ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ; ಮೆಜೆಸ್ಟಿಕ್-ದೇವನಹಳ್ಳಿ ಲೈನ್‌ಗೆ ಅನುಮೋದನೆ: ಅಶ್ವಿನಿ ವೈಷ್ಣವ್

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯಡಿ (BSRP) ಎರಡು ಕಾರಿಡಾರ್ ನಿರ್ಮಾಣ ಪ್ರಗತಿಯಲ್ಲಿದೆ, ಉಳಿದೆರಡು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 'ಸಂಪಿಗೆ' ಮಾರ್ಗಕ್ಕೆ ಅನುಮೋದನೆ ನೀಡಿವೆ. ಇದರೊಂದಿಗೆ ಭೂತಾಂತ್ರಿಕ ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಪ್ಡೇಟ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿ ಅವರು ಭಾನುವಾರ ಮಾತನಾಡಿದರು. ಈ ವೇಳೆ ಬೆಂಗಳೂರು ಉಪನಗರ ರೈಲು ಯೋಜನೆಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್)-ದೇವನಹಳ್ಳಿ (ಸಂಪಿಗೆ ಕಾರಿಡಾರ್) ಜೋಡಣೆಗೆ ರಾಜ್ಯ ಸರ್ಕಾರ ಮತ್ತು ರೈಲ್ವೆಗಳು ಜಂಟಿಯಾಗಿ ಅನುಮೋದಿಸಿವೆ ಎಂದರು.

Bengaluru Suburban Rail

ಪರಿಜಾತ ಮಾರ್ಗ: ಸಮೀಕ್ಷೆ ಆರಂಭ ಶೀಘ್ರ

ಸಂಪಿಗೆ ಕಾರಿಡಾರ್ ನ ಭೂತಾಂತ್ರಿಕ ಸಮೀಕ್ಷೆಗಳು ಪೂರ್ಣಗೊಂಡಿವೆ. ಇನ್ನೂ ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದ್ದ ಕೆಂಗೇರಿ-ವೈಟ್‌ಫೀಲ್ಡ್ (ಪಾರಿಜಾತ ಕಾರಿಡಾರ್) ಜೋಡಣೆಯ ಸಮೀಕ್ಷೆಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಹೇಳಿದರು. ಇದರಿಂದ ಬಿಎಸ್‌ಆರ್‍‌ಪಿ ಯೋಜನೆಗೆ ಹೆಚ್ಚಿನ ವೇಗ ಸಿಗುವುದು ಖಚಿತವಾದಂತಾಗಿದೆ.

Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?
Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?

ಬೆಂಗಳೂರು ದಟ್ಟಣೆಗೆ ನಿಯಂತ್ರಿಸಲು, ಹೆಚ್ಚುತ್ತಿರುವ ಜನಸಂಖ್ಯೆಗೆ ವ್ಯವಸ್ಥಿತ ಸಾರಿಗೆ ಒದಗಿಸುವ ಮಹತ್ತರ ಉದ್ದೇಶದಿಂದ ನಾಲ್ಕು ಕಾರಿಡಾರ್‍‌ಗಳ ಉಪನಗರ ಯೋಜನೆ ಆರಂಭಿಸಲಾಗಿದೆ. ನಾಲ್ಕು ಮಾರ್ಗಗಳಲ್ಲಿಯೂ ಕೆಲಸ ಆರಂಭವಾಗಿದೆ. ಕನಕ, ಮಲ್ಲಿಗೆ ಮಾರ್ಗದಲ್ಲಿ ಕೆಲಸ ಬರದಿಂದ ಸಾಗಿದೆ ಎಂದರು.

ಉಪನಗರ ರೈಲು ಯೋಜನೆ ಸಂಕ್ಷಿಪ್ತ ವಿವರ

* ಮಲ್ಲಿಗೆ ಮಾರ್ಗ: ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ 25ಕಿಮೀ

* ಸಂಪಿಗೆ ಮಾರ್ಗ: ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್)-ದೇವನಹಳ್ಳಿ 41.4ಕಿಮೀ.

* ಪಾರಿಜಾತ ಮಾರ್ಗ: ಕೆಂಗೇರಿ-ವೈಟ್‌ಫಿಲ್ಡ್‌ 35.5 ಕಿಮೀ.

* ಕನಕ ಮಾರ್ಗ: ರಾಜಾನುಕುಮಟೆ-ಹೀಲಲಿಗೆವರೆಗೆ 46.2 ಕಿಮೀ.
ಒಟ್ಟು 148 ಕಿಮೀ ಯೋಜನೆಯನ್ನು 2031ರ ಹೊತ್ತಿಗೆ ಅನುಷ್ಠಾನಕ್ಕೆ ತರುವ ಗುರಿ ಇದೆ.

ಶೀಘ್ರವೇ ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್:ಸಚಿವ

ಬೆಂಗಳೂರು-ಮುಂಬೈ ನಡುವೆ ನೇರ ಸೂಪರ್ ಫಾಸ್ಟ್ ರೈಲು ಸಂಪರ್ಕ ಸಾಧ್ಯವಾಗಿದೆ. ಇದೇ ಮೇ 23ರಿಂದ ವಾರದಲ್ಲಿ ಎರಡು ದಿನ ಕಾರ್ಯಾಚರಣೆ ಆರಂಭಿಸಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬೆಂಗಳೂರು-ಮುಂಬೈಗೆ ಹೊಸ ನೇರ ರೈಲಿಗೆ ಗ್ರೀನ್ ಸಿಗ್ನಲ್; ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲ್ ಕಾರಿಡಾರಿಗೆ ಬೇಡಿಕೆ
ಬೆಂಗಳೂರು-ಮುಂಬೈಗೆ ಹೊಸ ನೇರ ರೈಲಿಗೆ ಗ್ರೀನ್ ಸಿಗ್ನಲ್; ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲ್ ಕಾರಿಡಾರಿಗೆ ಬೇಡಿಕೆ

ಇದೇ ಎರಡು ಮಹಾನಗರಗಳ ಮಧ್ಯೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Express Sleeper Train) ಘೋಷಣೆ ಆಗಿದೆ. ಈ ರೈಲು ಆಂಧ್ರ ಗಡಿಮಾರ್ಗವಾಗಿ ಕರ್ನಾಟಕದ ಕಲಬುರಗಿ, ಯಾದಗಿರಿ ಮಾರ್ಗವಾಗಿ ಮಹಾರಾಷ್ಟ್ರದ ಮುಂಬೈ ತಲುಪಲಿದೆ. ಆದಷ್ಟು ಶೀಘ್ರವೇ ಈ ರೈಲು ಕಾರ್ಯಾಚರಣೆ ಆರಂಭಿಸಲಿದೆ ಎಂದರು. ಈ ಮೂಲಕ ರೈಲ್ವೆ ಇಲಾಖೆಯಿಂದ ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ನೀಡುವ ಸುಳಿವು ಅವರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+