ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು

By Mahesh
|
Google Oneindia Kannada News

ನವದೆಹಲಿ, ಜ.17: ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆರೋಪ-ಪ್ರತ್ಯಾರೋಪ ಘಟನೆಯಲ್ಲಿ ತೊಡಗಿದ್ದ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರು ಸಾವನ್ನಪ್ಪಿದ್ದಾರೆ. ದೆಹಲಿಯ ಖಾಸಗಿ ಹೋಟೆಲ್ ವೊಂದರಲ್ಲಿ ಸುನಂದಾ ಶವ ಶುಕ್ರವಾರ ರಾತ್ರಿ ಪತ್ತೆಯಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಪತ್ನಿ ಸುನಂದಾ ಅವರು 'Don't take Life too Seriously' ಎಂಬ ಕಟ್ಟಕಡೆಯ WhatsApp ಸ್ಟೇಟಸ್ ಸಂದೇಶ ಬಿಟ್ಟು ಅವರು ಕೊನೆಯುಸಿರೆಳೆದಿದ್ದಾರೆ. ನಿನ್ನೆಯಷ್ಟೇ ದೆಹಲಿಯ ಲೀಲಾ ಹೋಟೆಲ್ ಗೆ ಬಂದಿದ್ದ 52 ವರ್ಷದ ಸುನಂದಾ ಅವರು ರೂಮ್ ನಂ.345ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ರೂಮಿನಲ್ಲಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಸುನಂದಾ ಹಾಗೂ ಶಶಿ ತರೂರ್ ಅವರ ನಡುವೆ ದಾಂಪತ್ಯ ಕಲಹ ಹೆಚ್ಚಾಗಿತ್ತು. ಸುನಂದಾ ಅವರು ಶಶಿ ಮೇಲೆ ಮುನಿಸಿಕೊಂಡು ಟ್ವೀಟ್ ಮಾಡಿದ್ದರು. ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಜತೆ ಶಶಿ ತರೂರ್ ಅಕ್ರಮ ಸಂಬಂಧ ಇದೆ ಎಂದು ಸುನಂದಾ ಅವರು ಶಶಿ ಟ್ವಿಟ್ಟರ್ ಖಾತೆ ಬಳಸಿ ಟ್ವೀಟ್ ಮಾಡಿದ್ದರು. ಆದರೆ, ಸುನಂದಾ ಆರೋಪವನ್ನು ಅಲ್ಲಗೆಳೆದಿದ್ದ ಮೆಹರ್ ಅವರು ಸುನಂದಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. [ಸುನಂದಾ ಮೆಹರ್ ಟ್ವಿಟ್ಟರ್ ಪ್ರಸಂಗ]

2010ರಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ತನ್ನ ಬಹುಕಾಲದ ಗೆಳತಿ ಸುನಂದ ಪುಷ್ಕರ್ ಅವರೊಂದಿಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿವಾಹವಾಗಿದ್ದರು. ಪುಷ್ಕರ್ ಅವರು ಇದಕ್ಕೂ ಮುನ್ನ ಕಾಶ್ಮೀರಿಯೊಬ್ಬರನ್ನು ವಿವಾಹವಾಗಿದ್ದರು ಬಳಿಕ ಮಲೆಯಾಳಿ ಉದ್ಯಮಿಯೊಬ್ಬರ ಜೀವನದಲ್ಲಿ ಬಾಳಸಂಗಾತಿಯಾಗಿ ಪ್ರವೇಶಿಸಿದ್ದರು. ದುಬೈ ಮೂಲದ ವಿಮೆ ಮತ್ತು ಇನ್ವೆಸ್ಟ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ರಸ್ತೆ ಅಪಘಾತದಲ್ಲಿ ಸಾವಪ್ಪಿದ್ದ. ತರೂರ್ ಅವರನ್ನು ಮದುವೆಯಾಗುವ ಮೂಲಕ ಹೊಸ ಬಾಳಿಗೆ ಅಡಿಯಿಟ್ಟಿದ್ದರು. ಇಬ್ಬರು ಮದುವೆಯಾಗಿ 7 ವರ್ಷಗಳು ಕಳೆದಿಲ್ಲ. ಹೀಗಾಗಿ, ಪತ್ನಿ ಅಸಹಜ ಸಾವು ಪ್ರಕರಣದ ತನಿಖೆಯನ್ನು ವಸಂತ ವಿಹಾರ ಉಪವಿಭಾಗಾಧಿಕಾರಿ ಸಿ ಆರ್ ಪಿಸಿ 176 ಅನ್ವಯ ತನಿಖೆ ನಡೆಸುತ್ತಿದ್ದಾರೆ. ಇದರ ಜತೆಗೆ ಸರೋಜಿನಿನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 ಶಶಿ ಪತ್ನಿ ಸುನಂದಾ ಅನುಮಾನಾಸ್ಪದ ಸಾವು

ಶಶಿ ಪತ್ನಿ ಸುನಂದಾ ಅನುಮಾನಾಸ್ಪದ ಸಾವು

2010ರಲ್ಲಿ ಕೊಚ್ಚಿ ತಂಡ ಕೊಳ್ಳಲು 50-70 ಕೋಟಿ ರು ಸುನಂದಾ ವ್ಯಯಿಸಿದ್ದರು. ಕೊಚ್ಚಿ ಫ್ರಾಂಚೈಸಿಗೆ ಸಂಬಂಧಿಸಿದಂತೆ ಅಂದಿನ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಮತ್ತು ಶಶಿ ತರೂರ್ ಅವರ ನಡುವಿನ ಜಟಾಪಟಿ ನಡೆದಿತ್ತು. ಕೊಚ್ಚಿ ತಂಡ ಕೊಳ್ಳಲು ಆಸಕ್ತಿವಹಿಸಿರುವ ಶಶಿ ಅವರ ಪ್ರೇಯಸಿ ಸುನಂದಾ ಪುಷ್ಕರ್ ಅವರ ಹೆಸರನ್ನು ಮೋದಿ ಪ್ರಸ್ತಾಪಿಸಿದ್ದೇ ಇಬ್ಬರ ನಡುವಿನ ಕದನಕ್ಕೆ ನಾಂದಿ ಹಾಡಿತ್ತು.

ಯಾರೀಕೆ ಮೆಹರ್ ತರಾರ್?

ಯಾರೀಕೆ ಮೆಹರ್ ತರಾರ್?

ಲಾಹೋರ್ ಮೂಲದ ಮೆಹರ್ ತರಾರ್ ಅವರು ಡೈಲಿ ಟೈಮ್ಸ್ ನಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ಹಲವಾರು ಪ್ರಮುಖ ದೈನಿಕ ಪತ್ರಿಕೆಗಳಿಗೂ ಅಂಕಣಗಳನ್ನು ಬರೆದಿದ್ದಾರೆ. ಇದೆಲ್ಲಕ್ಕಿಂತ ನಾನೊಬ್ಬ ಗೃಹಿಣಿ, ಮಗುವಿನ ತಾಯಿ ಎಂದು ಹೇಳಿಕೊಳ್ಳುವ ಮೆಹರ್ ಈಗ ಸುನಂದಾ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

ಐಎಸ್ ಐ ಏಜೆಂಟ್ ಎಂದಿರುವ ಸುನಂದಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. Meeting Shashi Tharoor ಹೆಸರಿನಲ್ಲಿ ಲೇಖನ ಬರೆದಾಗ ಅವರೊಟ್ಟಿಗೆ ನನ್ನ ಸಖ್ಯ ಬೆಳೆಯಿತು. ಅವರ ರಾಜಕೀಯ ನಿಲುವು ನನಗಿಷ್ಟ. ಆದರೆ, ಸುನಂದಾ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದರು.

'ವ್ಹಾ.. ಕ್ಯಾ ಗರ್ಲ್‌ಫ್ರೆಂಡ್ ಹೈ! : ಮೋದಿ

'ವ್ಹಾ.. ಕ್ಯಾ ಗರ್ಲ್‌ಫ್ರೆಂಡ್ ಹೈ! : ಮೋದಿ

'ವ್ಹಾ.. ಕ್ಯಾ ಗರ್ಲ್‌ಫ್ರೆಂಡ್ ಹೈ! ಆಪ್ನೆ ಕಭೀ ದೇಖಾ 50 ಕರೋಡ್ ಕಾ ಗರ್ಲ್‌ಫ್ರೆಂಡ್ ಎಂದು ಕೇಂದ್ರ ಸಂಪುಟಕ್ಕೆ ಮರಳಿದ್ದ ಕೇರಳದ ಶಶಿ ತರೂರ್ ಅವರ ವೈಯಕ್ತಿಕ ಜೀವನದ ಕುರಿತು ಲೇವಡಿಯಾಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಶಶಿ ತರೂರ್ ತಿರುಗೇಟು ನೀಡಿದ್ದಾರೆ. 'ಅಲ್ಲಾ ಸ್ವಾಮಿ! ನಿಮ್ಮ (ಮೋದಿ) ಎಣಿಕೆಯಲ್ಲಿ ಕೇವಲ 50 ಕೋಟಿ ಅಷ್ಟೇನಾ ಇರೋದು. ಆಕೆ ನನ್ನ ಅಮೂಲ್ಯ. ಬೆಲೆಕಟ್ಟಲಾಗದಂತಹುದು' ಎಂದು ತಮ್ಮ ಗೆಳತಿಯ ಬಗ್ಗೆ ಕೆಣಕಿದ ಮೋದಿಗೆ ಶಶಿ ತಿರುಗೇಟು ನೀಡಿದ್ದರು[ವಿವರ ಓದಿ]

ಆರ್ಮಿ ಅಫೀಸರ್ ಮಗಳು ಸುನಂದಾ

ಆರ್ಮಿ ಅಫೀಸರ್ ಮಗಳು ಸುನಂದಾ

ಕಾಶ್ಮೀರದ ಬೊಮಾಯಿಯ ಜಮೀನ್ದಾರಿ ಕುಟುಂಬದ ಆರ್ಮಿ ಆಫೀಸರ್ ಪುತ್ರಿ ಸುನಂದಾ. ದುಬೈನಲ್ಲಿ ಸುನಂದಾ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಇದೆ. 1989ರಲ್ಲಿ ಕಾಶ್ಮೀರವನ್ನು ತೊರೆದಾಗಿನಿಂದಲೂ ಕುಟುಂಬಕ್ಕೆ ಆರ್ಥಿಕವಾಗಿ ಊರುಗೋಲಾಗಿದ್ದರು.

ತಂದೆ ಪಿ.ಎನ್ ದಾಸ್ ಲೆಫ್ಟಿನೆಂಟ್ ಕರ್ನಲ್ ಆಗಿ 1983ರಲ್ಲಿ ನಿವೃತ್ತರಾಗಿದ್ದವರು. ಆಕೆ ಇಬ್ಬರು ಸೋದರರು ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದಾರೆ. ಶ್ರೀನಗರದಲ್ಲಿ ಡಿಗ್ರಿ ವ್ಯಾಸಂಗ ಮಾಡಿದ ಸುನಂದಾ ಅವರ ಮೊದಲ ಪತಿ ಸಂಜಯ್ ರೈನಾ, ಎರಡನೇ ಪತಿ ಸುಜಿತ್ ಮೆನನ್. ದುಬೈನಲ್ಲಿ 21 ವರ್ಷದ ಶಿವಮೆನನ್ ಎಂಬ ಪುತ್ರನಿದ್ದಾನೆ.

ಮಧು ಕಿಶ್ವಾರ್ ಟ್ವೀಟ್ ನಲ್ಲಿ ಪ್ರಶ್ನೆ

ಸಾವಿನ ನಿಖರ ಕಾರಣ ತಿಳಿಯುವುದೇ ಇಲ್ಲ ಎಂದು ಮಧು ಕಿಶ್ವಾರ್ ಟ್ವೀಟ್

ಮಧು ಕಿಶ್ವಾರ್ ಟ್ವೀಟ್

ಸುನಂದಾ ಬಹಳಷ್ಟು ಸಂಗತಿ ತಿಳಿದಿದ್ದಳು ಅದೇ ಕಾರಣಕ್ಕೆ ಆಕೆಯನ್ನು ಎಲಿಮಿನೇಟ್ ಮಾಡಲಾಗಿದೆ

ಪಾಕಿಸ್ತಾನಿ ಮೆಹರ್ ತರಾರ್ ಪ್ರತಿಕ್ರಿಯೆ

ಪಾಕಿಸ್ತಾನಿ ಗೃಹಿಣಿ, ಪತ್ರಕರ್ತೆ ಮೆಹರ್ ತರಾರ್ ಅವರು ಸುನಂದಾ ಸಾವಿಗೆ ತಕ್ಷಣದ ಪ್ರತಿಕ್ರಿಯೆ ನೀಡಿದ್ದು ಹೀಗೆ

ಸುನಂದಾ ಸಾವಿನ ತನಿಖೆ ಎತ್ತ ಸಾಗಿದೆ

ಸುನಂದಾ ಸಾವಿನ ತನಿಖೆ ಎತ್ತ ಸಾಗಿದೆ

ಜಾಗತಿಕ ಮರಣ ತನಿಖೆ ಸಲಹೆಗಾರ ಡಾ.ದಿನೇಶ್ ರಾವ್ ಪ್ರಕಾರ, ಘಟನೆ ನಡೆದ
ರೂಮಿನೊಳಗೆ ಶಶಿ ತರೂರ್ ಸೇರಿದಂತೆ ಯಾರಿಗೂ ಪ್ರವೇಶ ನೀಡಿದ್ದರೆ ಅದಕ್ಕಿಂತ ದೊಡ್ಡ blunder ಮತ್ತೊಂದಿಲ್ಲ. ಮಾನಸಿಕ ವ್ಯಥೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೂ ಈಗ ಎಲ್ಲವು ಶಂಕೆ ಎಂದಷ್ಟೇ ಹೇಳಬಹುದು ಎಂದಿದ್ದಾರೆ.

ಪ್ರಾಥಮಿಕ ವರದಿಯಂತೆ ನಿನ್ನೆಯಿಂದ ಸುನಂದಾ ಲೀಲಾ ಹೋಟೆಲ್ ನಲ್ಲಿ ತಂಗಿದ್ದರು. ಒಟ್ಟು 2 ರೂಮ್ ಬುಕ್ ಆಗಿತ್ತು. ಶಶಿ ತರೂರ್ ಅವರು ರೂಮಿಗೆ ಬಂದು ಕೆಲ ಹೊತ್ತು ಇದ್ದು ಹೋದರು. ಇಂದು ಜೈಪುರದ ಸಾಹಿತ್ಯ ಫೆಸ್ಟ್ ಗೆ ಹೋಗಬೇಕಿದ್ದ ಶಶಿ, 'ಪತ್ನಿಗೆ ಹುಷಾರಿಲ್ಲ ನಾನು ಹೋಗುತ್ತಿಲ್ಲ' ಎಂದಿದ್ದರು.

ಆದರೆ, ರೂಮಿನಲ್ಲಿ ಪತ್ನಿ ಬಳಿ ಇರಲಿಲ್ಲ. ಶುಕ್ರವಾರ ಮಧ್ಯಾಹ್ನ3.30ರ ಸುಮಾರಿಗೆ ರೂಮಿನಿಂದ ಸುನಂದಾ ಹೊರ ಬಂದಿದ್ದರು. ರಾತ್ರಿ 7.30ಕ್ಕೆ ರೂಮ್ ಸರ್ವೀಸ್ ನಿಲ್ಲಿಸಲಾಗಿತ್ತು. 8.30ರ ಸುಮಾರಿಗೆ ಅನುಮಾನ ಬಂದ ಕಾರಣ 345 ಸಂಖ್ಯೆ ರೂಮ್ ಬಾಗಿಲು ಹೊಡೆದು ಹೋಟೆಲ್ ಸಿಬ್ಬಂದಿ ಒಳ ಹೊಕ್ಕಿದ್ದಾರೆ. ಸುನಂದಾ ಅವರು ಸಾವನ್ನಪ್ಪಿರುವುದು ಕಂಡು ಬಂದಿದೆ. ಡ್ರೈವರ್, ಸಹಾಯಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಶಶಿ ತರೂರ್ ಲೇಟೆಸ್ಟ್ ಟ್ವೀಟ್

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಕಾಂಡ ಭಾಷಣದ ಬಗ್ಗೆ ಶಶಿ ತರೂರ್ ಅವರು ಸುಮಾರು 3 ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದಾರೆ. ಸುನಂದಾ ಸಾವಿನ ಸಂದರ್ಭದಲ್ಲಿ ಶಶಿ ಖಾತೆಯಿಂದ ಟ್ವೀಟ್ ಆಗಿದೆ.

English summary
Union Minister of State for Human Resource Development Shashi Tharoor' wife Sunanda Pushkar found dead at The Leela Hotel, Delhi today(Jan.17). Sarojininagar police, Delhi investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X