತ್ತು.​ ಬಿಜೆಪಿಯ ಮಾಜಿ ಶಾಸಕ ಕುಲ್ದೀಪ್​ ಸಿಂಗ್​ ಸೆಂಗರ್​ ಮೇಲೆದ್ದ ಅತ್ಯಾಚಾರ ಆರೋಪ ಸಾಬೀತಾದ ಹಿನ್ನಲೆ ಡಿಸೆಂಬರ್​ 16ರಂದು ದೆಹಲಿ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿತ್ತು. ನ್ಯಾಯಾಲಯದ ಈ ಮಹತ್ವದ ತೀರ್ಪು ದೇಶದ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಉನ್ನಾವೋ ಪ್ರಕರಣದ ಕೋರ್ಟ್​ ವಿಚಾರಣೆ ಪ್ರಕ್ರಿಯೆ ಹಂತಹಂತವಾಗಿ ಸಾಗಿ, ಎಲ್ಲಾ ಒಂದು ಹಂತಕ್ಕೆ ಬಂದು ವಿಚಾರಣೆಗೆ ಪೂರ್ಣ ಬಿಂದು ಬಿದ್ದಿತ್ತು. ಆದರೆ, ಮತ್ತೆ ಅಪರಾಧಿ ಕುಲ್ದೀಪ್​ ಸಿಂಗ್​ ಸೆಂಗರ್​ ತನಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆ ತೀರ್ಪನ್ನು ಪ್ರಶ್ನಿಸಿದ್ದರು.

2017ರಲ್ಲಿ ಅಪರಾಧಿ ಕುಲ್ದೀಪ್​ ಸಿಂಗ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ, ಅನಂತರ ಕೆಲವು ದಿನಗಳ ಬಳಿಕ ಮತ್ತೆ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಳು. ಈ ಪ್ರಕರಣದ ಬೆನ್ನಲ್ಲೇ ಕುಲ್ದೀಪ್​ ಅವರನ್ನುಬಿಜೆಪಿಯಿಂದ ಹೊರಹಾಕಲಾಗಿತ್ತು.

English summary
A Delhi court on Monday discharged expelled Uttar Pradesh MLA Kuldeep Singh Sengar in a case against him in which he was accused of masterminding a road accident in which the Unnao rape survivor who had filed rape case against him, was grievously injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X