Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು: ಹೊಸ ವಿಲನ್ ಎಂಟ್ರಿ, ಅಖಿಲಾಂಡೇಶ್ವರಿ ಸಿಹಿ ಮಾತು ತಲುಪುತ್ತಾ
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ವಿಲನ್ ಎಂಟ್ರಿಯಾಗಿದೆ. ಅಮೃತಧಾರೆ ಸೀರಿಯಲ್‌ನ ಇತ್ತೀಚಿನ ಎಪಿಸೋಡ್‌ಗಳನ್ನು ನೋಡಿದ್ದ ಪ್ರೇಕ್ಷಕರು ಫುಲ್ ಖುಷಿಯಾಗಿದ್ದರು. ಎಲ್ಲವೂ ಚೆನ್ನಾಗಿದೆ. ವಿಲನ್‌ಗಳಿಗೆ ಕರ್ಮಾ ರಿಟರ್ನ್ ಆಗಿದೆ. ವಿಲನ್‌ಗಳು ತಾವು ಮಾಡಿರುವ ಕರ್ಮಕ್ಕೆ ಪ್ರತಿಫಲ ಅನುಭವಿಸುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಈ ರೀತಿ ಇರುವಾಗಲೇ ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಪಡೆದುಕೊಂಡಿದೆ.
ಅಮೃತಧಾರೆಯಲ್ಲಿ ವಿಲನ್ ಕೆಡಿ ಜೈದೇವ್, ಶಾಕುಂತಲಾ ದೇವಿ ಹಾಗೂ ಶಕುನಿ ಮಾವ ಹಾಗೂ ಬೇಬಿ ಇದ್ದರು. ಆದರೆ ಇದೀಗ ಬೇಬಿ ಪ್ರತ್ಯೇಕವಾಗಿ ತನ್ನ ಪಾಡಿಗೆ ತಾನಿದ್ದಾಳೆ - ಜೈದೇವ್‌ಗೆ ಕಾಟ ಕೊಡುವುದಕ್ಕೆ ಶುರು ಮಾಡಿದ್ದಾಳೆ. ಶಾಕುಂತಲಾ ಹಾಗೂ ಶಕುನಿ ಮಾವ ಬದಲಾಗಿರುವಂತೆ ತೋರಿಸಲಾಗಿತ್ತು. ಆದರೆ ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಇದೀಗ ಹೊಸ ಟ್ವಿಸ್ಟ್ ಎದುರಾಗಿದೆ.

ಅಮೃತಧಾರೆ ಸೀರಿಯಲ್ ಇತ್ತೀಚಿನ ದಿನಗಳಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಗೌತಮ್ ಹಳೆಯ ಖದರ್‌ಗೆ ಮರುಳುತ್ತಿರುವುದು ಹಲವರಲ್ಲಿ ಸಂತೋಷವನ್ನುಂಟು ಮಾಡಿದೆ. ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತಿದ್ದು, ಅಮೃತಧಾರೆ ಸೀರಿಯಲ್ ವೀಕ್ಷಕರು ಖುಷಿಯಲ್ಲಿದ್ದಾರೆ. ಆದರೆ ಪ್ರೇಕ್ಷಕರಿಗೆ ಇನ್ನೂ ಒಂದು ಸಣ್ಣ ಡೌಟ್ ಇದ್ದೇ ಇದೆ. ಅದೇ ಅಮೃತಧಾರೆ ಸೀರಿಯಲ್‌ನಲ್ಲಿ ನಿಜಕ್ಕೂ ವಿಲನ್ ಯಾರು ಎನ್ನುವುದು.
ವಿಲನ್ ಆಗಿದ್ದ ಶಾಕುಂತಲಾ ಹಾಗೂ ಶಕುನಿ ಮಾವ ಬದಲಾಗಿರುವಂತೆ ತೋರಿಸಲಾಗಿತ್ತು. ಇಬ್ಬರೂ ಬದಲಾಗಿ, ಹೊಸ ಜೀವನ ಕಟ್ಟಿಕೊಳ್ಳುತ್ತಿರುವಂತೆ ಇತ್ತೀಚಿನ ಎಪಿಸೋಡ್‌ಗಳು ಮೂಡಿ ಬರುತ್ತಿದ್ದವು. ಆದರೆ, ಶಕುನಿ ಮಾವ ಮತ್ತೆ ವಿಲನ್ ಆಗುವಂತಹ ಸನ್ನಿವೇಶ ಎದುರಾಗಿದೆ. ಈ ಮೂಲಕ ಅಮೃತಧಾರೆಯ ನಿಜವಾದ ವಿಲನ್ - ಧುರಂದರ್ ಶಕುನಿ ಮಾವನೇ ಅಂತ ಪ್ರೇಕ್ಷಕರು ಹೇಳುತ್ತಿದ್ದಾರೆ.
ಖುಷಿ ಸುದ್ದಿ ಹಂಚಿಕೊಳ್ಳಲ್ಲವಾ ಶಕುನಿ ಮಾವ
ಇನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗೌತಮ್ ಬಾಳಲ್ಲಿ ಬೆಳಕಾಗಿ ಬಂದಿರುವ ಅಖಿಲಾಂಡೇಶ್ವರಿ ಅವರು ಗೌತಮ್ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುವುದಕ್ಕೆ ಕರೆ ಮಾಡಿದ್ದಾರೆ. ಈ ಎಪಿಸೋಡ್ ಅನ್ನು ಮಗಳೆಂಬ ಮುಗಿಲು ದಿವಾನ್ ಮನೆ ಸೇರೋ ಹೊತ್ತು, ಗೌತಮ್ - ಭೂಮಿಕಾ ಬದುಕಲ್ಲಿ ಶುರುವಾಗಲಿದೆ ಹೊಸ ಅಧ್ಯಾಯ! ಎನ್ನುವ ಸುಂದರ ಸಾಲುಗಳೊಂದಿಗೆ ಜೀ ಕನ್ನಡ ಹಂಚಿಕೊಂಡಿದೆ. ಅಖಿಲಾಂಡೇಶ್ವರಿ ಅವರು ಗೌತಮ್ ದಿವಾನ್‌ಗೆ ಸಿಹಿಸುದ್ದಿಯೊಂದನ್ನು ಹಂಚಿಕೊಳ್ಳುವುದಕ್ಕೆ ಕರೆ ಮಾಡಿದ್ದಾರೆ.
ಗೌತಮ್ ದಿವಾನ್ ಅವರು ಮೀಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಪಿಎ ಅವರ ಪೋನ್ ರಿಸೀವ್ ಮಾಡಿದ್ದಾರೆ. ಗೌತಮ್ ಅವರಿಗೆ ಸಿಹಿ ಸುದ್ದಿಯೊಂದನ್ನು ಹೇಳಬೇಕು ಅಂತ ಅಖಿಲಾಂಡೇಶ್ವರಿ ಹೇಳಿದ್ದಾರೆ. ಗೌತಮ್ ಬ್ಯುಸಿ ಇರುವುದರಿಂದ ಪಿಎ ಅವರು ಗೌತಮ್ ಅವರ ಮಾವನಿಗೆ ಫೋನ್ ಕೊಟ್ಟಿದ್ದಾರೆ. ಗೌತಮ್ ದಿವಾನ್ ಅವರ ಮಗಳ ವಿಷಯವನ್ನು ಹೇಳುವುದಾಗಿ ಅವರು ಹೇಳಿದ್ದಾರೆ. ಇದಕ್ಕೆ ಶಕುನಿ ಮಾವ ಯಾವ ಮಗು ಅಂತ ಕೇಳಿದ್ದು, ಇದಕ್ಕೆ ಕಾಣೆಯಾದ ಗೌತಮ್ ಅವರ ಮಗಳ ವಿಚಾರ, ನಾನು ಒಂದು ವಿಳಾಸ ಕೊಡುತ್ತೇನೆ ಅದನ್ನು ಮಿಸ್ ಮಾಡಬೇಡಿ ಅಂತ ಅಖಿಲಾಂಡೇಶ್ವರಿ ಅವರು ಹೇಳಿದ್ದಾರೆ. ಶಕುನಿ ಮಾವ ಅಖಿಲಾಂಡೇಶ್ವರಿ ಅವರು ಕೊಟ್ಟ ವಿಳಾಸವನ್ನು ಬರೆದುಕೊಂಡಿದ್ದಾನೆ.
ಹೊಸ ತಿರುವಿನಲ್ಲಿ ಅಮೃತಧಾರೆ ಎಂದು ತೋರಿಸಲಾಗಿದೆ. ಭೂಮಿಕಾ ಹಾಗೂ ಗೌತಮ್ ಅವರ ಮಗಳು ಮಿಂಚು ಎನ್ನುವುದು ಪ್ರೇಕ್ಷಕರ ನಿರೀಕ್ಷೆ. ಆದರೆ ಮಿಂಚುನೇ ಗೌತಮ್ ಹಾಗೂ ಭೂಮಿಕಾ ಅವರ ಮಗಳು ಎನ್ನುವ ವಿಚಾರವು ಇನ್ನೂ ಬಹಿರಂಗವಾಗಿಲ್ಲ. ಮಗಳನ್ನು ಹುಡುಕುವ ವಿಚಾರದಲ್ಲಿ ಶಕುನಿ ಮಾವ ಏನಾದರೂ ಕಳ್ಳಾಟ ಆಡಲಿದ್ದಾರೆಯೇ ಎನ್ನುವ ಅನುಮಾನ ಇದೀಗ ಶುರುವಾಗಿದೆ.
ಅಲ್ಲದೆ ಸಿಹಿ ಸುದ್ದಿಯನ್ನು ಶಕುನಿ ಮಾವನಿಗೆ ಸಿಗುವಂತೆ ಆಗಿರುವುದು ಮುಂದೆ ರೋಚಕ ತಿರುವು ಇರುವ ಸಾಧ್ಯತೆ ಇದೆ ಎಂದು ಪ್ರೇಕ್ಷಕರು ಡಿಕೋಡ್ ಮಾಡುತ್ತಿದ್ದಾರೆ. ಈಚೆಗೆ ಜೈಲಿನಿಂದ ಜೈದೇವ್ ಬಿಡುಗಡೆಗೂ ಶಕುನಿ ಮಾವನೇ ಮುಂದಾಳತ್ವ ವಹಿಸಿದ್ದ. ಹೀಗಾಗಿ, ಅಮೃತಧಾರೆಯಲ್ಲಿ ಶಕುನಿ ಮಾವ ಬದಲಾಗಿಲ್ಲ, ಮತ್ತೆ ತನ್ನ ಕಳ್ಳಾಟಗಳನ್ನು ಶುರು ಮಾಡಲಿದ್ದಾನೆಯೇ ಎನ್ನುವ ಅನುಮಾನ ಶುರುವಾಗಿದೆ.













Click it and Unblock the Notifications